Home ಕ್ರೀಡೆ P.Cricket 2008ರ ಅಂಡರ್​-19 ವರ್ಲ್ಡ್​​​ಕಪ್​ ನೆನಪಿಸುತ್ತಿದೆ ಇಂದಿನ ಸೆಮಿಫೈನಲ್​..!

2008ರ ಅಂಡರ್​-19 ವರ್ಲ್ಡ್​​​ಕಪ್​ ನೆನಪಿಸುತ್ತಿದೆ ಇಂದಿನ ಸೆಮಿಫೈನಲ್​..!

ಅದು 2008ರ ಅಂಡರ್​​-19 ವಿಶ್ವಕಪ್​ ಟ್ರೊಫಿ ಸೆಮಿಫೈನಲ್​. ಭಾರತ- ನ್ಯೂಜಿಲೆಂಡ್​ ಸೆಮಿಫೈನಲ್​ ಫೈಟ್​​ನಲ್ಲಿ ಮುಖಾಮುಖಿಯಾಗಿದ್ವು. ಭಾರತಕ್ಕೆ ವಿರಾಟ್​ ಕೊಹ್ಲಿ ನಾಯಕತ್ವವಾದ್ರೆ, ಕಿವೀಸ್​​ ಬಳಗಕ್ಕೆ ಕೇನ್​ ವಿಲಿಯಮ್​ಸನ್​ ನೇತೃತ್ವ. ಇದೀಗ ಮತ್ತದೇ ತಂಡಗಳು ವಿಶ್ವಕಪ್​ ಹೋರಾಟದ ಸೆಮೀಸ್​ ಫೈಟ್​​ನಲ್ಲೇ ಮುಖಾಮುಖಿಯಾಗ್ತಿವೆ. ವಿಶೇಷ ಅಂದ್ರೆ, ಅದೇ ನಾಯಕರ ಮುಂದಾಳತ್ವದಲ್ಲಿ ಇಂದು ಉಭಯ ತಂಡಗಳು ಮತ್ತೆ ಸೆಮೀಸ್​ ಅಖಾಡದಲ್ಲಿ ಸೆಣೆಸಲಿವೆ.
ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಸೋತಿರುವ ಟೀಮ್​ಇಂಡಿಯಾ ಇಂದಿನ ಪಂದ್ಯದಲ್ಲೂ ಗೆದ್ದು ಫೈನಲ್​ಗೇರುವ ಹುಮ್ಮಸ್ಸಿನಲ್ಲಿದೆ. ತಂಡದ ಎಲ್ಲಾ ಆಟಗಾರರು ಆಲ್​ರೌಂಡಿಗ್​ ಪ್ರದರ್ಶನ ನೀಡ್ತಾ ಇದ್ದಾರೆ. ಆರಂಭಿಕರಾದ ರೋಹಿತ್​ ಶರ್ಮಾ, ಕನ್ನಡಿಗ ಕೆ ಎಲ್​ ರಾಹುಲ್​ ಎಚ್ಚರಿಕೆಯ ಆಟವಾಡ್ತಾ ಇದ್ರೆ, ನಾಯಕ ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ರಿಷಭ್​ ಪಂತ್​ ಬ್ಯಾಟಿಂಗ್​ ಬಲ ತಂಡಕ್ಕಿದೆ.
ಆದ್ರೆ ಮಧ್ಯಮದ ಕ್ರಮಾಂಕದಲ್ಲಿ ಸ್ಥಿರತೆ ಕಂಡುಕೊಳ್ಳುವಲ್ಲಿ ಕೊಹ್ಲಿ ಪಡೆ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್​ಇಂಡಿಯಾ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎಮ್​.ಎಸ್​​ ಧೋನಿ, ದಿನೇಶ್​​ ಕಾರ್ತಿಕ್​, ರಿಷಬ್​ ಪಂತ್​ ಜವಾಬ್ಧಾರಿಯುತ ಆಟವಾಡಬೇಕಿದೆ.
ಇನ್ನು ಟೀಮ್​ಇಂಡಿಯಾ ಬೌಲಿಂಗ್​ ವಿಭಾಗ ಉತ್ತಮ ಲಯದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಟೀಮ್​ಇಂಡಿಯಾ 3 ವೇಗಿಗಳು ಹಾಗೂ 1 ಸ್ಪಿನ್ನರ್​​ ಕಾಂಬಿನೇಷನ್​ನೊಂದಿಗೆ ಕಣಕ್ಕಿಳಿಯೋ ಸಾಧ್ಯತೆ ಹೆಚ್ಚಿದೆ. ಆದ್ರೆ ಸ್ಪಿನ್​ ಕೋಟಾದಲ್ಲಿ ಯುಜುವೇಂದ್ರ ಚಾಹಲ್​, ಕುಲ್​ದೀಪ್​ ಯಾದವ್​ ಇಬ್ಬರಲ್ಲಿ ಯಾರಿಗಿದೆ ಅವಕಾಶ ಅನ್ನೋದು ಕುತೂಹಲ ಮೂಡಿಸಿದೆ.
ಇತ್ತ ಟೂರ್ನಿಯ ಆರಂಭದಲ್ಲಿ ಜಯದ ಅಲೆಯಲ್ಲಿದ್ದ ನ್ಯೂಜಿಲೆಂಡ್​​ ಬಳಗ ಕಳೆದ 3 ಪಂದ್ಯಗಳಿಂದ ಸೋಲಿನ ಸುಳಿಗೆ ಸಿಲುಕಿದೆ. ಕಳೆದ 3 ಪಂದ್ಯದಲ್ಲೂ ಸೋಲುಂಡು ರನ್​ರೇಟ್​​ ಆಧಾರದಲ್ಲಿ ಸೆಮಿಸ್​ ಸ್ಥಾನಗಿಟ್ಟಿಸಿಕೊಂಡಿರುವ ಕಿವೀಸ್​ ಬಳಗವೂ ಬಲಿಷ್ಠವಾಗಿದೆ. ಹೀಗಾಗಿ ಹಾಲಿ ರನ್ನರ್​​ ಅಪ್​ ಬಳಗವನ್ನ ಸುಲಭವಾಗಿ ಪರಿಗಣಿಸುವಂತಿಲ್ಲ.
ಆದ್ರೆ ಮಾರ್ಟಿನ್​ ಗಪ್ಟಿಲ್​, ರಾಸ್​ ಟೇಲರ್​​, ಹೆನ್ರಿ ನಿಕೋಲಸ್​​ ಅಸ್ಥಿರ ಪ್ರದರ್ಶನ ನೀಡ್ತಾ ಇದಾರೆ. ನಾಯಕ ಕೇನ್​ ವಿಲಿಯಮ್​ಸನ್​ ಮಾತ್ರ ಕನ್ಸಿಸ್ಟೆಂಟ್​​ ಫರ್ಪಾಮೆನ್ಸ್​​​ ನೀಡ್ತಾ ಇದಾರೆ. ಆದರೂ ಕಿವೀಸ್​ ಬ್ಯಾಟ್ಸ್​ಮನ್​ಗಳು ಅಪಾಯಕಾರಿ. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್​ಇಂಡಿಯಾ ಬೌಲರ್​ಗಳ ಮೇಲೆ ಜವಾಬ್ದಾರಿ ಹೆಚ್ಚಿದೆ.
ಇನ್ನು ನ್ಯೂಜಿಲೆಂಡ್​ ಬೌಲಿಂಗ್​ ವಿಭಾಗ ಬಲಿಷ್ಠವಾಗಿದೆ. ಟ್ರೆಂಟ್​ ಬೋಲ್ಟ್​, ಲೂಕಿ ಫರ್ಗುಸನ್​, ಟಿಮ್​ ಸೌಥಿ, ಮಿಚೆಲ್​ ಸ್ಯಾಟ್ನೆರ್​​ ಬೌಲಿಂಗ್​ ಎದುರು ಟೀಮ್​ಇಂಡಿಯಾ ಬ್ಯಾಟ್ಸ್​ಮನ್​ಗಳು ಎಚ್ಚರಿಕೆಯ ಆಟವಾಡಬೇಕಿದೆ.
ಇನ್ನು ಏಕದಿನ ಇತಿಹಾಸದಲ್ಲಿ ಎರಡೂ ತಂಡಗಳು ನೆಕ್​ ಟು ನೆಕ್​ ಪೈಟ್​ ನಡೆಸಿವೆ. ಏಕದಿನ ಮಾದರಿಯಲ್ಲಿ ಉಭಯ ತಂಡಗಳು 106 ಮುಖಾಮುಖಿಯಾಗಿದ್ದು, 55 ಪಂದ್ಯಗಳಲ್ಲಿ ಭಾರತ ಗೆದ್ದಿದ್ರೆ, 45 ಪಂದ್ಯಗಳಲ್ಲಿ ಕಿವೀಸ್​​ ಜಯ ಸಾಧಿಸಿದೆ. ಇನ್ನುಳಿದ 5 ಪಂದ್ಯಗಳು ರದ್ದಾಗಿದ್ರೆ, 1 ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಆದ್ರೆ ವಿಶ್ವಕಪ್​ ಇತಿಹಾಸದಲ್ಲಿ ಭಾರತದ ವಿರುದ್ಧ ಕಿವೀಸ್​ ಬಳಗದ್ದೇ ಮೇಲುಗೈ.
ವಿಶ್ವಕಪ್​ನಲ್ಲಿ ಉಭಯ ತಂಡಗಳು ಒಟ್ಟು 8 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 3 ಬಾರಿ ಟೀಮ್​ಇಂಡಿಯಾ ಜಯಿಸಿದ್ರೆ, 4 ಪಂದ್ಯಗಳಲ್ಲಿ ನ್ಯೂಜಿಲೆಂಡ್​ ಗೆಲುವು ದಾಖಲಿಸಿದೆ. ಇನ್ನುಳಿದ 1 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಆದ್ರೆ ಈವರೆಗೆ 7 ಬಾರಿ ವಿಶ್ವಕಪ್​ ಸೆಮೀಸ್​ ಪ್ರವೇಶಿಸಿರುವ ನ್ಯೂಜಿಲೆಂಡ್​ ಕೇವಲ 1 ಬಾರಿ ಮಾತ್ರ ಗೆದ್ದಿದೆ. ಅಷ್ಟೇ ಅಲ್ಲ.. ಕಳೆದ ಫೆಬ್ರುವರಿಯಲ್ಲಿ ನ್ಯೂಜಿಲೆಂಡ್​ ತಂಡವನ್ನು ಅವರ ನೆಲದಲ್ಲೇ ಭಾರತ 4-1 ಅಂತರದಿಂದ ಸೋಲಿಸಿತ್ತು. ಇದು ಕೂಡ ನ್ಯೂಜಿಲೆಂಡ್ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ.
ಒಟ್ಟಾರೆ ಇಂದಿನ ಇಂಡೋ-ಕಿವೀಸ್​ ಫೈಟ್​​ ಲಾರ್ಡ್ಸ್​​ ಮೈದಾನದಲ್ಲಿ ಮುಂದಿನ ಭಾನುವಾರ ಕಣಕ್ಕಿಳಿರುವ ಒಂದು ತಂಡವನ್ನಂತೂ ನಿರ್ಧರಿಸಲಿದೆ. ಹೀಗಾಗಿ ಇಂದಿನ ಪಂದ್ಯ ರೋಚಕ ಘಟ್ಟ ತಲುಪೋದಂತೂ ಖಚಿತ. ಆದ್ರೆ ಇದಕ್ಕೆ ಮಳೆರಾಯ ಅವಕಾಶ ಮಾಡಿಕೊಡಬೇಕಷ್ಟೇ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments