ಇಂಗ್ಲೆಂಡ್​ಗೆ ಶಾಕ್​ ನೀಡುತ್ತಾ ಕ್ರಿಕೆಟ್​ ಶಿಶು?

0
177

ವಿಶ್ವಸಮರದ 24ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ, ಇಂಗ್ಲೆಂಡ್​​ ತಂಡಗಳ ಮುಖಾಮುಖಿ. ಮ್ಯಾಂಚೆಸ್ಟರ್​​ ಮೈದಾನದಲ್ಲಿ ಅತಿಥೇಯ ಇಂಗ್ಲೆಂಡ್​ ತನ್ನ ಗೆಲುವಿನ ಓಟ ಮುಂದುವರೆಸಲು ಸಜ್ಜಾಗಿದೆ. ಅಫ್ಘನ್​ ಬಳಗ ಮೊದಲ ಗೆಲುವಿನ ಹುಡುಕಾಟದಲ್ಲಿದೆ.
ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಸೌತ್​ಆಫ್ರಿಕಾ ವಿರುದ್ಧ 104 ರನ್​ಗಳ ಜಯ ಸಾಧಿಸಿ ಶುಭಾರಂಭ ಮಾಡಿತ್ತು ಆಂಗ್ಲ ಪಡೆ. 2ನೇ ಫೈಟ್​​ನಲ್ಲಿ ಪಾಕ್​ ವಿರುದ್ಧ ಸೋಲುಂಡಿತ್ತು. ಬಳಿಕ ಬಾಂಗ್ಲಾದೇಶ ಹಾಗೂ ವೆಸ್ಟ್​ಇಂಡೀಸ್​​ ವಿರುದ್ಧ ಜಯಭೇರಿ ಬಾರಿಸಿರೋ ಇಂಗ್ಲೆಂಡ್​, ಮತ್ತೊಂದು ಗೆಲುವನ್ನ ಎದುರು ನೋಡುತ್ತಿದೆ.
ಇತ್ತ ಅಫ್ಘಾನಿಸ್ತಾನ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋಲುಂಡಿದೆ. ಆದ್ರೆ ಆ ನಾಲ್ಕು ಪಂದ್ಯಗಳಲ್ಲೂ ಹೋರಾಟ ನಡೆಸಿದೆ. ಹಾಗಾಗಿ ಅಫ್ಘನ್​ ಬಳಗವನ್ನ ಸುಲಭವಾಗಿ ಪರಿಗಣಿಸುವಂತಿಲ್ಲ ಇಂಗ್ಲೆಂಡ್​​. 
ಇಂಗ್ಲೆಂಡ್​-ಅಫ್ಘಾನಿಸ್ತಾನ ವಿಶ್ವಕಪ್​ನಲ್ಲಿ 1 ಬಾರಿ ಮುಖಾಮುಖಿಯಾಗಿವೆ. 2015ರ ವಿಶ್ವಕಪ್​ ಟೂರ್ನಿಯ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಅಫ್ಘನ್​, ಇಂಗ್ಲೆಂಡ್​ಗೆ ಸುಲಭದ ತುತ್ತಾಗಿತ್ತು. ಡಕ್​ ವರ್ತ್​​ ಲೂಯಿಸ್​ ನಿಯಮದಡಿ ಇಂಗ್ಲೆಂಡ್​ 9 ವಿಕೆಟ್​​ಗಳ ಗೆಲುವು ದಾಖಲಿಸಿತ್ತು.
 ಇಂಗ್ಲೆಂಡ್​ಗೆ ಇಂಜುರಿ ಆಘಾತ! : ಇಂದಿನ ಪಂದ್ಯದಲ್ಲಿ ಸುಲಭ ಜಯ ಎದುರು ನೋಡುತ್ತಿರುವ ಇಂಗ್ಲೆಂಡ್​​ ಬಳಗಕ್ಕೆ ಇಂಜುರಿ ಸಮಸ್ಯೆ ಕಾಡ್ತಾ ಇದೆ. ನಾಯಕ ಇಯಾನ್​ ಮಾರ್ಗನ್​ ಕಳೆದ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿ ಮೈದಾನದಿಂದಲೇ ಹೊರ ನಡೆದಿದ್ರು. ಇಂದಿನ ಪಂದ್ಯದಲ್ಲೂ ಮಾರ್ಗನ್​ ಅಲಭ್ಯತೆಯಲ್ಲಿ ​ಜಾಸ್​ ಬಟ್ಲರ್​ ತಂಡ ಮುನ್ನಡೆಸುವ ಸಾಧ್ಯತೆ ಇದೆ. ಇನ್ನು ಜೋ ರೂಟ್​ ಕೂಡ ಗಾಯದ ಸಮಸ್ಯೆಯಿಂದ ಕಣಕ್ಕಿಳಿಯೋದು ಡೌಟ್​..!
ಇಂಗ್ಲೆಂಡ್​ ಪರ ಬೆಸ್ಟ್​​ ಫಾರ್ಮ್​ನಲ್ಲಿರುವ ಜೋಫ್ರಾ ಅರ್ಚರ್​, ಮಾರ್ಕ್​ ವುಡ್​, ಕ್ರಿಸ್​ ವೋಕ್ಸ್​​ ಅಫ್ಘನ್​ ಬ್ಯಾಟ್ಸ್​​ಮನ್​ಗಳಿಗೆ ಸವಾಲಾಗಲಿದ್ದಾರೆ. ಆಂಗ್ಲರ ಬಲಿಷ್ಠ ಬೌಲಿಂಗ್​ ದಾಳಿಯನ್ನ ಅಫ್ಘನ್​ ಪಡೆ ಮೆಟ್ಟಿ ನಿಲ್ಲುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ಇತ್ತ ಇಂಗ್ಲೆಂಡ್​​ ಬ್ಯಾಟ್ಸ್​​ಮನ್​ಗಳಿಗೂ ಮೊಹಮದ್​ ನಬಿ, ರಶೀದ್​ ಖಾನ್​ರ ಸ್ಪಿನ್​ ದಾಳಿ ಕಠಿಣ ಸವಾಲಾಗಿದೆ. ಗೆಲುವಿನ ಹುಮ್ಮಸ್ಸಿನಲ್ಲೇ ಪ್ರತಿ ಪಂದ್ಯದಲ್ಲೂ ಕಣಕ್ಕಿಳಿಯುವ ಅಫ್ಘಾನಿಸ್ತಾನ ಆಂಗ್ಲರ ವಿರುದ್ಧವೂ ಜಯದ ಕನವರಿಕೆಯಲ್ಲಿದೆ.
ಗೆಲುವಿನ ಓಟವನ್ನ ಮುನ್ನಡೆಸುವ ಲೆಕ್ಕಾಚಾರದಲ್ಲಿರುವ ಇಂಗ್ಲೆಂಡ್​, ಅಫ್ಘಾನಿಸ್ತಾನ ತಂಡವನ್ನ ಸುಲಭವಾಗಂತೂ ಪರಿಗಣಿಸಿಲ್ಲ. ಇತ್ತ ಅಫ್ಘಾನಿಸ್ತಾನ ಪ್ರಬಲ ಇಂಗ್ಲೆಂಡ್​ ಮಣಿಸುವ ಹುಮ್ಮಸ್ಸಿನಲ್ಲೇ ಇದೆ. ಇದನ್ನ ಒನ್​ ಸೈಡೆಡ್​​ ಫೈಟ್​​ ಎಂದುಕೊಂಡ್ರೂ ಅಫ್ಘನ್​, ಆಂಗ್ಲರ ಬಳಗವನ್ನ ಹೇಗೆ ಎದುರಿಸುತ್ತೆ ಅನ್ನೋದು ಎಲ್ಲರ ಕುತೂಹಲವಾಗಿದೆ.

LEAVE A REPLY

Please enter your comment!
Please enter your name here