ಪಾಕ್​ ವಿರುದ್ಧ ಆಸೀಸ್​ಗೆ ರೋಚಕ ಗೆಲುವು

0
126

ವಿಶ್ವಸಮರದ 17ನೇ ಲೀಗ್​ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಯ್ತು. ಅಂತಿಮ ಹಂತದವರೆಗೂ ರೋಚಕತೆ ಕೆರಳಿಸಿದ್ದ ಪಾಕಿಸ್ತಾನ,ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆಸಿಸ್ 41 ರನ್​ಗಳ ಗೆಲುವು ದಾಖಲಿಸಿತು.
ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಆಸ್ಟ್ರೇಲಿಯಾಗೆ ಆರಂಭಿಕರಾದ ಆ್ಯರೋನ್​ ಫಿಂಚ್​​,ಡೇವಿಡ್​ ವಾರ್ನರ್​ ಎಚ್ಚರಿಕೆಯ ಆರಂಭ ಒದಗಿಸಿದ್ರು. ವಾರ್ನರ್​ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿದ್ರೆ, ಫಿಂಚ್​ ರಕ್ಷಣಾತ್ಮಕ ಬ್ಯಾಟಿಂಗ್​ ಮಾಡಿದ್ರು. ಮೊದಲ ವಿಕೆಟ್​ಗೆ 146 ರನ್​ ಕಲೆಹಾಕಿದ ಈ ಜೋಡಿ ಭದ್ರ ಬುನಾದಿ ಹಾಕಿದ್ರು.
ಅರ್ಧಶತಕ ಸಿಡಿಸಿದ ಬೆನ್ನಲ್ಲೇ ನಾಯಕ ಆ್ಯರೋನ್​ ಫಿಂಚ್​ ಮೊಹಮ್ಮದ್​ ಅಮೀರ್​​ ಗೆ ವಿಕೆಟ್​ ಒಪ್ಪಿಸಿದ್ರು. ಅತ್ತ ವಾರ್ನರ್​ ಕೆಚ್ಚೆದೆಯ ಬ್ಯಾಟಿಂಗ್​ ಪ್ರದರ್ಶಿಸಿದರು. ಆದ್ರೆ ಫಿಂಚ್​ ಬಳಿಕ ಕಣಕ್ಕಿಳಿದ ಸ್ಟೀವ್​ ಸ್ಮಿತ್​​ ನಿರಾಸೆ ಮೂಡಿಸಿದ್ರು. ಆ ಬಳಿಕ ಕಣಕ್ಕಿಳಿದ ಗ್ಲೇನ್​ ಮ್ಯಾಕ್ಸ್​ವೆಲ್​ ಅಬ್ಬರಿಸೋ ಸೂಚನೆ ನೀಡಿದ್ರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಆದ್ರೆ ಅತ್ತ ಅಮೋಘ ಇನ್ನಿಂಗ್ಸ್ ಕಟ್ಟಿದ ವಾರ್ನರ್ ಶತಕ ಸಿಡಿಸಿದ್ರು. 111 ಎಸೆತಗಳಲ್ಲಿ 11 ಬೌಂಡರಿ,1 ಸಿಕ್ಸರ್​ ಸಿಡಿಸಿ 107 ರನ್​ ಚಚ್ಚಿದ್ರು. ಅದ್ರೆ ತಕದ ಬೆನ್ನಲ್ಲೆ ವಾರ್ನರ್​ ಇನ್ನಿಂಗ್ಸ್​ ಅಂತ್ಯವಾಯ್ತು. ಬಳಿಕ ಉಸ್ಮನಾ ಖವಾಜ ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದ್ರೆ ಕೊನೆಯ ಹಂತದಲ್ಲಿ ನಿರಂತರ ವಿಕೆಟುಗಳನ್ನ ಕಳೆದುಕೊಳ್ತು. ಪರಿಣಾಮ ಬೃಹತ್​ ಮೊತ್ತ ಕಲೆ ಹಾಕೋ ಸೂಚನೆ ನೀಡಿದ್ದ ಆಸಿಸ್​ 49 ಓವರ್‌ಗಳಲ್ಲೇ 307 ರನ್‌ಗಳಿಗೆ ಆಲೌಟ್​​ ಆಯ್ತು.
