Home ಕ್ರೀಡೆ P.Cricket ವರ್ಲ್ಡ್​​​ಕಪ್​​ ಫಸ್ಟ್​ ಮ್ಯಾಚ್​ನಲ್ಲೇ ದ.ಆಫ್ರಿಕಾಕ್ಕೆ ಇಂಗ್ಲೆಂಡ್​ 'ಸ್ಟ್ರೋಕ್' ..!

ವರ್ಲ್ಡ್​​​ಕಪ್​​ ಫಸ್ಟ್​ ಮ್ಯಾಚ್​ನಲ್ಲೇ ದ.ಆಫ್ರಿಕಾಕ್ಕೆ ಇಂಗ್ಲೆಂಡ್​ ‘ಸ್ಟ್ರೋಕ್’ ..!

ವಿಶ್ವಕಪ್​​​ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್​​​ ಶುಭಾರಂಭ ಮಾಡಿದೆ. ಪ್ರಬಲ ದಕ್ಷಿಣ ಆಫ್ರಿಕಾವನ್ನು 104 ರನ್​ಗಳಿಂದ ಮಣಿಸುವ ಮೂಲಕ ಇಂಗ್ಲೆಂಡ್​ ಗೆಲುವಿನಿಂದ ವರ್ಲ್ಡ್​ಕಪ್ ಅಭಿಯಾನವನ್ನು ಆರಂಭಿಸಿದೆ. ಹಾಗಾದ್ರೆ 2019ರ ಚೊಚ್ಚಲ ಪಂದ್ಯ ಹೇಗಿತ್ತು? ಯಾರು ಹೇಗೆ ಆಡಿದ್ರು ಅನ್ನೋದನ್ನು ನೋಡ್ಕೊಂಡು ಬರೋಣ ಬನ್ನಿ.

ಕ್ರಿಕೆಟ್​ ಪ್ರಿಯರು ಬರೋಬ್ಬರಿ ನಾಲ್ಕು ವರ್ಷದಿಂದ ಕಾಯ್ತ ಇದ್ದ ಆ ದಿನ ನಿನ್ನೆ ಬಂದೇ ಬಿಟ್ಟಿದೆ. ಐಸಿಸಿ ವಿಶ್ವಕಪ್ ಹಬ್ಬ ಶುರುವಾಗಿದೆ. ಅತಿಥೇಯ ಇಂಗ್ಲೆಂಡ್​ ಮತ್ತು ವಿಶ್ವ ಕ್ರಿಕೆಟ್​​ನ ಪ್ರಬಲ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾ ಉದ್ಘಾಟನ ಪಂದ್ಯದಲ್ಲಿ ಮುಖಾಮುಖಿಯಾದವು.

ಲಂಡನ್​ನ ಕಿಂಗ್​ಸ್ಟನ್ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪ್ರವಾಸಿ ಸೌತ್​ಆಫ್ರಿಕಾ ಮೊದಲು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ದಕ್ಷಿಣ ಆಫ್ರಿಕಾ ನೀಡಿದ ಆಹ್ವಾನದ ಮೇರೆಗೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ಗೆ ಆರಂಭದಲ್ಲೇ ಶಾಕ್ ಕಾದಿತ್ತು.

ತಂಡಕ್ಕೆ ಕೇವಲ 1 ರನ್ ಸೇರುವಷ್ಟರಲ್ಲೇ ಆರಂಭಿಕ ಆಟಗಾರ , ಜಾನಿ ಬೈರ್​ಸ್ಟೋ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ರು. ವೇಗಿ ತಾಹಿರ್​ ತಮ್ಮ ತಂಡಕ್ಕೆ ಮೊದಲ ಯಶಸ್ಸು ತಂದು ಕೊಟ್ರು.
ರಾಯ್​, ರೂಟ್​ ಅಬ್ಬರಕ್ಕೆ ದ.ಆಫ್ರಿಕಾ ಬೌಲರ್​ಗಳ ಪರದಾಟ
ಇಯಾನ್, ಸ್ಟ್ರೋಕ್​ ಕೂಡ ಕೊಟ್ರು ಕಾಟ

ಸೌತ್​ ಆಫ್ರಿಕಾದ ಆರಂಭಿಕ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಮತ್ತೊಬ್ಬ ಓಪನರ್ ಜೇಸನ್ ರಾಯ್​ ಅವರನ್ನು ಜೊತೆಯಾದ ಜೇಸನ್ ರೂಟ್​​ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದ್ರು. ಈ ಜೋಡಿ 106ರನ್​ಗಳ ಜೊತೆಯಾಟವಾಡಿತು. ಈ ಹಂತದಲ್ಲಿ 54ರನ್​ ಗಳಿಸಿ ಆಡುತ್ತಿದ್ದ ರಾಯ್ ಅಂಡಿಲ್ ಫೆಹ್ಲುಕ್ವೇವೊ ಅವರ ಎಸೆತದಲ್ಲಿ ಡುಪ್ಲೆಸಿಸ್​ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು. ಅವರ ಬೆನ್ನಲ್ಲೇ ರೂಟ್​​ ರಬಡಾಗೆ ವಿಕೆಟ್​ ಒಪ್ಪಿಸಿದ್ರು.

111 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಾಗ ನಾಯಕ ಇಯಾನ್ ಮಾರ್ಗನ್ ಮತ್ತು ಬೆನ್​ ಸ್ಟ್ರೋಕ್​ ಜೊತೆಯಾಗಿ ಇಂಗ್ಲೆಂಡ್​ ಅನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಿದ್ರು. ಈ ಜೋಡಿ ಕೂಡ ಶತಕದ ಜೊತೆಯಾಟವಾಡಿತು. ಸ್ಟ್ರೋಕ್ 9 ಬೌಂಡರಿಗಳನ್ನು ಒಳಗೊಂಡ 89ರನ್ ಸಿಡಿಸಿ ಮಿಂಚಿದ್ರು. ನಾಯಕ ಮಾರ್ಗನ್ 57ರನ್ ಮಾಡಿದ್ರು. ನಂತರ ಬಂದ ಬ್ಯಾಟ್ಸ್​ಮನ್ ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಜಾಸ್ ಬಟ್ಲರ್ 18, ಮೋಯಿನ್ ಅಲಿ 3, ವೋಕ್ಸ್ 13 ರನ್ ಗಳಿಸಿದ್ರು. ಲ್ಯಾಮ್ ಪ್ಲಂಕೆಟ್​​ 9, ಆರ್ಚರ್ 7ರನ್ ಮಾಡಿ ಅಜಯರಾಗಿ ಉಳಿದ್ರು. ಅಂತಿಮವಾಗಿ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 311ರನ್ ಗಳಿಸಿತು.

ಇನ್ನು ಇಂಗ್ಲೆಂಡ್ ನೀಡಿದ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಆರಂಭಿಕರಾದ ಕ್ವಿಂಟನ್ ಡಿಕಾಕ್ ಮತ್ತು ಹಸಿಮ್​ ಆಮ್ಲ ಉತ್ತಮ ಅಡಿಪಾಯ ಹಾಕುವ ಸೂಚನೆ ನೀಡಿದ್ರು. ಆದರೆ, ಹಶೀಮ್ ಆಮ್ಲ ಗಾಯಗೊಂಡು ಪೆವಿಲಿಯನ್ ಸೇರಿದ್ದು ದೊಡ್ಡ ಹೊಡೆತ ಬಿತ್ತು. ಬಳಿಕ ತಂಡದ ಮೊತ್ತ 36 ರನ್ ಆಗುವಷ್ಟರಲ್ಲಿ ಆಮ್ಲ ಜಾಗಕ್ಕೆ ಬಂದಿದ್ದ ಆ್ಯಡಂ ಮರ್​ಕ್ರಂ ಆರ್ಚರ್​ ಗೆ ವಿಕೆಟ್ ಒಪ್ಪಿಸಿ ಪೆವಿಯನ್ ಸೇರಿದ್ರು. ನಾಯಕ ಫಾಫ್​ ಡುಪ್ಲೆಸಿಸ್​ ಕೂಡ ಫ್ಲಾಫ್ ಆದ್ರು.

ಸೌತ್ ಆಫ್ರಿಕಾ ಪರ ಡಿಕಾಕ್ 2 ಸಿಕ್ಸರ್​ 6 ಬೌಂಡರಿ ಸಮೇತ 68ರನ್ ಹಾಗೂ ರಸ್ಸಿ ವಾನ್​​​ ಡೆರ್ ಡಸ್ಸೆನ್ 1 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 50ರನ್ ಗಳಿಸಿ ಹೋರಾಡಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್​ಮನ್​ ಗಳಿಂದಲೂ ರನ್ ಮಳೆ ಸುರಿಸಲು ಇಂಗ್ಲೆಂಡ್ ಬೌಲರ್​ಗಳು ಬಿಟ್ಟುಕೊಡಲಿಲ್ಲ. ಆರಂಭದಲ್ಲಿ ಗಾಯಗೊಂಡಿದ್ದ ಹಶೀಮ್ ಆಮ್ಲ ವಾಪಸ್ ಬ್ಯಾಟಿಂಗ್​ ಗೆ ಇಳಿದರೂ ಬೃಹತ್ ಮೊತ್ತದ ಕೊಡುಗೆ ನೀಡಿ ತಂಡವನ್ನು ಗೆಲುವಿನ ಸಮೀಪ ಕೂಡ ಕೊಂಡಯ್ಯಲು ಆಗಲಿಲ್ಲ.

ಇಂಗ್ಲೆಂಡ್ ಸಂಘಟಿತ ದಾಳಿಗೆ ತಲೆಬಾಗಿ ಸೌತ್ ಆಫ್ರಿಕಾ ಕೇವಲ 207ರನ್​ ಗಳಿಗೆ ಆಲೌಟ್ ಆಯ್ತು. 89ರನ್ ಗಳಿಸಿದಲ್ಲದೆ ಬೌಲಿಂಗ್​ನಲ್ಲಿ ಸೌತ್ಆಫ್ರಿಕಾ ಬ್ಯಾಟ್ಸ್​ಮನ್ ಗಳನ್ನು ಇನ್ನಿಲ್ಲದಂತೆ ಕಾಡಿ 2 ವಿಕೆಟ್​ ಕಿತ್ತ ಬೆನ್ ಸ್ಟ್ರೋಕ್ಸ್​ ಪಂದ್ಯಪುರಷ ( ಮ್ಯಾನ್​ಆಫ್​ದಿ ಮ್ಯಾಚ್) ಪ್ರಶಸ್ತಿಗೆ ಭಾಜನರಾದ್ರು.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments