ಆಸೀಸ್​ಗೆ ಪಾಕ್​ ನಿಜಕ್ಕೂ ಒಂದು ಸವಾಲಾ?

0
99

ವಿಶ್ವ ಸಮರದ 17ನೇ ಪಂದ್ಯದಲ್ಲಿಂದು ಗೆಲುವಿಗಾಗಿ ಆಸೀಸ್​, ಪಾಕ್​ ಕಾದಾಡಲಿವೆ. ಬ್ಯಾಟಿಂಗ್​ ಸ್ನೇಹಿ ಟೌಂಟನ್ ಮೈದಾನದಲ್ಲಿ ರನ್​ ಹೊಳೆ ಖಚಿತ. ಬಲಿಷ್ಠ ಬ್ಯಾಟಿಂಗ್​ ಬಲ ಹೊಂದಿರುವ ಆಸ್ಟ್ರೇಲಿಯಾಗೆ ಪಾಕಿಸ್ತಾನ ತಂಡ ಸಾಟಿಯಾಗುತ್ತಾ ಅನ್ನೋದೇ ಕುತೂಹಲ.
ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ, ಅಫ್ಘಾನಿಸ್ತಾನ ಹಾಗೂ ​ವಿಂಡೀಸ್​ ವಿರುದ್ಧ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ 3ನೇ ಪಂದ್ಯದಲ್ಲಿ ಮಂಡಿಯೂರಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ 36 ರನ್​ಗಳ ಸೋಲುಂಡಿರುವ ಆಸೀಸ್​ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ.
 ಇತ್ತ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ವೆಸ್ಟ್​ಇಂಡೀಸ್​ ವಿರುದ್ಧ ಹೀನಾಯ ಸೋಲುಂಡಿದ್ದ ಪಾಕಿಸ್ತಾನ, ಇಂಗ್ಲೆಂಡ್​ ವಿರುದ್ಧ ಹೋರಾಟದ ಗೆಲುವು ದಾಖಲಿಸಿತ್ತು. ಆದ್ರೆ ನಂತರದ ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿತ್ತು. ಹಾಗಾಗಿ 3 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 8ನೇ ಸ್ಥಾನದಲ್ಲಿದೆ. ಇದೀಗ ಬಲಿಷ್ಠ ಆಸೀಸ್​ ಎದುರು ಜಯದ ಹಾದಿಗೆ ಮರಳುವ ಪ್ರಯತ್ನದಲ್ಲಿದೆ.
ವಿಶ್ವಕಪ್​ ಇತಿಹಾಸದಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ ತಂಡಗಳು 9 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 5 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಜಯಿಸಿದ್ರೆ, ಪಾಕಿಸ್ತಾನ 4ರಲ್ಲಿ ಗೆಲುವು ಕಂಡಿದೆ. ವಿಶೇಷ ಅಂದ್ರೆ 1975ರಿಂದ 2015ರ ವಿಶ್ವಕಪ್​ವರೆಗೆ ಸತತ ಗೆಲುವನ್ನ ಯಾವ ತಂಡವೂ ಸಾಧಿಸಿಲ್ಲ.
ಇನ್ನು ಕಳೆದ ವರ್ಷಾಂತ್ಯದಲ್ಲಿ ದುಬೈನಲ್ಲಿ ಪಾಕ್​ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಿದ್ದ ಆಸ್ಟ್ರೇಲಿಯಾ ಕ್ಲೀನ್​ಸ್ವೀಪ್​ ಜಯ ದಾಖಲಿಸಿತ್ತು. ಬ್ಯಾಟಿಂಗ್​, ಬೌಲಿಂಗ್ ಎರಡೂ ವಿಭಾಗಗಳಲ್ಲೂ ಬ್ಯಾಲೆನ್ಸ್​​ ಹೊಂದಿರುವ ಆಸಿಸ್​​ ಇಂದಿನ ಪಂದ್ಯದಲ್ಲೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಆದ್ರೆ ಆಲ್​ರೌಂಡರ್​​ ಮಾರ್ಕಸ್​ ಸ್ಟಾಯಿನ್ಸ್​​​ ಇಂಜುರಿಗೆ ತುತ್ತಾಗಿರೋದು ತಂಡಕ್ಕೆ ಹಿನ್ನಡೆ.
ಇತ್ತ ಪಾಕಿಸ್ತಾನ ಪಾಳಯ ಅತಿಥೇಯ ಇಂಗ್ಲೆಂಡ್​​ ಬಳಗವನ್ನೇ ಮಣಿಸಿದ ಹುಮ್ಮಸ್ಸಿನಲ್ಲಿದೆ. ಅದರಲ್ಲೂ ತಂಡದಲ್ಲಿ ವಹಾಬ್​ ರಿಯಾಜ್​, ಹಸನ್​ ಆಲಿ, ಮೊಹಮದ್​ ಅಮೀರ್​​ ಇರುವುದು ಆಸ್ಟ್ರೇಲಿಯಾ ಬ್ಯಾಟಿಂಗ್​ ಲೈನಪ್​ ಕಟ್ಟಿ ಹಾಕುವ ಆತ್ಮವಿಶ್ವಾಸ ಹೆಚ್ಚಿಸಿದೆ.
ಒಂದೆಡೆ ಬೌಲಿಂಗ್​ ವಿಭಾಗವನ್ನೇ ಗೆಲುವಿನ ಅಸ್ತ್ರವಾಗಿಸಿಕೊಂಡಿರೋ ಪಾಕಿಸ್ತಾನ. ಇನ್ನೊಂದೆಡೆ ಬ್ಯಾಟಿಂಗ್​ ಮೇಲೆ ಹೆಚ್ಚು ಅವಲಂಬಿತ ಆಗಿರೋ ಆಸ್ಟ್ರೇಲಿಯಾ. ಬ್ಯಾಟ್​​​ ಮತ್ತು ಬೌಲ್​ ನಡುವಿನ ಹೋರಾಟದಲ್ಲಿ ಗೆಲುವು ಯಾರಿಗೆ ಅನ್ನೋದು ಸಧ್ಯದ ಕುತೂಹಲ.

LEAVE A REPLY

Please enter your comment!
Please enter your name here