308 ರನ್​ಗಳ ಬೆಟ್ಟದಂತ ಗುರಿ ಬೆನ್ನತ್ತಿದ ಪಾಕಿಸ್ತಾನ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಫಕರ್​ ಜಮಾನ್​ ಸೊನ್ನೆ ಸುತ್ತಿದ್ರು. ಬಳಿಕ ಜೊತೆಯಾದ ಬಾಬರ್​​ ಅಝಮ್​, ಇಮಾಮ್​ ಉಲ್​ ಹಕ್​ ದೊಡ್ಡ ಇನ್ನಿಂಗ್ಸ್​ ಕಟ್ಟೋ ಸೂಚನೆ ನೀಡಿದ್ರು. ಆದ್ರೆ ಕೌಲ್ಟರ್​​ ನೈಲ್​ ಎಸೆತವನ್ನು ಎದುರಿಸಲು ವಿಫಲರಾದ ಬಾಬರ್​ ಅಝಮ್​ ಆಟ 30 ರನ್​ಗಳಿಗೆ ಅಂತ್ಯವಾಯ್ತು.
ಬಳಿಕ 3ನೇ ವಿಕೆಟ್​​ಗೆ ಜೊತೆಯಾದ ಮೊಹಮದ್​ ಹಫೀಜ್​, ಇಮಾಮ್​ ಉಲ್​ ಹಕ್​ 80 ರನ್​ಗಳ ಜೊತೆಯಾಟವಾಡಿದ್ರು. ಇಮಾಮ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಹಫೀಜ್ ಬಿರುಸಿನ ಆಟವಾಡಿದ್ರು. ಆಕರ್ಷಕ ಇನ್ನಿಂಗ್ಸ್ ಕಟ್ಟಿ ಅರ್ಧಶತಕ ಬಾರಿಸಿದ ಇಮಾಮ್​ ಅರ್ಧಶತಕದ ಬಳಿಕ ಔಟಾದ್ರು..
ಉತ್ತಮ ಇನ್ನಿಂಗ್ಸ್​ ಕಟ್ಟುವ ಸೂಚನೆ ನೀಡಿದ ಹಫೀಜ್ ಆಟ 46 ರನ್​ಗಳಿಗೆ ಅಂತ್ಯವಾಯ್ತು. ಬಳಿಕ ಕಣಕ್ಕಿಳಿದ ಶೋಯಿಬ್​ ಮಲ್ಲಿಕ್​ ಖಾತೆ ತೆರಯುವಲ್ಲಿ ವಿಫರಾದರು. ಇದರ ಬೆನ್ನಲ್ಲೇ ಆಸಿಫ್​ ಅಲಿ 5 ರನ್​ಗಳಿಸಿ ಔಟಾದ್ರು.
ನಂತರ 15 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​ ಸಿಡಿಸಿ ಅಬ್ಬರಿಸಿದ ಹಸನ್​ ಅಲಿ ಆಟ 32 ರನ್​​ಗಳಿಗೆ ಅಂತ್ಯವಾಯ್ತು. 45 ರನ್​ ಚಚ್ಚಿದ ವಹಾಬ್​ ರಿಯಾಜ್​ ಕೂಡ ಪೆವಿಲಿಯನ್​ ಸೇರಿದ್ರು. ನಿರ್ಣಾಯಕ ಹಂತದಲ್ಲಿ ನಾಯಕ ಸರ್ಫರಾಜ್​ ಅಹಮದ್​​ ಇನ್ನಿಂಗ್ಸ್​ ಕಟ್ಟೋ ಪ್ರಯತ್ನವೂ ಫಲ ನೀಡಲಿಲ್ಲ. ಗೆಲುವಿನ ಸನಿಹದಲ್ಲಿ ಎಡವಿದ ಪಾಕ್​ ಅಂತಿಮವಾಗಿ 266 ರನ್​ಗಳಿಗೆ ಆಲೌಟ್​​ ಆಯ್ತು.
ಬಲಿಷ್ಠ ಆಸ್ಟ್ರೇಲಿಯಾ ತಂಡದ ಬೌಲಿಂಗ್​ ದಾಳಿಯನ್ನ ಸಮರ್ಥವಾಗಿ ಎದುರಿಸಿದ ನಡುವೆಯೂ ಪಾಕ್​ ಸೋಲಿಗೆ ಶರಣಾಯ್ತು.
ಒಟ್ಟಾರೆಯಾಗಿ ಭಾರತದ ಎದುರು ಸೋಲಿಗೆ ಶರಣಾಗಿದ್ದ ಆಸ್ಟ್ರೇಲಿಯಾ ಗೆಲುವಿನ ಹಾದಿಗೆ ಮರಳಿತು. ಈ ಮೂಲಕ 6 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 2ನೇ ಸ್ಥಾನಕ್ಕೇರಿದ್ರು.

LEAVE A REPLY

Please enter your comment!
Please enter your name here