ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ..! ವಿಶ್ವಕಪ್ ನಲ್ಲಿ ನಮ್ದೇ ಹವಾ ಅಂತ ಸಾರಿದ ಕೊಹ್ಲಿ ಬಾಯ್ಸ್..!

0
1115

ಬದ್ಧವೈರಿ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೆ ಜಯಭೇರಿ ಬಾರಿಸಿದೆ. ಈ ಮೂಲಕ ವಿಶ್ವಕಪ್​​​​ ಟೂರ್ನಿಗಳಲ್ಲಿ 7ನೇ ಬಾರಿ ಪಾಕ್ ಮಣಿಸಿ ಅಜೇಯ ದಾಖಲೆ ಉಳಿಸಿಕೊಂಡಿದೆ. ಜೊತೆಗೆ ಚಾಂಪಿಯನ್ಸ್ ಟ್ರೋಫಿ ಫೈನಲ್​​​ನಲ್ಲಿ ಅನುಭವಿಸಿದ್ದ ಸೋಲಿಗೆ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿದೆ.
ಭಾರತ ಗೆದ್ದೇ ಗೆಲ್ಲುತ್ತೆ ಎಂದು ಸಮಸ್ತ ಭಾರತ ಸಾರಿ ಹೇಳುತ್ತಿತ್ತು. ವಿಶ್ವಕಪ್​​​ನಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆಲುವಿನ ಅಜೇಯ ದಾಖಲೆ ಉಳಿಸಿಕೊಂಡಿದೆ. ವಿಶ್ವಕಪ್​​​​​​ನಲ್ಲಿ 7ನೇ ಬಾರಿಯೂ ಪಾಕಿಸ್ತಾನವನ್ನ ಸೋಲಿಸಿ ನಮ್ದೇ ಹವಾ ಅಂತಾ ಸಾರಿ ಹೇಳಿದೆ.
ಪಾಕಿಸ್ತಾನ ನಾಯಕ ಸರ್ಫರಾಜ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಷ್ಟೇ ಬಂತು. ಆಮೇಲಿಂದ ಟೀಮ್ ಇಂಡಿಯಾದ್ದೇ ಗುಡುಗು-ಸಿಡಿಲು-ಮಿಂಚು. ಮಳೆರಾಯನ ಆತಂಕದ ನಡುವೆಯೂ ಬ್ಲೂ ಬಾಯ್ಸ್​​​​​​, ಬಿಂದಾಸ್ ಬ್ಯಾಟಿಂಗ್ ಮಾಡಿದ್ರು. ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್​​.ರಾಹುಲ್ ಜಬರ್ದಸ್ತ್​ ಜೊತೆಯಾಟವಾಡಿದ್ರು. ಮೊದಲ ವಿಕೆಟ್​​​ಗೆ 136 ರನ್​​ಗಳು ಹರಿದುಬಂದ್ವು.
ಕೆ.ಎಲ್​​.ರಾಹುಲ್ ತಾಳ್ಮೆಯ 57 ರನ್ ಗಳಿಸಿ ಔಟಾದ್ರು.
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 85 ಎಸೆತಗಳಲ್ಲಿ ಶತಕ ಬಾರಿಸಿದ್ರು. ಇದರೊಂದಿಗೆ ಒಂಡೇಯಲ್ಲಿ 24ನೇ, ಈ ವಿಶ್ವಕಪ್​​​​ನಲ್ಲಿ 2ನೇ ಸೆಂಚುರಿ ಸಿಡಿಸಿದ್ರು. ಅಂತಿಮವಾಗಿ 140 ರನ್ ಗಳಿಸಿ ಔಟಾದ್ರು.
ಕ್ಯಾಪ್ಟನ್ ವಿರಾಟ್ ಕೊಹ್ಲಿ ರಿಸ್ಕಿಲ್ಲದೇ ಬ್ಯಾಟಿಂಗ್ ಮಾಡಿ 51ನೇ ಹಾಫ್ ಸೆಂಚುರಿ ಸಿಡಿಸಿದ್ರು. ಇದೇ ವೇಳೆ ಒಂಡೇ ಕ್ರಿಕೆಟ್​​ನಲ್ಲಿ 11 ಸಾವಿರ ರನ್ ಗಳಿಸಿದ್ರು. ಕೇವಲ 222 ಇನ್ನಿಂಗ್ಸ್​​​​ಗಳಲ್ಲಿ ಈ ಸಾಧನೆ ಮಾಡಿ ವಿಶ್ವದಾಖಲೆ ಬರೆದ್ರು.
ಹಾರ್ದಿಕ್ ಪಾಂಡ್ಯ ಶಾರ್ಟ್ & ಸ್ವೀಟಾಗಿ 26 ರನ್ ಗಳಿಸಿದ್ರೆ, ಉಳಿದವರು ಅಲ್ಪಸ್ವಲ್ಪ ಕಾಣಿಕೆ ನೀಡಿ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಲು ನೆರವಾದ್ರು. ಭಾರತ 50 ಓವರ್​​​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಜಮಾಯಿಸ್ತು.
ಚಾಲೆಂಜಿಂಗ್ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನಕ್ಕೆ ವಿಜಯ್ ಶಂಕರ್​​​ ಮೊದಲ ಶಾಕ್ ನೀಡಿದ್ರು. ಇಮಾಮ್ ಉಲ್ ಹಕ್ ಕೇವಲ 7 ರನ್ ಗಳಿಸಿ ಔಟಾದ್ರು. ಆರಂಭಿಕ ಶಾಕ್ ನಂತರ ಪಾಕಿಸ್ತಾನಕ್ಕೆ ಫಖರ್ ಜಮಾನ್ ( 62)ಹಾಗೂ ಬಾಬರ್ ಅಜಂ (48) ಚೇತರಿಕೆ ನೀಡಿದ್ರು.ಆದರೆ ತಮ್ಮ ತಂಡವನ್ನು ಗೆಲುವಿನತ್ತ ಕೊಂಡಯ್ಯಲು ಆಗಲಿಲ್ಲ. ಮಳೆ ಅಡ್ಡಿಪಡಿಸಿದ್ರಿಂದ ವಾಸಿಂ 46 ,ರನ್ ಗಳಿಸಿ ಅಜೇಯರಾಗಿ ಉಳಿದ್ರು.
ಮಳೆಯಿಂದಾಗಿ 40 ಓವರ್ ಗಳಿಗೆ ಪಾಕ್ 302 ರನ್ ಮಾಡಬೇಕೆಂದು ಗುರಿ ನೀಡಲಾಯ್ತು. ಪಾಕ್ 40 ಓವರ್ ಗೆ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಅಂತಿಮವಾಗಿ ಡಿಎಲ್ ಎಸ್ ಮೆತೆಡ್ ಅನುಸಾರ ಭಾರತ 89 ರನ್ ಗಳಿಂದ ಗೆದ್ದು ಬೀಗಿತು.

LEAVE A REPLY

Please enter your comment!
Please enter your name here