ಪಾಕ್, ಲಂಕಾ ಕೈಯಲ್ಲಾಗದ್ದನ್ನು ಮಾಡಿದ ಅಪ್ಘಾನ್..!

0
327

ವಿಶ್ವಕಪ್​ನ 4ನೇ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಆದರೆ, ಅಫ್ಘಾನಿಸ್ತಾನ್ ಚಾಂಪಿಯನ್ ಆಸೀಸ್​ ಗೆ ಸ್ವಲ್ಪ ಮಟ್ಟಿನ ಫೈಟ್ ನೀಡುವಲ್ಲಿ ಯಶಸ್ವಿಯಾಗಿದೆ. ಆಸೀಸ್​ ಎದುರು ಹೋರಾಡಿ ಸೋತಿದೆ ಅಫ್ಘಾನಿಸ್ತಾನ್.  ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 105ರನ್ ಗಳಿಗೆ ಆಲೌಟ್ ಆಗಿ, 7 ವಿಕೆಟ್ ಗಳಿಂದ ಸೋಲನುಭಿಸಿತ್ತು. ಅಂತೆಯೇ ಇಂದು ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ 136ರನ್​ಗಳಿಗೆ ಆಲೌಟ್ ಆಗಿ 10 ವಿಕೆಟ್​ಗಳಿಂದ ಸೋತಿತ್ತು. ಈ ಎರಡೂ ತಂಡಗಳಿಂದ ಆಗದ್ದನ್ನು ಅಫ್ಘಾನ್ ಹಾಲಿ ಚಾಂಪಿಯನ್ ಆಸೀಸ್ ಎದುರು ಸಾಧಿಸಿದೆ.  ಪ್ರಬಲ ಆಸೀಸ್​ ಎದುರು 200ರ ಗಡಿ ದಾಟಿ ಬೇಷ್​ ಎನಿಸಿಕೊಂಡಿದೆ. 
ಬ್ರಿಸ್ಟೇಲ್​ನ ಕೌಂಟ್ರಿ ಗ್ರೌಂಡ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬದಿನ್ ನೈಬ್ ನಾಯಕತ್ವದ ಅಪ್ಘಾನಿಸ್ತಾನ 38.2 ಓವರ್ ಬ್ಯಾಟಿಂಗ್ ಮಾಡಿ 207ರನ್​ ಗಳನ್ನು ಮಾಡಿತು. ನೈಜಿ ಬುಲಾವ್ ಜರ್ದನ್ 51ರನ್, ರೆಹ್ಮತ್ ಶಾ 43, ನಬಿ 31ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದ್ರು. ಆಸೀಸ್ ಪರ ಕುಮಿನ್ಸ್ , ಆ್ಯಡಮ್​ ಜಂಪ್​ 3 ವಿಕೆಟ್, ಸ್ಟೋಯಿನ್ಸ್ 2 ವಿಕೆಟ್​​​​​ ಹಾಗೂ ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದ್ರು.
ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ನಾಯಕ ಆ್ಯರೋನ್ ಫಿಂಚ್ (66) ಡೇವಿಡ್​ ವಾರ್ನರ್ (ಅಜೇಯ 89) ರನ್ ಉತ್ತಮ ಆರಂಭ ಒದಗಿಸಿದ್ರು. 96ರನ್ ಜೊತೆಯಾಟವಾಡಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ನಾಯಕ ನೈಬ್​ ಯಶಸ್ವಿಯಾದ್ರು. ಫಿಂಚ್ ಅವರಿಗೆ ನಬಿ ಪೆವಿಲಿಯನ್ ದಾರಿ ತೋರಿಸಿದ್ರು. ಬಳಿಕ ವಾರ್ನರ್ ಜೊತೆಯಾದ ಉಸ್ಮನ್ ಖ್ವಾಜ 15ರನ್​ ಮಾಡಿ ಔಟಾದರು. ನಂತರ ವಾರ್ನರ್ ಜೊತೆಯಾದ ಸ್ಮಿತ್ (18) ತಂಡದ ಗೆಲುವಿಗೆ ಕೇವಲ 3ರನ್ ಬೇಕಿದ್ದಾಗ ಮುಜೀಬ್​ ಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಬಂದ ಮ್ಯಾಕ್ಸ್​ವೆಲ್ ತಾವು ಎದುರಿಸಿದ ಮೊದಲ ಎಸತವನ್ನೇ ಬೌಂಡರಿಗಟ್ಟಿದರು. ಇದರೊಂದಿಗೆ 34.5 ಓವರ್ ಗಳಲ್ಲಿ ಗುರಿತಲುಪಿ, 7 ವಿಕೆಟ್​ ಗಳ ಜಯಭೇರಿ ಬಾರಿಸಿತು.

LEAVE A REPLY

Please enter your comment!
Please enter your name here