ಕೊನೆಗೂ ಗೆಲುವಿನ ಟ್ರ್ಯಾಕ್​ಗೆ ಮರಳಿದ ಪಾಕ್..!​

0
131

ಸತತ 11 ಏಕದಿನ ಪಂದ್ಯಗಳಿಂದ ಸೋಲುಂಡಿದ್ದ ಪಾಕಿಸ್ತಾನ ಇಂಗ್ಲೆಂಡ್​​ ವಿರುದ್ಧ ಗೆಲುವಿನ ಹಾದಿಗೆ ಮರಳಿತು. ವಿಶ್ವಕಪ್ ಟೂರ್ನಿಯ 6ನೇ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಿದ ಪಾಕಿಸ್ತಾನ 14 ರನ್​ಗಳ ಜಯ ಸಾಧಿಸಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನ ತಂಡಕ್ಕೆ ಇಮಾಮ್ ಉಲ್ ಹಕ್ ಹಾಗೂ ಫಕರ್ ಝಮಾನ್ ಮೊದಲ ವಿಕೆಟ್​​ಗೆ 82 ರನ್‌ಗಳ ಜೊತೆಯಾಟ ನೀಡಿದ್ರು. ಫಕರ್ ಝಮಾನ್​ 37 ರನ್​ಗಳಿಸಿ ಔಟಾದ್ರೆ, ಇಮಾಮ್​ ಉಲ್​ ಹಕ್​ 37 ರನ್​ಗಳಿಸಿ ಮೊಯಿನ್​ ಆಲಿಗೆ ವಿಕೆಟ್​​ ಒಪ್ಪಿಸಿದ್ರು.
ಬಳಿಕ ಜೊತೆಯಾದ ಬಾಬರ್ ಅಝಮ್ ಹಾಗೂ ಮೊಹಮ್ಮದ್ ಹಫೀಜ್ 88 ರನ್​ಗಳ ರನ್​ ಪೇರಿಸಿದ್ರು. ತಲಾ ಅರ್ಧಶತಕ ಸಿಡಿಸಿ ಮಿಂಚಿದ ಬಾಬರ್ ಹಾಗೂ ಹಫೀಜ್ ಇಂಗ್ಲೆಂಡ್​​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಬಾಬರ್​ 63 ರನ್ ಕಾಣಿಕೆ ನೀಡಿದರೆ, ಹಫೀಜ್ 84 ರನ್ ಸಿಡಿಸಿ ನಿರ್ಗಮಿಸಿದ್ರು.

ಇದರ ಬೆನ್ನಲ್ಲೇ ಆಸಿಫ್ ಆಲಿ 14 ರನ್ ಪೆವಿಲಿಯನ್​ಗೆ ಸೇರಿದ್ರು. ಆದ್ರೆ ನಾಯಕ ಸರ್ಫರಾಜ್ ಅಹಮದ್​ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ರು. ಸರ್ಫರಾಜ್ 55 ರನ್ ಸಿಡಿಸಿ ಔಟಾದರೆ, ಶೋಯೆಬ್ ಮಲ್ಲಿಕ್ ಕೇವಲ 8 ರನ್ ಸಿಡಿಸಿ ಔಟಾದರು. ಬಳಿಕ ಕಣಕ್ಕಿಳಿದ ವಹಾಬ್​ ರಿಯಾಜ್​ ಆಟ 4 ರನ್​ಗಳಿಗೆ ಅಂತ್ಯವಾಯ್ತು. ಅಂತಿಮವಾಗಿ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 348 ರನ್ ಸಿಡಿಸಿತು.

ಪಾಕ್​ ನೀಡಿದ ಬೃಹತ್​ ಟಾರ್ಗೆಟ್​​ ಬೆನ್ನತ್ತಿದ ಅತಿಥೇಯ ಇಂಗ್ಲೆಂಡ್​​ ಆರಂಭದಲ್ಲೇ ಎಡವಿತು. ಆರಂಭಿಕರಾಗಿ ಕಣಕ್ಕಿಳಿದ ಜೇಸನ್​ ರಾಯ್​​ ಶಬಾದ್​​ ಖಾನ್​ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ರು. ಈ ಮೂಲಕ ರಾಯ್​ ಆಟ 8 ರನ್​ಗಳಿಗೆ ಅಂತ್ಯವಾದ್ರೆ, 32 ರನ್​ಗಳಿಸಿ ಮುನ್ನುಗ್ಗುತ್ತಿದ್ದ ಜಾನಿ ಬೈರ್​ಸ್ಟ್ರೋ ವಹಾಬ್​ ರಿಯಾಜ್​ ಎಸೆತದಲ್ಲಿ ಸರ್ಫರಾಜ್​ಗೆ ಕ್ಯಾಚಿತ್ತು ನಿರ್ಗಮಿಸಿದ್ರು.
ಇದರ ಬೆನ್ನಲ್ಲೇ ನಾಯಕ ಇಯಾನ್​ ಮಾರ್ಗನ್​ ಕೂಡ ಪೆವಿಲಿಯನ್​ ಸೇರಿದ್ರು. ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದ ಬೆನ್​ಸ್ಟೋಕ್ಸ್​ ಆಟವೂ 13 ರನ್​ಗಳಿಗೆ ಅಂತ್ಯವಾಯ್ತು.
ನಂತರ ಜೊತೆಯಾದ ಜೋ ರೂಟ್​​ ಹಾಗೂ ಜಾಸ್​​ ಬಟ್ಲರ್​ ಶತಕದ ಜೊತೆಯಾಟ ಆಡಿ ತಂಡಕ್ಕೆ ಬಲ ತುಂಬಿದ್ರು. ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಬ್ಯಾಟ್ಸ್​​ಮನ್​ ಎಂಬ ಕೀರ್ತಿಗೆ ಪಾತ್ರರಾದ ರೂಟ್ ​107 ರನ್​ ಸಿಡಿಸಿದ್ರೆ, ಸೆನ್ಸೆಷನ್​ ಶತಕ ಸಿಡಿಸಿದ ಬಟ್ಲರ್​ 103 ರನ್​ಗಳಿಸಿ ಮಿಂಚಿದ್ರು.
ಬಟ್ಲರ್​​,ರೂಟ್​​ ಪತನದ ಬಳಿಕ ಮೊಯಿನ್​ ಆಲಿ ಹಾಗೂ ಕ್ರೀಸ್​​ ವೋಕ್ಸ್​ ಹೋರಾಟ ನಡೆಸಿದ್ರಾದರೂ ಫಲ ನೀಡಲಿಲ್ಲ. ಅಂತಿಮ ಹಂತದಲ್ಲಿ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ ಪರೇಡ್​​​ ನಡೆಸಿದ ಪರಿಣಾಮ ಇಂಗ್ಲೆಂಡ್​​ ನಿಗದಿತ ಓವರ್​ಗಳಲ್ಲಿ 9 ವಿಕೆಟ್​​ ಕಳೆದುಕೊಂಡು 334 ರನ್​ಗಳಿ 14 ರನ್​ ಅಂತರದ ಸೋಲುಂಡಿತು.

ಪಂದ್ಯದಲ್ಲಿ ಟಾಪ್ ಆರ್ಡರ್ ಹಾಗೂ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ಅದ್ಬುತ ಪ್ರದರ್ಶನ ಫಲವಾಗಿ ಪಾಕ್​ ವಿಶ್ವಕಪ್​ ಟೂರ್ನಿಯ ಮೊದಲ ಜಯ ಸಾಧಿಸಿದೆ. ಈ ಮೂಲಕ ಸತತ 11 ಪಂದ್ಯಗಳ ಸೋಲಿನಿಂದ ಹೊರ ಬಂದಿದೆ.

LEAVE A REPLY

Please enter your comment!
Please enter your name here