ವಿಶ್ವಸಮರದಲ್ಲಿಂದು ವಿಂಡೀಸ್​​-ಇಂಗ್ಲೆಂಡ್​ ಕಾದಾಟ

0
175

ವಿಶ್ವಕಪ್​ ಟೂರ್ನಿಯಲ್ಲಿಂದು ಮದಗಜಗಳ ಹೋರಾಟ. ದೈತ್ಯ ವೆಸ್ಟ್​ಇಂಡೀಸ್​​, ಬಲಿಷ್ಠ ಇಂಗ್ಲೆಂಡ್​​ ಪಂದ್ಯ ಅಂದ್ರೆ ಬ್ಯಾಟ್​​-ಬೌಲ್​ ನಡುವಿನ ಕದನವೇ ಸರಿ. ಆ​ ಯುದ್ಧಕ್ಕೆ ಸಾಕ್ಷಿಯಾಗಲಿದೆ ಸೌಥಂಪ್ಟನ್​ ರೋಸ್​​ ಬೌಲ್​​ ಮೈದಾನ.
ರೋಸ್​​ ಬೌಲ್​ – ಗುಲಾಬಿ ಬಟ್ಟಲಿನಲ್ಲಿ ಎರಡೂ ತಂಡಗಳು ಗೆಲುವಿಗಾಗಿ ಸೆಣಸಲಿವೆ. ಇದಕ್ಕೂ ಮೊದ್ಲು ಸೌತ್​ ಆಫ್ರಿಕಾ ವಿರುದ್ಧದ ವೆಸ್ಟ್​ಇಂಡೀಸ್​ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿದೆ. ಆದ್ರೆ ಇಂಗ್ಲೆಂಡ್​ ತಂಡ ಬಾಂಗ್ಲಾ ಹುಲಿಗಳ ಎದುರು 106 ರನ್​ಗಳ ಜಯ ಸಾಧಿಸಿದ ವಿಶ್ವಾಸದಲ್ಲಿದೆ.
ಆಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್​​ಗಳಿಂದ ಜಯಿಸಿತ್ತು ವಿಂಡೀಸ್​ ಬಳಗ. ಬಳಿಕ ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಮುಗ್ಗರಿಸಿತ್ತು. ನಂತರದ 3ನೇ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿದೆ. ಈ ಮೂಲಕ 3 ಅಂಕಗಳೊಂದಿಗೆ ಪಾಯಿಂಟ್ಸ್​​ ಟೇಬಲ್​ನಲ್ಲಿ 6ನೇ ಸ್ಥಾನದಲ್ಲಿರುವ ವಿಂಡೀಸ್​ ಗೆಲುವಿನ ಪಣತೊಟ್ಟಿದೆ.
ಇತ್ತ ಅತಿಥೇಯ ಇಂಗ್ಲೆಂಡ್​ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿತ್ತು. ಆದ್ರೆ ಪಾಕ್​ ವಿರುದ್ಧದ 2ನೇ ಪಂದ್ಯದಲ್ಲಿ ಸೋಲುಂಡು ಹಿನ್ನಡೆ ಅನುಭವಿಸ್ತು. ಆದ್ರೆ ಬಾಂಗ್ಲಾದೇಶ ವಿರುದ್ಧದ 3ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿ ಕಮ್​ಮ್ಯಾಕ್​ ಮಾಡಿದ್ದ ಆಂಗ್ಲ ಪಡೆ, ವಿಂಡೀಸ್​​ ವಿರುದ್ಧವೂ ಗೆಲುವನ್ನ ಎದುರು ನೋಡುತ್ತಿದೆ.
ಉಭಯ ತಂಡಗಳು ಆಡಿರೋ 106 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್​​ 51 ರಲ್ಲಿ ಜಯಸಿದ್ರೆ, 44 ಪಂದ್ಯಗಳಲ್ಲಿ ವಿಂಡೀಸ್​ ಗೆದ್ದಿದೆ. ಉಳಿದ 6 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಇದಲ್ಲದೇ ವಿಶ್ವಕಪ್​ ಇತಿಹಾಸದ ಕಳೆದ 5 ಪಂದ್ಯಗಳಲ್ಲೂ ವಿಂಡೀಸ್​ ಬಳಗವನ್ನ ಇಂಗ್ಲೆಂಡ್​ ಮಣಿಸಿದೆ.
