Home ರಾಜ್ಯ ಯಾವ ಜಾತ್ರೆ, ಉತ್ಸವಕ್ಕೂ ಕಮ್ಮಿಯಿಲ್ಲ ಎಂಬಂತೆ ಏಡ್ಸ್ ದಿನಾಚರಣೆ!

ಯಾವ ಜಾತ್ರೆ, ಉತ್ಸವಕ್ಕೂ ಕಮ್ಮಿಯಿಲ್ಲ ಎಂಬಂತೆ ಏಡ್ಸ್ ದಿನಾಚರಣೆ!

ಕೊಪ್ಪಳ:  ಏಡ್ಸ್ ಅಂದರೆ ಸಾಕು ದೂರ ಹೋಗೋ ಈ ಕಾಲದಲ್ಲಿ ಇಲ್ಲೊಂದು ಕಡೆ ವಿಶ್ವ ಏಡ್ಸ್ ದಿನಾಚರಣೆಯನ್ನು ಯಾವುದೇ ಊರಿನ ಜಾತ್ರೆ, ಉತ್ಸವಕ್ಕೂ ಕಮ್ಮಿ ಇಲ್ಲ ಅನ್ನೊರೀತಿ ಆಚರಿಸಿದ್ದಾರೆ.

ಹೌದು ಕೊಪ್ಪಳದ ಗಂಗಾವತಿಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜಾಥಾದುದ್ದಕ್ಕೂ ಡೊಳ್ಳು ಕುಣಿತ, ಯಕ್ಷಗಾನ ನೃತ್ಯ, ಮಕ್ಕಳಿಂದ‌ ಸಾಂಸ್ಕೃತಿಕ ನೃತ್ಯ, ನವನವೀನ ವೇಷ ಭೂಷಣ ಧರಿಸಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಏಡ್ಸ್ ದಿನಾಚರಣೆ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.ಇನ್ನೂ ಹಾಸ್ಯ ದಿಗ್ಗಜ ಪ್ರಾಣೇಶಯವರು ತಮ್ಮ ಹಾಸ್ಯದ ಶೈಲಿಯಲ್ಲಿಯೇ ಏಡ್ಸ್ ಬಗ್ಗೆ ಮತ್ತು ಕಾಂಡೋಮ್ ಬಳಕೆ ಬಗ್ಗೆ ಹೇಳುತ್ತಾ ಮುಂದಿನ ದಿನಗಳಲ್ಲಿ ಪ್ರೌಢಶಾಲಾ ಶಿಕ್ಷಣದಲ್ಲಿ ಏಡ್ಸ್ ಜಾಗೃತಿ ಮೂಡಿಸುವ ಕುರಿತು ಒಂದು ಪಠ್ಯವನ್ನು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ನಗರದ ಪ್ರಮುಖ ಬೀದಿಗಳಾದ ಬಾಬು ಜಗಜೀವರಾಮ್ ವೃತ್ತ, ಅಂಬೇಡ್ಕರ್ ವೃತ್ತ, ಪಂಪಾ ವೃತ್ತ, ಬಸವಣ್ಣ ಸರ್ಕಲ್, ಗಾಂಧಿವೃತ್ತ, ಗಣೇಶ ಸರ್ಕಲ್, ನೀಲಕಂಠೇಶ್ವರ ವೃತ್ತ, ಶ್ರೀಕೃಷ್ಣ ದೇವರಾಯ ವೃತ್ತ ಸೇರಿದಂತೆ ನಾನಾ ಕಡೆ  ಜಾಥಾ ಸಾಗಿತು. ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments