Home ಕ್ರೀಡೆ P.Cricket ಗೆಲುವಿನ ಟ್ರ್ಯಾಕ್​ಗೆ ಮರಳುತ್ತಾ ಭಾರತ?

ಗೆಲುವಿನ ಟ್ರ್ಯಾಕ್​ಗೆ ಮರಳುತ್ತಾ ಭಾರತ?

ವಿಶ್ವಸಮರ ಇಂದು ಏಷ್ಯಾದ ಎರಡು ಪ್ರಬಲ ರಾಷ್ಟ್ರಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಕ್ರಿಕೆಟ್ ಹೋರಾಟದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನೆರೆ ರಾಷ್ಟ್ರಗಳಾಗಿ ಉಳಿದಿಲ್ಲ. ಟೀಕೆ-ಪ್ರತಿ ಟೀಕೆ, ಸ್ಲೆಡ್ಜಿಂಗ್​ ಪ್ರತಿ ಪಂದ್ಯದಲ್ಲೂ ರಣರೋಚಕ ಆಗ್ತಿವೆ. 2015ರಿಂದ ಅತ್ಯುತ್ತಮ ಪ್ರದರ್ಶನ ನೀಡ್ತಾ ಇರೋ ಬಾಂಗ್ಲಾ ವಿಶ್ವಕಪ್​ನಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಸೆಮೀಸ್​ ಮೇಲೆ ಕಣ್ಣಿಟ್ಟಿರುವ ಬಾಂಗ್ಲಾ ಭಾರತದ ವಿರುದ್ಧವೂ ಅಬ್ಬರಿಸುವ ವಿಶ್ವಾಸದಲ್ಲಿದೆ.
ಟೂರ್ನಿಯಲ್ಲಿ ಅಜೇಯ ಓಟ ಮುಂದುವರೆಸಿದ್ದ ಟೀಮ್​ಇಂಡಿಯಾ ಇಂಗ್ಲೆಂಡ್​​ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋಲುಂಡಿದೆ. ಅತಿಥೇಯರ ವಿರುದ್ಧದ ಪಂದ್ಯದಲ್ಲಿ 31 ರನ್​ಗಳ ಸೋಲುಂಡಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದು ಸೆಮೀಸ್​ ಸ್ಥಾನ ಪಕ್ಕಾ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ಟೀಮ್​ಇಂಡಿಯಾ. ಕಳೆದ ಪಂದ್ಯದಲ್ಲಿ ಸೋಲುಂಡಿರುವ ಎಜ್​ಬಾಸ್ಟನ್​ನಲ್ಲಿ ಕೊಹ್ಲಿ ಬಾಯ್ಸ್​​ ಗೆಲುವನ್ನ ಎದುರು ನೋಡ್ತಾ ಇದಾರೆ.
ಕಳೆದ ಪಂದ್ಯದಲ್ಲಿ ಆಂಗ್ಲರ ಬಳಗವನ್ನ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಭಾರತದ ಬೌಲಿಂಗ್​ ವಿಭಾಗ ವಿಫಲವಾಗಿತ್ತು. ಬಳಿಕ ಬ್ಯಾಟಿಂಗ್​ನಲ್ಲೂ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿದ್ದ ತಂಡಕ್ಕೆ ನಾಯಕ ವಿರಾಟ್​ ಕೊಹ್ಲಿ, ರೋಹಿತ್​​ ಶರ್ಮಾ, ಹಾರ್ಧಿಕ್​ ಪಾಂಡ್ಯ, ರಿಷಬ್​ ಪಂತ್​ ಆಸರೆಯಾಗಿದ್ರು. ಆದ್ರೆ ಅಂತಿಮ ಹಂತದಲ್ಲಿ ಎಮ್​ಎಸ್​ ಧೋನಿ, ಕೇದಾರ್​ ಜಾಧವ್​ ನಿಧಾನಗತಿಯ ಬ್ಯಾಟಿಂಗ್​ ಭಾರತಕ್ಕೆ ಮುಳುವಾಗಿತ್ತು.
ಶಿಖರ್​ ಧವನ್​ ಇಂಜುರಿಯಿಂದ ಹೊರಬಿದ್ದ ಬಳಿಕ ಆರಂಭಿಕರಾಗಿ ಉತ್ತಮ ಇನ್ನಿಂಗ್ಸ್​​ ಕಟ್ಟುವಲ್ಲಿ ಕೆಎಲ್​ ರಾಹುಲ್​ ಎಡವಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್​ ಬದಲು ಪಂತ್​ ಇನ್ನಿಂಗ್ಸ್​​ ಆರಂಭಿಸೋ ಸಾಧ್ಯತೆ ಇದೆ. ಜೊತೆಗೆ ರಾಹುಲ್​ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಆಶ್ಚರ್ಯವಿಲ್ಲ.
ಇನ್ನು ಮಧ್ಯಮ ಕ್ರಮಾಂಕದಲ್ಲೂ ದೊಡ್ಡ ಜೊತೆಯಾಟಗಳು ಮೂಡಿ ಬರ್ತಾ ಇಲ್ಲ. ಅದರಲ್ಲೂ ಕೇದಾರ್​​ ಜಾಧವ್​ ಅಲ್ಪ ಮೊತ್ತಕ್ಕೆ ಪೆವಿಲಿಯನ್​ ಸೇರ್ತಾ ಇದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಜಾಧವ್​ ಸ್ಥಾನದಲ್ಲಿ ಬಹುತೇಕ ರವೀಂದ್ರ ಜಡೇಜಾ ಕಣಕ್ಕಿಳಿಯೋ ಸಾಧ್ಯತೆ ಇದೆ.
ವಿಜಯ್​ ಶಂಕರ್​ ಔಟ್​, ಕನ್ನಡಿಗ ಮಯಾಂಕ್​ ಇನ್​!
ಯೆಸ್​, ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡಿರುವ ವಿಜಯ್​ ಶಂಕರ್​ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಅವರ ಜಾಗಕ್ಕೆ ಕನ್ನಡಿಗ ಮಯಾಂಕ್​ ಅಗರ್​ವಾಲ್​ರನ್ನ ಆಯ್ಕೆ ಮಾಡಲಾಗಿದೆ. ಆದ್ರೆ ಮಯಾಂಕ್​ ಇಂದಿನ ಪಂದ್ಯಕ್ಕೆ ಲಭ್ಯರಾಗಲ್ಲ.
ಟೂರ್ನಿಯ ಉಳಿದ ಪಂದ್ಯಗಳಿಗೆ ಹೋಲಿಸಿದ್ರೆ, ಇಂಗ್ಲೆಂಡ್​ ವಿರುದ್ಧ ಟೀಮ್​ಇಂಡಿಯಾ ಬೌಲಿಂಗ್​ ವಿಭಾಗ ಸಂಪೂರ್ಣ ಎಡವಿತ್ತು. ಮೊಹಮ್ಮದ್​ ಶಮಿ, ಜಸ್​ಪ್ರೀತ್​ ಬೂಮ್ರಾ ನಿಖರ ದಾಳಿ ಸಂಘಟಿಸಿದ್ರೆ, ಯುಜುವೇಂದ್ರ ಚಾಹಲ್​ ವಿಕೆಟ್​ ಕಬಳಿಸದೇ ದುಬಾರಿಯಾಗಿದ್ರು. ಅತ್ತ ಭುವನೇಶ್ವರ್​​ ಕುಮಾರ್​​ ಕೂಡ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಪಿಚ್​ ಕೂಡ ವೇಗಿಗಳಿಗೆ ಸಹಾಯಕವಾಗಿರುವುದರಿಂದ 3 ವೇಗಿಗಳ ಪ್ರಯೋಗವನ್ನ ಮಾಡುವ ಸಾಧ್ಯತೆ ಇದೆ.
ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿದೆ ಬಾಂಗ್ಲಾ!
ಯೆಸ್​​! ಟೂರ್ನಿಯಲ್ಲಿ 3 ಬಾರಿ 300ಕ್ಕೂ ಹೆಚ್ಚು ರನ್​ ಕೆಲೆ ಹಾಕಿರುವ ಬಾಂಗ್ಲಾ ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದೆ. ಅದರಲ್ಲೂ ಸೌತ್​ಆಫ್ರಿಕಾ, ವೆಸ್ಟ್​ಇಂಡೀಸ್​​ ತಂಡಕ್ಕೆ ಸೋಲುಣಿಸಿರುವ ಬಾಂಗ್ಲಾ ಎದುರು ಕೊಹ್ಲಿ ಬಾಯ್ಸ್​ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಸೆಮೀಸ್​​ ಮೇಲೆ ಕಣ್ಣಿಟ್ಟಿರುವ ಬಾಂಗ್ಲಾ ಹುಲಿಗಳು, ಭಾರತದ ವಿರುದ್ಧವೂ ಗೆಲುವಿಗೆ ಹಾತೊರೆಯುತಿದ್ದಾರೆ.
ಶಕಿಬ್​ ಆಲ್​ ಹಸನ್​, ಮುಷ್ಪೀಕರ್​ ರಹೀಮ್​, ತಮೀಮ್​ ಇಕ್ಬಾಲ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಮುಸ್ತಫಿಜುರ್​ ರೆಹಮಾನ್, ನಾಯಕ ಮುಶ್ರಫೆ ಮೊರ್ತಾಜಾ, ಮೆಹದಿ ಹಸನ್​ ಒಳಗೊಂಡ ಬೌಲಿಂಗ್​ ವಿಭಾಗವೂ ಬಲಿಷ್ಠವಾಗಿದೆ. ಹೀಗಾಗಿ ಭಾರತಕ್ಕೆ ಇಂದಿನ ಸವಾಲು ಎದುರಾಗಲಿದೆ.
 ಭಾರತ-ಬಾಂಗ್ಲಾದೇಶ ತಂಡಗಳು ಏಕದಿನದಲ್ಲಿ 35 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 29 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿದ್ರೆ, ಕೇವಲ 5ರಲ್ಲಿ ಬಾಂಗ್ಲಾದೇಶ ಜಯ ಕಂಡಿದೆ. ಇನ್ನುಳಿದ 1 ಪಂದ್ಯ ರದ್ದಾಗಿದೆ.
ಏಕದಿನ ಮಾದರಿ ಮಾತ್ರವಲ್ಲ. ವಿಶ್ವಕಪ್​ ಇತಿಹಾಸದಲ್ಲೂ ಭಾರತದ್ದೇ ಮೇಲುಗೈ. ಆದ್ರೆ 2007ರ ವಿಶ್ವಕಪ್​ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ಟೀಮ್​ಇಂಡಿಯಾ ಹೀನಾಯ ಸೋಲುಂಡಿದೆ.
ವಿಶ್ವಕಪ್​ನಲ್ಲಿ ಟೀಮ್​ಇಂಡಿಯಾ ಬಾಂಗ್ಲಾದೇಶ ಒಟ್ಟು 3 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 2 ಪಂದ್ಯಗಳಲ್ಲಿ ಭಾರತ ಗೆದ್ದಿದ್ರೆ, 1 ಪಂದ್ಯದಲ್ಲಿ ಬಾಂಗ್ಲಾದೇಶ ಜಯ ಸಾಧಿಸಿದೆ.
ಇನ್ನು ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ಎದುರು ಜಯ ಸಾಧಿಸಿರೋ ಭಾರತ ಇಂದು ಕೂಡ ಗೆಲುವಿನ ವಿಶ್ವಾಸದಲ್ಲಿದೆ. ಆದ್ರೆ ಸೆಮೀಸ್​​ ಮೇಲೆ ಕಣ್ಣಿಟ್ಟಿರುವ ಬಾಂಗ್ಲಾ ಹುಲಿಗಳನ್ನ ಲಘುವಾಗಿ ಪರಿಗಣಿಸುವಂತಿಲ್ಲ. ಮಹತ್ವದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರಾಳಿಗಳಿಗೆ ಶಾಕ್ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಇಂದಿನ ಪಂದ್ಯ ಅಭಿಮಾನಿಗಳ ಕುತೂಹಲವನ್ನ ಡಬಲ್​ ಮಾಡಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments