ನಾಳೆಯಿಂದ ಆಸ್ಟ್ರೇಲಿಯಾದಲ್ಲಿ ಮಹಿಳಾ ಟಿ20 ವರ್ಲ್ಡ್ಕಪ್ ಹಂಗಾಮ ಶುರು. ಮೊದಲ ಪಂದ್ಯದಲ್ಲಿ ಆಲ್ರೌಂಡರ್ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ ಅತಿಥೇಯ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ನಾಯಕಿ ಹರ್ಮನ್ಪ್ರೀತ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತಂಡಕ್ಕೆ ಬಲವಾಗಿದ್ದಾರೆ. ರಾಜೇಶ್ವರಿ ಗಾಯಕ್ವಾಡ್ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ. 23 ವರ್ಷದ ಆಟಗಾರ್ತಿ ಕ್ಲಾಸಿಕ್ ಪ್ಲೇಯರ್ ಸ್ಮೃತಿ ಮಂದಾನ, ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಕನ್ನಡತಿ ವೇದಾಕೃಷ್ಣಮೂರ್ತಿ ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ಇನ್ನುಳಿದಂತೆ ಆಲ್ರೌಂಡರ್ ದೀಪ್ತಿ ಶರ್ಮಾ, ಬೌಲರ್ಗಳಾದ ಶಿಖಾ ಪಾಂಡೆ, ರಾಧಾ ಯಾದವ್ ಯಾವ್ದೇ ಸಂದರ್ಭದಲ್ಲೂ ತಮಡಕ್ಕೆ ನೆರವಾಗಬಲ್ಲ ಆಟಗಾರರು. ಹೀಗಾಗಿ ಇವರೆಲ್ಲಾ ಅದ್ಭುತ ಪ್ರದರ್ಶನ ತೋರಿದರೆ ಈ ಬಾರಿ ವರ್ಲ್ಡ್ಕಪ್ ನಮ್ದೇ..!
ಇದುವರೆಗೆ ನಡೆದ ಆರು ಟಿ20 ವರ್ಲ್ಡ್ಕಪ್ಗಳಲ್ಲಿ 2009, 2010 ಮತ್ತು 2018ರಲ್ಲಿ ನಾಲ್ಕರಘಟ್ಟ ತಲುಪಿದ್ದೇ ಭಾರತೀಯ ವನಿತೆಯರ ಇದುವರೆಗಿನ ಸಾಧನೆ. ಈ ಸಲ ಮಿಥಾಲಿ ರಾಜ್ ಮತ್ತು ಜುಲಾನ್ ಗೋಸ್ವಾಮಿ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿಯುತ್ತಿದ್ದು, ಅದು ತಂಡದ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ.
ಭಾರತ ತಂಡ ಹೀಗಿದೆ : ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಜೆಮಿಯಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಶಿಖಾ ಪಾಂಡೆ, ಪೂಜಾ ವಸ್ತಾರ್ಕರ್, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ರಾಧಾ ಯಾದವ್, ಅರುಂಧತಿ ರೆಡ್ಡಿ.
ನಾಳೆಯಿಂದ ಮಹಿಳಾ ಟಿ20 ವರ್ಲ್ಡ್ಕಪ್ – ಇವ್ರು ಅಬ್ಬರಿಸಿದ್ರೆ ಕಪ್ ನಮ್ದೆ..!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on