ಸಚಿನ್ ರೆಕಾರ್ಡ್ ಬ್ರೇಕ್ ; ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ..!

0
1989

ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿಗೆ ಸುಮ್ ಸುಮ್ನೆ ರನ್ ಮಷಿನ್ ಅಂತ ಬಿರುದು ಬಂದಿರೋದಲ್ಲ. ವಿರಾಟ್​ ಕೊಹ್ಲಿ ಬ್ಯಾಟಿಂಗ್ ಇಳಿದ್ರು ಅಂದ್ರೆ ರನ್ ಮಳೆ ಗ್ಯಾರೆಂಟಿ. ವಿರಾಟ್ ಬ್ಯಾಟ್​ನಿಂದ ರನ್ ಹರಿದು ಬಂದಿಲ್ಲ ಅಂದ್ರೆ ಆ ದಿನ ಎದುರಾಳಿ ತಂಡದ ಅದೃಷ್ಟ ನೆಟ್ಟಗಿತ್ತು ಎಂದರ್ಥ.
ವಿಶ್ವ ಸಮರದಲ್ಲಿಂದು ಅಸಲಿ ಆಟ ನಡೆಯುತ್ತಿದೆ. ಟಾಸ್ ಗೆದ್ದ ಪಾಕಿಸ್ತಾನ ಭಾರತಕ್ಕೆ ಬ್ಯಾಟಿಂಗ್ ಮಾಡಿ ಅಂತ ಆಮಂತ್ರಣ ನೀಡಿ ಹಿಗ್ಗಾಮುಗ್ಗ ರನ್ ಹೊಡೆಸಿಕೊಳ್ತಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರೆಕಾರ್ಡ್ ಅನ್ನು ಮುರಿದು ಮತ್ತೊಂದು ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.
ಅತೀ ವೇಗವಾಗಿ 11 ಸಾವಿರ ರನ್ ಗಡಿ ದಾಟಿದ ವಿಶ್ವದ ಮೊದಲ ಆಟಗಾರ ಅನ್ನೋ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಇಂದು 57 ರನ್ ಗಳಿಸಿದ್ದಾಗ ಈ ದಾಖಲೆ ಬರೆದರು. 230ನೇ ಏಕದಿನ ಪಂದ್ಯವಾಡುತ್ತಿರುವ ಕೊಹ್ಲಿ ಒಟ್ಟು 222 ಇನ್ನಿಂಗ್ಸ್​ಗಳಿಂದ 11 ಸಾವಿರ ರನ್ ಗಡಿ ದಾಟಿದ್ದಾರೆ. ಈ ಮ್ಯಾಚ್​ಗೂ ಮುನ್ನ ವಿರಾಟ್ 221 ಇನ್ನಿಂಗ್ಸ್ ಗಳಿಂದ 10,943ರನ್ ಗಳಿಸಿದ್ದರು. 11 ಸಾವಿರ ರನ್​ಗಳಿಗೆ 57ರನ್ ಬೇಕಿತ್ತು. ಅದನ್ನು ಪೂರೈಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.
11 ಸಾವಿರ ರನ್​​​ಗಳಿಗೆ ಸಚಿನ್ ತೆಂಡೂಲ್ಕರ್ 276 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಆಸೀಸ್ನ ಮಾಜಿ ಕ್ಯಾಪ್ಟನ್ ರಿಕಿಪಾಂಟಿಂಗ್ 288 ಇನ್ನಿಂಗ್ಸ್ ಗಳಲ್ಲಿ ಬ್ಯಾಟ್​ ಬೀಸಿ 11 ಸಾವಿರ ರನ್ ಮಾಡಿದ್ದರು.

LEAVE A REPLY

Please enter your comment!
Please enter your name here