Saturday, October 1, 2022
Powertv Logo
Homeಈ ಕ್ಷಣಸಿಟಿ ಹೃದಯ ಭಾಗದಲ್ಲಿ ಕಾಮಗಾರಿ, ಜನರಿಗೆ ಕಿರಿಕಿರಿ

ಸಿಟಿ ಹೃದಯ ಭಾಗದಲ್ಲಿ ಕಾಮಗಾರಿ, ಜನರಿಗೆ ಕಿರಿಕಿರಿ

ಬೆಂಗಳೂರು: ಒಂದು ಕಡೆ ಬುಲ್ಡೋಜರ್‌ಗಳ ಸದ್ದು, ಮತ್ತೊಂದು ಕಡೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳ ಆಕ್ರೋಶ, ಮತ್ತೊಂದು ಕಡೆ ಕೆಟ್ಟ ರಸ್ತೆಯಲ್ಲೇ ಶಾಪಿಂಗ್ ಮಾಡುತ್ತಿರುವ ಜನ. ಹೌದು ಕಳೆದ ಕೆಲವು ದಿನಗಳಿಂದ ಸಂಪಿಗೆ ರಸ್ತೆ ಮಲ್ಲೇಶ್ವರಂನಲ್ಲಿ ಈ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿದೆ.ಹೌದು,ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವೈಟ್‌ ಟ್ಯಾಪಿಂಗ್‌ ಕಾಮಗಾರಿ ಆರಂಭವಾಗಿದೆ. ಈಗ ಮಲ್ಲೇಶ್ವರದಲ್ಲಿ ಸರದಿ ಬಂದಿದ್ದು,.ಕಾಮಗಾರಿಯನ್ನು ಶೀಘ್ರವಾಗಿ ಮುಗಿಸೋದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.ಹೀಗಾಗಿ ಸಂಪಿಗೆ ರಸ್ತೆಯ ಒಂದು ಭಾಗವನ್ನು ಬಂದ್ ಮಾಡಲಾಗಿದೆ.ಇದರಿಂದ ಅತಿ ಲಘು ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.ಕೇವಲ ಬೈಕ್ ಹಾಗೂ ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.ಹೀಗಾಗಿ ಇಲ್ಲಿ ಬೀದಿ ಬದಿ ವ್ಯಾಪಾರವನ್ನು ನಂಬಿಕೊಂಡು ಜೀವನ ನಡೆಸುವವರಿಗೆ ಸಂಕಷ್ಟ ಎದುರಾಗಿದೆ. ಮತ್ತೊಂದು ಕಡೆ ಅಂಗಡಿಯವರು ಕೋವಿಡ್ ಸಂಕಷ್ಟದ ಬಳಿಕ ನಮಗೆ ಮತ್ತೊಂದು ಸಮಸ್ಯೆ ಎದುರಾಗಿದೆ.ಕೊಂಚ ಸುಧಾರಿಸುತ್ತಿದೆ ಅನ್ನುವಸ್ಟರಲ್ಲಿಯೇ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.ಇದರಿಂದ ನಮಗೆ ಭಾರಿ ನಷ್ಟ ಅಂತ ತಿಳಿಸುತ್ತಿದ್ದಾರೆ.

ಸರಿಸುಮಾರು ಒಂದು ಕಿಲೋಮೀಟರ್‌ ರಸ್ತೆಯನ್ನು ಬಂದ್‌ ಮಾಡಲಾಗುತ್ತಿದೆ.ಆದರೆ, ಈ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಪರ್ಯಾಯ ರಸ್ತೆ ಇಲ್ಲದಾಗಿದೆ.ಸದ್ಯ ರಸ್ತೆಯ ಮಧ್ಯಭಾಗದಲ್ಲಿ ವಿಭಜಕಗಳನ್ನು ಅಳವಡಿಸಲಾಗಿದ್ದು, ಕಾಂಟ್ರ್ಯಾಕ್ಟ್‌ಗಳು ಕೆಲಸ ಆರಂಭಿಸಿದ್ದಾರೆ. ಹೀಗಾಗಿ 500 ಮೀಟರ್ ಕೆಲಸ ಸಂಪೂರ್ಣ ಮುಗಿಸಿ ಮತ್ತೆ ಹಂತ ಹಂತವಾಗಿ ಕೆಲಸ ಕೈಗೆತ್ತಿಕೊಳ್ಳಬೇಕು, ಪಾದಚಾರಿ ಮಾರ್ಗ ಹಾಗೂ ರಸ್ತೆಯನ್ನು ಕಿತ್ತು ಹಾಕಿದ್ರೆ ಕಷ್ಟ ಆಗುತ್ತದೆ. ಹಬ್ಬಗಳ ಸೀಸನ್ ಇರೋದರಿಂದ ಯುಗಾದಿಗೆ ಚೆನ್ನಾಗಿ ವ್ಯಾಪಾರ ಆಗುತ್ತೆ . ನಮಗೆ ಸಮಸ್ಯೆ ಕೊಡಬೇಡಿ ಅಂತ ಅಧಿಕಾರಿಗಳ ವಿರುದ್ಧ ಗಲಾಟೆ ನಡೆಸಿದ್ರು.

ಸದ್ಯ 6 ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದು ಬಿಬಿಎಂಪಿ ಹೇಳುತ್ತಿದೆ.ಆದ್ರೆ,ವೈಟ್‌ ಟಾಪಿಂಗ್‌ ಹೆಸರಿನಲ್ಲಿ ಅಧಿಕಾರಿಗಳು ಸಾಕಷ್ಟು ಹಣವನ್ನು ನುಂಗಿ ನೀರು ಕುಡಿದಿರುವ ಆರೋಪವಿದೆ. ಸದ್ಯ ಸದಾ ಟ್ರಾಫಿಕ್‌ನಿಂದ ಗಿಜಿಗುಡುವ ಈ ರಸ್ತೆ ಬಂದ್‌ ಮಾಡಿದ್ದು ಟ್ರಾಫಿಕ್‌ ಸಮಸ್ಯೆ ಎದುರಾಗಿದೆ.ಹೀಗಾಗಿ ಬಿಬಿಎಂಪಿ ಬೇರೆ ಭಾಗದಲ್ಲಿ ವಿಳಂಬ ಮಾಡಿದಂತೆ ಈ ಕಾಮಗಾರಿಯನ್ನು ವಿಳಂಬ ಮಾಡದೇ ಕೆಲಸ ಮುಗಿಸಿ ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಬೇಕಿದೆ.

 

- Advertisment -

Most Popular

Recent Comments