ಲಂಕಾಗೆ ಟಫ್​ ಫೈಟ್​ ನೀಡಿ ಸೋತ ಅಪ್ಘಾನ್..!

0
149

ವಿಶ್ವ ಕ್ರಿಕೆಟ್​ನ​ ಶಿಶು ಅಫ್ಘಾನಿಸ್ತಾನ ಮತ್ತೊಮ್ಮೆ ಹೋರಾಟ ಮಾಡಿ ಸೋಲಿಗೆ ಶರಣಾಗಿದೆ. ವಿಶ್ವಕಪ್ ಟೂರ್ನಿಯ 7ನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಫ್​ ಫೈಟ್​ ಕೊಟ್ಟ ಅಫ್ಘನ್​ ಪಡೆ 34 ಗಳಿಂದ ಪರಾಜಯಗೊಂಡಿತು.
ಸೋಪಿಯಾ ಗಾರ್ಡಿಯನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಅಫ್ಘಾನಿಸ್ತಾನ ಶ್ರೀಲಂಕಾ ತಂಡಕ್ಕೆ ಬ್ಯಾಂಟಿಂಗ್​ಗೆ ಆಹ್ವಾನ ನೀಡಿತು. ಶ್ರೀಲಂಕಾ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ದಿಮುತ್​ ಕುರುಣಾರತ್ನೆ ಹಾಗೂ ಕುಸಾಲ್ ಪೆರೆರಾ ಉತ್ತಮ ಆರಂಭ ಒದಗಿಸಿದ್ರು. ತಾಳ್ಮೆಯಿಂದಲೇ ಬ್ಯಾಂಟಿಂಗ್ ಮಾಡಿದ ಓಪನರ್ಸ್​​​ 92 ರನ್​​ಗಳ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿದ್ರು.
ಮೂರು ಬೌಂಡರಿ ಮೂಲಕ 30ಗಳಿಸಿ ಉತ್ತಮ ಬ್ಯಾಟಿಂಗ್​ ನಡೆಸ್ತಾ ಇದ್ದ ನಾಯಕ ಕರುಣರತ್ನೆ, ಮೊಹಮ್ಮದ್​ ನಬಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ನಿರ್ಗಮಿಸಿದ್ರು. ನಂತರ ಕಣಕ್ಕಿಳಿದ ಲಹಿರು ತಿರಿಮಾನ್ನೆ ಕರುಣಾರತ್ನೆಗೆ ಉತ್ತಮ ಸಾಥ್​ ನೀಡಿದ್ರು. ಆದ್ರೆ ತಿರಿಮಾನ್ನೆ ಆಟ 25ರನ್​ಗಳಿಗೆ ಅಂತ್ಯವಾಯ್ತು.
ಇದರ ಬೆನ್ನಲ್ಲೇ ಕಣಕ್ಕಿಳಿದ ಕುಸಾಲ್​ ಮೆಂಡೀಸ್​​ ಔಟಾದ್ರೆ, ಬಳಿಕ ಕಣಕ್ಕಿಳಿದ ಎಂಜೆಲೋ ಮ್ಯಾಥ್ಯೂಸ್​, ದನಂಜಯ ಡಿ ಸಿಲ್ವಾ ಸೊನ್ನೆ ಸುತ್ತಿದ್ರು. ಮಾತ್ರವಲ್ಲ… ಸಿಂಹಳೀಯ ಬಳಗದ ಯಾವೂಬ್ಬ ಬ್ಯಾಟ್ಸ್​​ಮನ್​ ಕೂಡ ಅಫ್ಘನ್​ ಸ್ಪಿನ್​ ಮಂತ್ರದೆದುರು ನಿಲ್ಲಲಿಲ್ಲ.
ಲಂಕಾ ಪರ ಅಫ್ಘನ್​ ಬೌಲರ್​​ಗಳನ್ನ ದಿಟ್ಟವಾಗಿ ಎದುರಿಸಿ ಕುಸಾಲ್​ ಪೇರೆರಾ ಗಳಿಸಿದ 78ಗಳೇ ತಂಡದ ಪರ ದಾಖಲಾದ ಗರಿಷ್ಠ ಮೊತ್ತವಾಯ್ತು. 8 ಬೌಂಡರಿ ಸಿಡಿಸಿ ಅಬ್ಬರಿಸಿದ ಪೆರೆರಾಗೆ ರಶೀದ್​ ಖಾನ್​ ಪೆವಿಲಿಯನ್​ ದಾರಿ ತೋರಿಸಿದ್ರು.
