Home ಕ್ರೀಡೆ P.Cricket ವಾಪಸ್​ 4ನೇ ಸ್ಥಾನಕ್ಕೆ ರಾಹುಲ್, ಮಯಾಂಕ್ ಓಪನರ್?

ವಾಪಸ್​ 4ನೇ ಸ್ಥಾನಕ್ಕೆ ರಾಹುಲ್, ಮಯಾಂಕ್ ಓಪನರ್?

ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡ ಭಾರತಕ್ಕೆ ಗಾಯದ್ದೇ ದೊಡ್ಡ ತಲೆನೋವಾಗಿದೆ. ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ಹೊರನಡೆದಿದ್ದು ಆಯ್ತು, ಇದೀಗ ಆಲ್​ರೌಂಡರ್ ವಿಜಯ್ ಶಂಕರ್ ಕೂಡ ಇಂಜುರಿಯಿಂದಾಗಿ ವರ್ಲ್ಡ್​ಕಪ್​ನಿಂದಲೇ ಹೊರಬಂದಿದ್ದಾರೆ.
ಗಾಯಗೊಂಡಿರುವ ವಿಜಯ್ ಶಂಕರ್ ಬದಲಿಗೆ ಕನ್ನಡಿಗ ಮಯಾಂಕ್ ಅಗರ್​ವಾಲ್​ಗೆ ಚಾನ್ಸ್ ಸಿಕ್ಕಿದೆ. ವಿರಾಟ್ ಕೊಹ್ಲಿ ನೇತೃತ್ವದ 15 ಮಂದಿ ಸದಸ್ಯರ ತಂಡವನ್ನು ಅಗರ್​​ವಾಲ್ ಸೇರಿದ್ದಾರೆ.
ಮಯಾಂಕ್ ಆರಂಭಿಕ ಆಟಗಾರರಾಗಿ ಆಡುವ 11ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಮಯಾಂಕ್ ಅವರನ್ನು ಓಪನರ್ ಆಗಿ ಕಣಕ್ಕೆ ಇಳಿಸಿದ್ರೆ ಧವನ್ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಬಡ್ತಿ ಪಡೆದಿದ್ದ ಇನ್ನೊಬ್ಬ ಕನ್ನಡಿಗ ಕೆ.ಎಲ್ ರಾಹುಲ್ ತಮ್ಮ ಎಂದಿನ 4ನೇ ಕ್ರಮಾಂಕಕ್ಕೆ ವಾಪಸ್ ಹೋಗುವ ಸಾಧ್ಯತೆ ಇದೆ.
ಶಿಖರ್ ಧವನ್ ಟೂರ್ನಿಯಿಂದ ಹೊರ ನಡೆದ ಮೇಲೆ ಕಾಡಿದ್ದು 4ನೇ ಕ್ರಮಾಂಕದ ಸಮಸ್ಯೆ. ಯಾಕಂದ್ರೆ ಆ ಸ್ಥಾನದಲ್ಲಿ ಬ್ಯಾಟ್ ಬೀಸುತ್ತಿದ್ದ ರಾಹುಲ್ ಉಪನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವ ಹೊಣೆ ಹೊತ್ತರು. ಹಾಗಾಗಿ 4ನೇ ಕ್ರಮಾಂಕಕ್ಕೆ ಆಲ್​ರೌಂಡರ್ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಯಿತು. ವಿಜಯ್ ನಿರೀಕ್ಷಿತ ಪ್ರದರ್ಶನವನ್ನೂ ನೀಡಲಿಲ್ಲ. ಜೊತೆಗೆ ಗಾಯದ ಸಮಸ್ಯೆಯಿಂದ ಹೊರಗುಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಶಂಕರ್ ಬದಲು ಸ್ಥಾನ ಪಡೆದಿದ್ದ ರಿಷಬ್ ಪಂತ್ ಅವರನ್ನು ಕೇವಲ ಒಂದೇ ಮ್ಯಾಚ್​​ನಿಂದ ಅಳೆಯಲು ಆಗಲ್ಲವಾದ್ರೂ ಅವರು ಆರಂಭಿಕರಾಗಿಯಂತೂ ಕಣಕ್ಕೆ ಇಳಿಸಲಾಗದು. ಹಾಗಾಗಿ ಮಯಾಂಕ್ ಆರಂಭಿಕರಾಗಿ ಇಳಿದ್ರೆ, 4ನೇ ಕ್ರಮಾಂಕಕ್ಕೆ ರಾಹುಲ್ ಆಧಾರವಾಗುತ್ತಾರೆ. ಹೀಗಾಗಿ ಮುಂದಿನ ಮ್ಯಾಚ್​ನಲ್ಲಿ ಇಬ್ಬರು ಕನ್ನಡಿಗರು ಆಡುವ ಸಾಧ್ಯತೆ ಹೆಚ್ಚಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments