ಇಂದು ಲಂಕಾ VS ಬಾಂಗ್ಲಾ ಹಣಾಹಣಿ..! ತಂಡಗಳ ಬಲಾಬಲ ಏನು?

0
70

 ಯೆಸ್​​! ಒಂದೆಡೆ ಆಡಿದ 3 ಪಂದ್ಯಗಳಲ್ಲಿ 1 ಜಯ ಸಾಧಿಸಿ, 2ರಲ್ಲಿ ಸೋತಿರುವ ಬಾಂಗ್ಲಾದೇಶ. ಇನ್ನೊಂದೆಡೆ 3 ಪಂದ್ಯಗಳಲ್ಲಿ ತಲಾ 1 ಗೆಲುವು, ಸೋಲು ಕಂಡು ಒಂದು ಪಂದ್ಯದಲ್ಲಿ ವರುಣನ ಅವಕೃಪೆಗೆ ಒಳಗಾಗಿರೋ ಶ್ರೀಲಂಕಾ. ಹೀಗೆ ಗೆಲುವಿನ ಹುಡುಕಾಟದಲ್ಲಿರುವ ಉಭಯ ತಂಡಗಳು ಇಂದು ಮುಖಾಮುಖಿ ಆಗ್ತಿವೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​​ ವಿರುದ್ಧ 10 ವಿಕೆಟ್​​ಗಳ ಹೀನಾಯ ಸೋಲುಂಡ ಶ್ರೀಲಂಕಾ ತಂಡ, ಅಫ್ಘಾನಿಸ್ತಾನ ವಿರುದ್ಧದ 2ನೇ ಪಂದ್ಯದಲ್ಲಿ 5 ವಿಕೆಟ್​​ಗಳ ಜಯ ಸಾಧಿಸಿದೆ. ಆದ್ರೆ ನಂತರದ ಪಾಕಿಸ್ತಾನ ವಿರುದ್ಧದ ಪೈಟ್​​ ಮಳೆಯಲ್ಲಿ ಕೊಚ್ಚಿ ಹೋಗಿದೆ. 3 ಪಂದ್ಯವನ್ನಾಡಿ 3 ಅಂಕ ಸಂಪಾದಿಸಿರುವ ಲಂಕನ್ಸ್​​ ಪಡೆ ಜಯದ ಹುಡುಕಾಟದಲ್ಲಿದೆ.
ವಿಶ್ವದ ಘಟಾನುಘಟಿ ತಂಡಗಳಿಗೆ ಶಾಕ್ ನೀಡುವ ಸಾಮರ್ಥ್ಯ ಹೊಂದಿರುವ ಬಾಂಗ್ಲಾ ಪಡೆ ಈ ಬಾರಿಯ ವಿಶ್ವಕಪ್​ ನಲ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ 2 ಅಂಕಗಳಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಬಲಾಢ್ಯ ಸೌತ್ ಆಫ್ರಿಕಾಗೆ ಸೋಲಿನ ರುಚಿ ತೋರಿಸಿದ್ದ ತಂಡ, ನಂತರದ ಪಾಕಿಸ್ತಾನ, ಇಂಗ್ಲೆಂಡ್​​ ವಿರುದ್ಧದ ಪಂದ್ಯದಲ್ಲಿ ಸೋಲಿಗೆ ಶರಣಾಗಿತ್ತು.
ಇನ್ನು ವಿಶ್ವಕಪ್​ ಇತಿಹಾಸದಲ್ಲಿ ಉಭಯ ತಂಡಗಳು ಸಮ-ಬಲ ಸಾಧಿಸಿವೆ. ಆಡಿದ 6 ಪಂದ್ಯಗಳಲ್ಲಿ ಉಭಯ ತಂಡಗಳು 3 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಬ್ರಿಸ್ಟಲ್​ ಅಂಗಳದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಲಂಕಾ ಸೋಲುಂಡಿದ್ರೆ, ಆಡಿದ 1 ಪಂದ್ಯದಲ್ಲಿ ಬಾಂಗ್ಲಾ ಹುಲಿಗಳು ಗೆದ್ದು ಬೀಗಿದ್ದಾರೆ.
 ಲಂಕಾ ಪರ ನಾಯಕ ದಿಮುತ್​​ ಕರುಣರತ್ನೆ, ಕುಸಲ್​ ಪೆರೆರಾ, ಲಸಿತ್​​ ಮಲಿಂಗ ಹೊರತು ಪಡಿಸಿದ್ರೆ ಉಳಿದೆಲ್ಲಾ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಲಂಕಾ ಬಳಗದ ಟಾಪ್​ ಆರ್ಡರ್​​ ಬ್ಯಾಟ್ಸ್​​ಮೆನ್​​ಗಳು ಫಾರ್ಮ್​ ಕಂಡುಕೊಳ್ಳುವ ಒತ್ತಡದಲ್ಲಿದ್ದಾರೆ.
 ಇತ್ತ ಬಾಂಗ್ಲಾ ಪಡೆಗೆ ಸತತ ಎರಡು ಅರ್ಧಶತಕ ಹಾಗೂ ಇಂಗ್ಲೆಂಡ್​​ ವಿರುದ್ಧ ಫೈಟ್​ ಬ್ಯಾಕ್​ ಶತಕ ಸಿಡಿಸಿ ಉತ್ತಮ ಫಾರ್ಮ್​ನಲ್ಲಿರುವ ಉಪನಾಯಕ ಶಕಿಬ್ ಅಲ್ ಹಸನ್ ಪ್ರಮುಖ ಅಸ್ತ್ರ. ಜೊತೆಗೆ ವಿಕೆಟ್ ಕೀಪರ್ ಮುಷ್ಫೀಕರ್ ರಹೀಮ್​, ಸೌಮ್ಯ ಸರ್ಕಾರ್​ ಪ್ರಮುಖ ಬ್ಯಾಟಿಂಗ್ ಶಕ್ತಿ. ಇಂದಿನ ಪಂದ್ಯದಲ್ಲಿ ರುಬೆಲ್​ ಹುಸೇನ್​ ಕಣಕ್ಕಿಳಿಯುವ ಸಾಧ್ಯತೆ ಇರೋದು ತಂಡದ ಬೌಲಿಂಗ್​ ಬಲ ಹೆಚ್ಚಿಸಿದೆ.
 ಒಟ್ಟಿನಲ್ಲಿ ಜಯದ ಹುಡುಕಾಟದಲ್ಲಿರುವ ಉಭಯ ಏಷ್ಯನ್​ ತಂಡಗಳು ಗೆಲುವಿಗಾಗಿ ಇಂದು ತೀವ್ರ ಪೈಪೋಟಿ ನಡೆಸಲಿವೆ. ಆದ್ರೆ ಈ ರೋಚಕ ಹೋರಾಟಕ್ಕೆ ವರುಣ ಅನುವು ಮಾಡಿಕೊಡ್ತಾನಾ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆ.

LEAVE A REPLY

Please enter your comment!
Please enter your name here