ವಿಶ್ವಕಪ್​ನಲ್ಲಿ ವಿಂಡೀಸ್​ ವಿರುದ್ಧ ಇಂಗ್ಲೆಂಡ್
ಪಂದ್ಯ 6
ಗೆಲುವು 5
ಸೋಲು 1
ವಿಶ್ವಕಪ್​ ಇತಿಹಾಸದಲ್ಲಿ ವೆಸ್ಟ್​ಇಂಡೀಸ್​​-ಇಂಗ್ಲೆಂಡ್​ ತಂಡಗಳು ಒಟ್ಟು 6 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 1979ರಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ವೆಸ್ಟ್​ಇಂಡೀಸ್​ ಗೆದ್ದಿದ್ದು ಹೊರತುಪಡಿಸಿದ್ರೆ, ಉಳಿದ 5 ಪಂದ್ಯದಲ್ಲೂ ಇಂಗ್ಲೆಂಡ್​​ ಗೆಲುವು ದಾಖಲಿಸಿದೆ.
ಬ್ಯಾಟಿಂಗ್​,ಬೌಲಿಂಗ್​ ಎರಡೂ ವಿಭಾಗದಲ್ಲಿ ಉಭಯ ತಂಡಗಳು ಬಲಿಷ್ಠವಾಗಿವೆ. ಕ್ರಿಸ್​ಗೇಲ್​, ಶಿಮ್ರೋನ್​ ಹೆಟ್ಮೆಯರ್​​, ಶಾಯ್​ ಹೋಪ್​ ವಿಂಡೀಸ್​​ ಬಳಗದ ಬ್ಯಾಟಿಂಗ್​ ಬಲವಾಗಿದೆ. ಶತಕ ಸಿಡಿಸಿ ಮಿಂಚಿರುವ ಜೋ ರೂಟ್​, ಜಾಸನ್​ ರಾಯ್​ ಹಾಗೂ ನಾಯಕ ಜಾಸ್​ ಬಟ್ಲರ್​​ ಬಲವೇ ಆಂಗ್ಲ ಪಡೆಯ ಬ್ಯಾಟಿಂಗ್​ ಬೆನ್ನೆಲುಬಾಗಿದೆ.
ಓಶಾನೆ ಥಾಮಸ್​, ಶೆಲ್ಡನ್​ ಕಾಟ್ರಲ್​, ನಾಯಕ ಜೇಸನ್​ ಹೋಲ್ಡರ್​​ ಒಳಗೊಂಡ ವಿಂಡೀಸ್​​ ಬೌಲಿಂಗ್​ ಪಡೆ ಬಲಿಷ್ಠವಾಗಿದೆ. ಇತ್ತ ಲೈಮ್​ ಪ್ಲುಂಕೆಟ್ ಕ್ರಿಸ್​ ವೋಕ್ಸ್​​, ಜೋಫ್ರಾ ಆರ್ಚರ್​​ ಅತಿಥೇಯ ತಂಡದ ಬೌಲಿಂಗ್​ ಅಸ್ತ್ರ. ಆಲ್​ರೌಂಡರ್​ ವಿಭಾಗದಲ್ಲೂ ಎರಡೂ ತಂಡಗಳು ಬೆಸ್ಟ್​​ ಪರ್ಫಾರ್ಮರ್​​ಗಳನ್ನೇ ಹೊಂದಿವೆ. ಬೆನ್​​ ಸ್ಟೋಕ್ಸ್​​​​, ಆಂಡ್ರೆ ರಸೆಲ್​ ಪಂದ್ಯದ ಸೆಂಟರ್​ ಆಫ್​ ಅಟ್ರ್ಯಾಕ್ಷನ್​.
ಒಟ್ಟಿನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿರುವ ತಂಡಗಳ ಬಿಗ್​ ಫೈಟ್​​ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಬ್ಯಾಟ್​​ ಮತ್ತು ಬೌಲ್​ಗಳ ನಡುವಿನ ಕದನದಲ್ಲಿ ಗೆದ್ದು ಬೀಗೋರ್ಯಾರು ಅನ್ನೋದು ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here