ವರ್ಲ್ಡ್​​ಕಪ್​ ಸೋಲಿನ ಬಗ್ಗೆ ಕ್ಯಾಪ್ಟನ್​ ಕೊಹ್ಲಿ ಹೇಳಿದ್ದೇನು?

0
989

ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ವರ್ಲ್ಡ್​​​ಕಪ್​​ನಲ್ಲಿ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 18ರನ್​ಗಳಿಂದ ಸೋಲನುಭವಿಸಿತು. ಈ ಸೋಲಿನೊಂದಿಗೆ 3ನೇ ಭಾರಿ ಭಾರತ ವಿಶ್ವ ಚಾಂಪಿಯನ್ ಆಗುತ್ತೆ ಅನ್ನೋ ಕನಸುಕಂಡಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಟೀಮ್ ಇಂಡಿಯಾದ ಸೋಲನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. ಆದರೆ, ಇದೊಂದು ಆಟವಷ್ಟೇ.. ಸೋಲು-ಗೆಲುವು ಇದ್ದಿದ್ದೇ..! ಅದೃಷ್ಟ ವಿರಾಟ್​ ಪಡೆಯ ಜೊತೆಗಿರಲಿಲ್ಲ ಎಂದಷ್ಟೇ ಹೇಳಿ ಸಮಾಧಾನ ಪಟ್ಟುಕೊಳ್ಳಬೇಕು.
ಸೆಮಿಫೈನಲ್​ ಸೋಲಿನ ಬಗ್ಗೆ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಮುಕ್ತವಾಗಿ ಮಾತಾಡಿದ್ದಾರೆ. 45 ನಿಮಿಷಗಳ ಕೆಟ್ಟ ಆಟ ನ್ಯೂಜಿಲೆಂಡ್​ ವಿರುದ್ಧದ ಮ್ಯಾಚನ್ನೇ ನಮ್ಮಿಂದ ಕಸಿದು ಕೊಂಡಿತು. ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಮ್ಯಾಚ್​ ಕೈಚೆಲ್ಲಿದ್ವಿ. ಮೊದಲ 45 ನಿಮಿಷಗಳ ಕಾಲ ಜಾಗರೂಕರಾಗಿದ್ದರೆ ಬಹುಶಃ ಫಲಿತಾಂಶವೇ ಬೇರೆ ಇರ್ತಿತ್ತು ಅಂತ ಅವರು ಹೇಳಿದ್ದಾರೆ.
ಇನ್ನು ಜಡೇಜಾ ಬಗ್ಗೆ ಕೊಹ್ಲಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಜಡೇಜಾ ಕಳೆದ ಎರಡು ಮ್ಯಾಚ್​ಗಳಲ್ಲೂ ಒಳ್ಳೆಯ ಪ್ರದರ್ಶನ ತೋರಿದ್ರು. ಧೋನಿ ಮತ್ತು ಜಡೇಜಾ ಪಾರ್ಟನರ್ ಶಿಪ್ ಚೆನ್ನಾಗಿತ್ತು. ಟಾಪ್​ ಆರ್ಡರ್​ನಲ್ಲಿ ಒಳ್ಳೆಯ ಆಟ ಬರದೇ ಇದ್ದುದೇ ಸೋಲಿಗೆ ಕಾರಣವಾಯ್ತು ಅಂದ್ರು..!

LEAVE A REPLY

Please enter your comment!
Please enter your name here