ಭಾರತ-ನ್ಯೂಜಿಲೆಂಡ್ ಮ್ಯಾಚ್​​ಗೂ ಬಿಡದ ವರುಣ..!

0
286

ವಿಶ್ವಕಪ್​ನಲ್ಲಿ ವರುಣನದ್ದೇ ಆರ್ಭಟ. ಈಗಾಗಲೇ 3 ಪಂದ್ಯಗಳನ್ನು ರದ್ದು ಮಾಡಿದ್ದ ಮಳೆರಾಯ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಮ್ಯಾಚ್​ ಗೂ ಅಡ್ಡಿಪಡಿಸುವ ಮೂಲಕ ನಾಲ್ಕನೇ ಮ್ಯಾಚ್​ ಅನ್ನು ಆಹುತಿ ಪಡೆದಿದ್ದಾನೆ.
ಹೌದು, ನಾಟಿಂಗ್ಯಾಮ್​ನ ಟ್ರೆಂಟ್​ ಬ್ರಿಡ್ಜ್​ ಸ್ಟೇಡಿಯಂ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮ್ಯಾಚ್​​ಗೆ ರೆಡಿಯಾಗಿತ್ತು. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿತ್ತು. ರೋಚಕ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಾ ಇದ್ರು. ಆದ್ರೆ, ಮಳೆ ಅಡ್ಡಿಪಡಿಸಿದೆ. ಟಾಸ್ ಕೂಡ ಆಗದೆ ಪಂದ್ಯ ರದ್ದಾಗಿದೆ.
ಈಗಾಗಲೇ ಶ್ರೀಲಂಕಾ-ಪಾಕಿಸ್ತಾನ, ಸೌತ್​-ಆಫ್ರಿಕಾ-ವೆಸ್ಟ್​ಇಂಡೀಸ್​​, ಶ್ರೀಲಂಕಾ – ಬಾಂಗ್ಲಾದೇಶ ನಡುವಿನ ಮ್ಯಾಚ್​ಗಳು ಮಳೆಯಿಂದ ರದ್ದಾಗಿದ್ದವು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವೂ ವರುಣನ ಆರ್ಭಟದಿಂದ ರದ್ದಾಗಿದ್ದು, ಟೂರ್ನಿಯಲ್ಲಿ 18 ಮ್ಯಾಚ್​ ಗಳಲ್ಲಿ 4 ಮ್ಯಾಚ್​ ಗಳು ರದ್ದಾದಂತಾಗಿದೆ.

LEAVE A REPLY

Please enter your comment!
Please enter your name here