Homeದೇಶ-ವಿದೇಶರೈತ ಸಾಲ ಮನ್ನಾ ಮಾಡೋ ತನ್ಕ ಮೋದಿಗೆ ರೆಸ್ಟ್​ ಮಾಡೋಕೆ ಬಿಡಲ್ವಂತೆ ರಾಹುಲ್​ಗಾಂಧಿ

ರೈತ ಸಾಲ ಮನ್ನಾ ಮಾಡೋ ತನ್ಕ ಮೋದಿಗೆ ರೆಸ್ಟ್​ ಮಾಡೋಕೆ ಬಿಡಲ್ವಂತೆ ರಾಹುಲ್​ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡುವ ತನಕ ಅವರನ್ನು ವಿಶ್ರಾಂತಿ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್​ಗಾಂಧಿ ಹೇಳಿದ್ದಾರೆ.

ಮಧ್ಯಪ್ರದೇಶ ಹಾಗೂ ಛತ್ತೀಸ್​ಗಡ್​ನಲ್ಲಿ ಈಗಾಗಲೇ ರೈತ ಸಾಲ ಮನ್ನಾ ಮಾಡಿದ್ದೇವೆ. ಪ್ರಧಾನಿ ಮೋದಿ ಯಾವುದೇ ರೈತ ಸಾಲ ಮನ್ನಾ ಮಾಡಿಲ್ಲ ಎಂದು ರಾಹುಲ್​ ಗಾಂಧಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ. ಎಲ್ಲ ವಿರೋಧ ಪಕ್ಷಗಳೂ ಒಟ್ಟಾಗಬೇಕೆಂಬ ಕರೆ ನೀಡಿದ ರಾಹುಲ್​ ಗಾಂಧಿ, ರೈತರೂ, ವಿರೋಧ ಪಕ್ಷಗಳೂ ಒಂದಾಗಿ ರೈತರ ಸಾಲಮನ್ನಾ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಅಂದಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಛತ್ತೀಸ್​ಗಡ್​ ಹಾಗೂ ಮಧ್ಯಪ್ರದೇಶದಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments