Home ಕ್ರೀಡೆ P.Cricket ರೋಹಿತ್ ದಾಖಲೆ ಶತಕ - ಸೆಮಿಫೈನಲ್​ಗೆ ಭಾರತ ಎಂಟ್ರಿ

ರೋಹಿತ್ ದಾಖಲೆ ಶತಕ – ಸೆಮಿಫೈನಲ್​ಗೆ ಭಾರತ ಎಂಟ್ರಿ

ಉಪ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯ ಶತಕ, ಕನ್ನಡಿಗ ರಾಹುಲ್ ಅರ್ಧಶತಕ ಹಾಗೂ ಬೌಲರ್​ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ಬಾಂಗ್ಲಾವನ್ನು 28ರನ್​ಗಳಿಂದ ಮಣಿಸಿ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. 
ಬರ್ಮಿಂಗ್ ಹ್ಯಾಮ್​ನ ಎಡ್ಜ್​ಬ್ಯಾಸ್ಟನ್ ಸ್ಟೇಡಿಯಂನಲ್ಲಿ ಬಾಂಗ್ಲಾ ವಿರುದ್ಧ ನಡೆದ ಮ್ಯಾಚ್​ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಹಿಟ್ ಮ್ಯಾನ್ ರೋಹಿತ್ ಪ್ರಸಕ್ತ ವಿಶ್ವಕಪ್​ನಲ್ಲಿ 4ನೇ ಶತಕ (104) ಬಾರಿಸಿ ಮಿಂಚಿದ್ರು. ರೋಹಿತ್​ ಗೆ ಉತ್ತಮ ಸಾಥ್ ನೀಡಿದ ಕೆ.ಎಲ್ ರಾಹುಲ್ (77) ಅರ್ಧಶತಕ ಬಾರಿಸಿ ಉಳಿದ ಮ್ಯಾಚ್​ಗಳಲ್ಲೂ ರೋಹಿತ್​ಗೆ ಸಮರ್ಥ ಜೋಡಿಯಾಗಿ ಆರಂಭಿಕ ಜವಬ್ದಾರಿಯನ್ನು ನಿಭಾಯಿಸ ಬಲ್ಲೆ ಅಂತ ಪ್ರೂವ್ ಮಾಡಿದ್ರು. ಈ ಜೋಡಿ 180ರನ್​ಗಳ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು. ಸೆಂಚುರಿ ಸಿಡಿಸಿದ ಬೆನ್ನಲ್ಲೇ ರೋಹಿತ್ ಪೆವಿಲಿಯನ್​ ಸೇರಿದ್ರು. ಅವರು ಔಟ್​ ಆದ ಬಳಿಕ ತಂಡಕ್ಕೆ 15ರನ್​ ಸೇರುವಷ್ಟರಲ್ಲಿ ರಾಹುಲ್ ಕೂಡ ನಿರ್ಗಮಿಸಿದ್ರು. ನಾಯಕ ವಿರಾಟ್​ ಕೊಹ್ಲಿ ಆಟ ಕೇವಲ 26ರನ್​ಗಳಿಗೆ ಅಂತ್ಯವಾಯ್ತು. ಹಾರ್ದಿಕ್ ಪಾಂಡ್ಯ ಶೂನ್ಯ ಸಂಪಾದಿಸಿ ನಿರಾಸೆ ಮೂಡಿಸಿದ್ರು.
ಯುವ ಆಟಗಾರ ರಿಷಭ್ ಪಂತ್ 48ರನ್ ಗಳಿಸಿ ಅರ್ಧಶತಕ ವಂಚಿತರಾಗಿ ನಿರಾಸೆಯಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ರು. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 35ರನ್​ಗಳಿಸಿದ್ರು. ಆಲ್​​ರೌಂಡರ್ ಕೇದರ್ ಜಾಧವ್ ಬದಲಿಗೆ ಸ್ಥಾನ ಪಡೆದ ದಿನೇಶ್ ಕಾರ್ತಿಕ್ (8) ಉತ್ತಮ ಆಟವಾಡಲು ವಿಫಲವಾದ್ರು. ಭುವನೇಶ್ವರ್ ಕುಮಾರ್ (2), ಜಸ್​ಪ್ರೀತ್ ಬುಮ್ರಾ (1) ಎರಡಂಕಿ ದಾಟುವಲ್ಲಿ ವಿಫಲರಾದ್ರು. ಅಂತಿಮವಾಗಿ ಭಾರತ 50 ಓವರ್​ಗಳಲ್ಲಿ 9 ವಿಕೆಟ್ ಕಳ್ಕೊಂಡು 314ರನ್ ಮಾಡಿತು. ಬಾಂಗ್ಲಾ ಪರ ಮುಸ್ತಾಫಿಜರ್ ರೆಹಮಾನ್ 5 ವಿಕೆಟ್​ ಕಿತ್ತು ಮಿಂಚಿದ್ರು.
315ರನ್ ಗುರಿ ಬೆನ್ನತ್ತಿದ ಬಾಂಗ್ಲಾ ಹುಲಿಗಳು ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲರಾದ್ರು. ಆಲ್​ರೌಂಡರ್ ಶಕಿಬ್ ಉಲ್ ಹಸನ್ 66ರನ್ ಗಳಿಸಿದ್ರು. ಮೊಹಮ್ಮದ್ ಸೈಫ್ಉದ್ದೀನ್ ಅಜೇಯ 51ರನ್ ಮಾಡಿದ್ರು. ಆದರೆ ಗೆಲುವಿನ ದಡ ಸೇರಿಸಲು ಆಗಲಿಲ್ಲ. 48 ಓವರ್ ಗಳಲ್ಲಿ 286ರನ್​ಗಳಿಗೆ ಬಾಂಗ್ಲಾ ಹುಲಿಗಳು ಆಲ್​ಔಟ್ ಆದ್ರು. ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ 3 ವಿಕೆಟ್ ಕಿತ್ತು ಮಿಂಚಿದ್ರು. ಜಸ್​​ಪ್ರೀತ್ ಬುಮ್ರಾ 4 ವಿಕೆಟ್ ಪಡೆದ್ರು. ಭುವಿ, ಶಮಿ, ಚಹಾಲ್ ತಲಾ 1 ವಿಕೆಟ್ ಕಿತ್ತರು.
ಇನ್ನು ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಪ್ಘಾನಿಸ್ತಾನ, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದಿದ್ದ ಭಾರತ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಇಂದು ಬಾಂಗ್ಲಾ ವಿರುದ್ಧ ಗೆದ್ದು ಗೆಲುವಿನ ಟ್ರ್ಯಾಕ್​ಗೆ ಮರಳಿದೆ.

ರೋಹಿತ್ ದಾಖಲೆ ಶತಕ : ರೋಹಿತ್ ಶರ್ಮಾ ಶತಕ ಸಿಡಿಸಿ ಮಿಂಚಿದ್ರು. ಪ್ರಸಕ್ತ ಟೂರ್ನಿಯಲ್ಲಿ ರೋಹಿತ್ ಬಾರಿಸಿದ 4ನೇ ಸೆಂಚುರಿ ಇದಾಗಿದೆ. ಸೌತ್ ಆಫ್ರಿಕಾ, ಪಾಕಿಸ್ತಾನ ಹಾಗೂ ಇಂಗ್ಲೆಂಡ್​ ವಿರುದ್ಧ ಸೆಂಚುರಿ ಮಾಡಿದ್ದ ಡಬಲ್ ಸೆಂಚುರಿ ಸ್ಟಾರ್ ರೋಹಿತ್ ಇಂದು ಕೂಡ ಭರ್ಜರಿ ಶತಕ ಬಾರಿಸಿದರು. ಈ ಮೂಲಕ ಒಂದೇ ವಿಶ್ವಕಪ್ ಟೂರ್ನಿಯಲ್ಲಿ 4 ಸೆಂಚುರಿ ಬಾರಿಸಿದ ಕೀರ್ತಿಗೆ ಭಾಜನರಾದ ರೋಹಿತ್ ಸೌರವ್ ಗಂಗೂಲಿ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಗಂಗೂಲಿ 2003ರ ವಿಶ್ವಕಪ್​ನಲ್ಲಿ 3 ಶತಕ (104) ಸಿಡಿಸಿದ್ರು. ಇನ್ನು ಒಂದೇ ವಿಶ್ವಕಪ್​ನಲ್ಲಿ 4ಶತಕ ಸಿಡಿಸಿದ ವಿಶ್ವದ 2ನೇ ಕ್ರಿಕೆಟಿಗ ಎಂಬ ಶ್ರೇಯಕ್ಕೂ ರೋಹಿತ್ ಪಾತ್ರರಾಗಿದ್ದಾರೆ. 2015ರ ವಿಶ್ವಕಪ್​ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ 4 ಸೆಂಚುರಿ ಬಾರಿಸಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments