ವಿಶ್ವಕಪ್​ನಲ್ಲಿ ಭಾರತದ ಕನಸು ಭಗ್ನ

0
420

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಭಾರತ ಮುಗ್ಗರಿಸಿದೆ. ಸೆಮಿಫೈನಲ್​ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 18ರನ್​ಗಳಿಂದ ಸೋಲನುಭವಿಸಿದ್ದು, ಕೋಟ್ಯಂತರ ಭಾರತೀಯರ ಕನಸು ಭಗ್ನವಾಗಿದೆ.
ಮ್ಯಾಂಚೆಸ್ಟರ್​ನ ಎಮಿರೇಟ್ಸ್​ ಓಲ್ಡ್​ ಟ್ರಾಫರ್ಡ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್​ನಲ್ಲಿ ನಿನ್ನೆ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 46.1 ಓವರ್​ಗಳಲ್ಲಿ 211ರನ್ ಮಾಡಿದ್ದಾಗ ಮಳೆ ಆಟಕ್ಕೆ ಅಡ್ಡಿಪಡಿಸಿತು. ಪರಿಣಾಮ ಇಂದಿಗೆ ಆಟವನ್ನು ಮುಂದೂಡಲಾಗಿತ್ತು. ನ್ಯೂಜಿಲೆಂಡ್ ತನ್ನ ಪಾಲಿನ 50 ಓವರ್ ಮುಗಿಸಿ 8 ವಿಕೆಟ್​ಗೆ 239ರನ್ ಮಾಡಿತು.
ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಎಡವಿತು. ಟೂರ್ನಿಯುದ್ದಕ್ಕೂ ಅದ್ಭುತ ಆಟವಾಡಿದ್ದ ರೋಹಿತ್ ಶರ್ಮಾ, ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ನಾಯಕ ಕೊಹ್ಲಿ ಕೇವಲ 1ರನ್​ ಮಾಡಿ ಪೆವಿಲಿಯನ್ ಸೇರಿದ್ರು. ದಿನೇಶ್ ಕಾರ್ತಿಕ್ 6ರನ್​ಗೆ ಔಟಾದ್ರು. ಭರವಸೆ ಮೂಡಿಸಿದ್ದ ರಿಷಭ್ ಪಂತ್ ಹೋರಾಟ 32ರನ್​ಗಳಿಗೆ ಅಂತ್ಯವಾಯ್ತು. ಹಾರ್ದಿಕ್ ಪಾಂಡ್ಯ ಬ್ಯಾಟ್​​ನಿಂದ ಸಿಡಿದಿದ್ದು ಕೂಡ 32ರನ್ ಮಾತ್ರ..! ರವೀಂದ್ರ ಜಡೇಜಾ (77) ಮತ್ತು ಮಹೇಂದ್ರ ಸಿಂಗ್ ಧೋನಿ (50) ತಂಡಕ್ಕೆ ಆಧಾರವಾಗಿ ನಿಂತರೂ ಅಂತಿಮ ಘಟ್ಟದಲ್ಲಿ ಎಡವಿದರು. ಭಾರತ ಇನ್ನೂ 3 ಬಾಲ್​ಗಳು ಬಾಕಿ ಇರುವಂತೆ 221ರನ್​ಗಳಿಗೆ ಆಲ್​ಔಟ್ ಆಯಿತು.

LEAVE A REPLY

Please enter your comment!
Please enter your name here