ರೋಹಿತ್ ಶರ್ಮಾ 24ನೇ ಸೆಂಚುರಿ..!

0
255
ಹಿಟ್​ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪಾಕ್ ವಿರುದ್ಧವೂ ಅಬ್ಬರಿಸಿದ್ದಾರೆ. ಪ್ರಸಕ್ತ ವಿಶ್ವಕಪ್​ನಲ್ಲಿ 2ನೇ ಶತಕವನ್ನು ರೋಹಿತ್ ಬಾರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 122 ರನ್​ ಬಾರಿಸಿದ್ದ ರೋಹಿತ್ ಇಂದು ಕೂಡ ಶತಕ ಸಿಡಿಸಿ ಆಟ ಮುಂದುವರೆಸಿದ್ದಾರೆ. ರೋಹಿತ್ ಅವರ 24ನೇ ಒಡಿಐ ಶತಕ ಇದಾಗಿದೆ.
ಟೀಮ್ ಇಂಡಿಯಾದ ಪರ ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರಲ್ಲಿ ರೋಹಿತ್ 3ನೇ ಸ್ಥಾನದಲ್ಲಿದ್ದಾರೆ. 49 ಸೆಂಚುರಿ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿ, 41 ಸೆಂಚುರಿ ಬಾರಿಸಿರುವ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ ರೋಹಿತ್ ಶರ್ಮಾ ಅವರ ಈ 24 ಸೆಂಚುರಿಗಳಲ್ಲಿ 3 ದ್ವಿಶತಕ ಒಳಗೊಂಡಿದೆ.
ಇನ್ನು ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಅರ್ಧ ಶತಕ (57) ರನ್ ಬಾರಿಸಿ ಪೆವಿಲಿಯನ್ ಸೇರಿದ್ದಾರೆ. ರೋಹಿತ್ ಜೊತೆಗೆ ವಿರಾಟ್ ಕೊಹ್ಲಿ ಕಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here