ನ್ಯೂಜಿಲೆಂಡ್​ ‘ಕಿವಿ’ ಹಿಂಡ್ತಾರಾ ಬಾಂಗ್ಲಾ ಟೈಗರ್ಸ್?

0
136

ವಿಶ್ವಕಪ್ ಕಣ ರಂಗೇರುತ್ತಿದೆ. ಇಂದು ದಿ ರೋಸ್​ ಬೌಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜಿದ್ದಾ ಜಿದ್ದನ ಫೈಟ್ ನಡೆಯುತ್ತಿದೆ. ಈ ಮ್ಯಾಚ್​ನ ಬೆನ್ನಲ್ಲೇ ಸಂಜೆ 6 ಗಂಟೆಗೆ ನ್ಯೂಜಿಲೆಂಡ್ ಮತ್ತು ಬಾಂಗ್ಲಾ ನಡುವೆ ಪಂದ್ಯ ನಡೆಯಲಿದೆ.
ಬಾಂಗ್ಲಾ ಹುಲಿಗಳಿಗೆ ಹಾಗೂ ಕಿವೀಸ್ ಪಡೆಗೆ ಇದು ಟೂರ್ನಿಯಲ್ಲಿ ಎರಡನೇ ಮ್ಯಾಚ್. ತಮ್ಮ ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಗೆದ್ದು ಬೀಗಿವೆ. ಹೀಗಾಗಿ ಗೆದ್ದವರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ಕಿಂಗ್​ಸ್ಟನ್ ಓವೆಲ್ ಸ್ಟೇಡಿಯಂ.
ಟೂರ್ನಿಯಲ್ಲಿ ತನ್ನ ಫಸ್ಟ್ ಮ್ಯಾಚ್​ನಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿರುವ ನ್ಯೂಜಿಲೆಂಡ್ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದ್ದರೆ. ದಕ್ಷಿಣ ಆಫ್ರಿಕಾ ವಿರುದ್ಧ 21ರನ್​ ಗಳಿಂದ ಗೆದ್ದಿರೋ ಬಾಂಗ್ಲಾ ಟೈಗರ್ಸ್​​ ಕಿವೀಸ್ ಕಿವಿ ಹಿಂಡಿ, 2ನೇ ಜಯ ದಾಖಲಿಸುವ ವಿಶ್ವಾಸದಲ್ಲಿದೆ.
ಇನ್ನು ಅಭ್ಯಾಸ ಪಂದ್ಯದ ವಿಚಾರಕ್ಕೆ ಬರೋದಾದ್ರೆ, ಬಾಂಗ್ಲಾ ತನ್ನ ಮೊದಲ ಪ್ರಾಕ್ಟೀಸ್ ಮ್ಯಾಚ್​ ಅನ್ನು ಪಾಕಿಸ್ತಾನದ ವಿರುದ್ಧ ಆಡಬೇಕಿತ್ತು. ಆದರೆ, ಮಳೆಯಿಂದ ಆ ಪಂದ್ಯ ರದ್ದಾಗಿತ್ತು. ಎರಡನೇ ಪ್ರಾಕ್ಟೀಸ್ ಮ್ಯಾಚ್​ ನಲ್ಲಿ ಭಾರತವನ್ನು ಎದುರಿಸಿದ್ದ ಬಾಂಗ್ಲಾ 95ರನ್​ಗಳ ಸೋಲನುಭವಿಸಿತ್ತು. ಅಂತೆಯೇ ನ್ಯೂಜಿಲೆಂಡ್ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತದ ವಿರುದ್ಧ 6 ವಿಕೆಟ್​ ಗಳಿಂದ ಗೆದ್ದಿತ್ತು. 2ನೇ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 91ರನ್​ಗಳ ಸೋಲನುಭವಿತ್ತು.
ತಂಡಗಳು :
ನ್ಯೂಜಿಲೆಂಡ್​ : ಕೇನ್ ವಿಲಿಯಮ್ಸ್ (ನಾಯಕ) , ರಾಸ್ ಟೇಲರ್ , ಮಾರ್ಟಿನ್ ಗಪ್ಟಿಲ್ , ಕಾಲಿನ್ ಮುನ್ರೊ , ಮಿಚೆಲ್ ಸ್ಯಾಂಟನರ್, ಕಾಲಿನ್ ಡಿ ಗ್ರ್ಯಾಂಡ್​ಹೋಮ್, ಜೇಮ್ಸ್​​ ನೀಶಮ್ , ಟಾಮ್ ಲಾಥಮ್ , ಟಾಮ್ ಬ್ಲಂಡೆಲ್ , ಹೆನ್ರಿ ನಿಕೋಲ್ಸ್​​ , ಇಶ್ ಸೋಧಿ, ಲೂಕಿ ಫರ್ಗುಸನ್, ಟಿಮ್ ಸೌಧಿ , ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ

ಬಾಂಗ್ಲಾದೇಶ : ಮುಶ್ರಫೆ ಮೊರ್ತಾಜ (ನಾಯಕ), ಶಕಿಬ್ ಅಲ್ ಹಸನ್ (ಉಪ- ನಾಯಕ), ತಮಿಮ್ ಇಖ್ಬಾಲ್ , ಸೌಮ್ಯಾ ಸರ್ಕಾರ್, ಸಬ್ಬರ್ ರೆಹ್ಮಾನ್, ಮುಷ್ಫೀಕರ್ ರಹೀಮ್​​, ಲಿಟನ್ ದಾಸ್, ಮೊಹಮ್ಮದ್ ಮಿಥುನ್, ಮೊಹಮ್ಮದುಲ್ಲ, ಮೆಹಿದಿ ಹಸನ್, ಮೊಹಮ್ಮದ್ ಸೈಫುದ್ದಿನ್, ಮೊಸದ್ದಿಕ್ ಹೊಸೈನ್, ಅಬು ಜಯೇದ್, ರುಬೆಲ್ ಹೊಸೈನ್. ಮುಸ್ತಫಿಜುರ್ ರೆಹ್ಮಾನ್

LEAVE A REPLY

Please enter your comment!
Please enter your name here