ಪಂದ್ಯದ ನಡುವೆ ಮಳೆ ಸುರಿದ ಪರಿಣಾಮ 33 ಓವರ್​ಗಳ ಬಳಿಕ ಪಂದ್ಯವನ್ನ ಸ್ಥಗಿತಗೊಳಿಸಲಾಯ್ತು. ಮಳೆ ನಿಂತ ಬಳಿಕವೂ ಅದೃಷ್ಟ ಲಂಕಾ ಪರ ಇರಲಿಲ್ಲ.. ಸಿಂಹಳೀಯ ಬಳಗದ ಪೆವಿಲಿಯನ್​ ಪರೇಡ್​​ ಮುಂದುವರೆಯಿತು. ಪರಿಣಾಮ 36.5 ಓವರ್​ಗಳಿಗೆ ಲಂಕಾ ಇನ್ನಿಂಗ್ಸ್​ ಅಂತ್ಯವಾಯ್ತು. ಅಫ್ಘನ್​ ಪರ ನಬಿ 4 ವಿಕೆಟ್​​ ಕಬಳಿಸಿ ಮಿಂಚಿದ್ರು.
ಡಕ್​ ವರ್ತ್​​ ಲೂಯಿಸ್​​ ನಿಯಮದ ಪ್ರಕಾರ ಅಫ್ಘನ್​ ಬಳಗಕ್ಕೆ 41 ಓವರ್​​ಗಳಲ್ಲಿ 187 ರನ್​ಗಳ ಟಾರ್ಗೆಟ್​​​ ನೀಡಲಾಯಿತು. ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ ಆರಂಭದಲ್ಲಿ ಆಘಾತ ಎದುರಿಸಿತು. ಹೊಡಿಬಡಿ ದಾಂಡಿಗ ಮೊಹಮ್ಮದ್​ ಶಹಜಾದ್​ ಕೇವಲ 7ರನ್​ಗಳಿಸಿ ಲಸಿತ್ ಮಾಲಿಂಗಗೆ ವಿಕೆಟ್​ ಒಪ್ಪಿಸಿದ್ರು. ಇದರ ಬೆನ್ನಲ್ಲೆ ರಹಮತ್​ ಶಾ ಕೂಡ ಪೆವಿಲಿಯನ್​ ಹಾದಿ ಹಿಡಿದ್ರು.
30 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ಹಜರತ್ತುಲ್ಲಾ ನುವಾನ್​ ಪ್ರದೀಪ್​ಗೆ ವಿಕೆಟ್​ ಒಪ್ಪಿಸಿದ್ರು. ನಂತರ ಬಂದ ಯಾವೊಬ್ಬ ಬಾಟ್ಸ್​ಮನ್​ ಕೂಡ ಕ್ರೀಸ್​ ಕಚ್ಚಿ ನಿಲ್ಲಲಿಲ್ಲ. ಅಂತಿಮ ಹಂತದಲ್ಲಿ ನಾಯಕ ಗುಲ್ಬದಿನ್​ ನೈಬ್​ ಇನ್ನಿಂಗ್ಸ್​​ ಕಟ್ಟುವ ಪ್ರಯತ್ನವೂ ಕೈಗೂಡಲಿಲ್ಲ.
ನಜಿಬುಲ್ಲಾ ಝರ್ದಾನ್​​​​​ 43ರನ್​ಗಳಿಸಿ ಹೋರಾಟ ನಡೆಸಿದ್ರಾದ್ರೂ, ರನ್​ ಕದಿಯಲು ಹೋಗಿ ರನೌಟ್​ಗೆ ಬಲಿಯಾದ್ರು. ಅಂತಿಮವಾಗಿ 32.4ಗಳಲ್ಲಿ 152ರನ್​​​ಗಳಿಗೆ ಅಫ್ಘಾನಿಸ್ತಾನ ತಂಡ ಅಲೌಟ್​ ಆಗಿ 34 ರನ್​ಗಳ ಸೋಲುಂಡಿತು. ಶ್ರೀಲಂಕಾ ಪರ ನವಾನ್​​​​​​ ಪ್ರದೀಪ್​ 4, ಲಸಿತ್ ಮಾಲಿಂಗ 3 ವಿಕೆಟ್​ಗಳಿಸಿ ಮಿಂಚಿದ್ರು.
ತನ್ನ ಆರಂಭಿಕ ಪಂದ್ಯದಲ್ಲಿ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಹೋರಾಡಿ ಸೋತಿದ್ದ ಕ್ರಿಕೆಟ್​ ಶಿಶುಗಳು ಶ್ರೀಲಂಕಾಗೂ ಕೂಡ ಶಾಕ್​ ಕೊಟ್ಟು ಕೊನೆಯ ಹಂತದಲ್ಲಿ ಮುಗ್ಗರಿಸಿದ್ರು. ಇತ್ತ ಸೋತು ಸುಣ್ಣವಾಗಿದ್ದ ಶ್ರೀಲಂಕಾ ಪ್ರಯಾಸದ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಮೊದಲ ಜಯ ಕಂಡಿತು.

LEAVE A REPLY

Please enter your comment!
Please enter your name here