Monday, August 15, 2022
Powertv Logo
Homeವಿದೇಶಇಂದಿನಿಂದ ಮಹಿಳಾ ಟಿ-20 ವರ್ಲ್ಡ್ ಕಪ್ - ಭಾರತಕ್ಕೆ ನ್ಯೂಜಿಲೆಂಡ್ ಸವಾಲು..!

ಇಂದಿನಿಂದ ಮಹಿಳಾ ಟಿ-20 ವರ್ಲ್ಡ್ ಕಪ್ – ಭಾರತಕ್ಕೆ ನ್ಯೂಜಿಲೆಂಡ್ ಸವಾಲು..!

ಇಂದಿನಿಂದ ಕೆರಿಬಿಯನ್​ ನಾಡಲ್ಲಿ ಮಹಿಳಾ ಟಿ-20 ವಿಶ್ವಕಪ್ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹರ್ಮನ್​ಪ್ರೀತ್​ ಕೌರ್​ ನಾಯಕತ್ವದ ಟೀಮ್ ​ಇಂಡಿಯಾ ಸೆಣೆಸಲಿದೆ.
ಕಳೆದ ಒಡಿಐ ವರ್ಲ್ಡ್ ಕಪ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದ ಟೀಮ್​ಇಂಡಿಯಾ ರನ್ನರ್​ ಸ್ಥಾನಕ್ಕೆ ತೃಪ್ತಿ ಪಟ್ಕೊಂಡಿತ್ತು. ಇದೀಗ ಹೊಸ ಭರವಸೆ ಹಾಗೂ ಯುವ ಶಕ್ತಿಯೊಂದಿಗೆ ಟ್ರೋಫಿ ಗೆಲ್ಲುವ ಕನಸು ಹೊತ್ತಿರೋ ಭಾರತೀಯ ವನಿತೆಯರಿಗೆ ಮೊದಲ ಪಂದ್ಯವೇ ಸವಾಲಿನಿಂದ ಕೂಡಿದೆ. ​
ICC ಟಿ20 ರ್ಯಾಂಕಿಂಗ್​ (Ranking) ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರೋ ಭಾರತೀಯ ವನಿತೆಯರು, 2ನೇ ಸ್ಥಾನದಲ್ಲಿರೋ ನ್ಯೂಜಿಲೆಂಡ್​ ವಿರುದ್ಧ ಆಡಲಿದ್ದಾರೆ. ಇದುವರೆಗೆ ಭಾರತ ನ್ಯೂಜಿಲೆಂಡ್​ ವಿರುದ್ಧ ಆಡಿದ 7 ಇಂಟರ್ ನ್ಯಾಷನಲ್ ಟಿ-20 ಮ್ಯಾಚ್ ಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದಿದೆ.
ಟೀಮ್ ​ಇಂಡಿಯಾಕ್ಕೆ ಇದು 5ನೇ ಟಿ20 ವರ್ಲ್ಡ್ ಕಪ್. ಒಂದು ಬಾರಿ ಸೆಮಿಫೈನಲ್​ ಪ್ರವೇಶಿಸಿದ್ದು ಬಿಟ್ಟರೆ, ಟಿ20 ವರ್ಲ್ಡ್ ಕಪ್ ನಲ್ಲಿ ಗಮನಾರ್ಹ ಸಾಧನೆ ಟೀಮ್ ​ಇಂಡಿಯಾದಿಂದ ಬಂದಿಲ್ಲ. ಆದ್ರೆ, ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಲಿಸ್ಟ್​​ನಿಂದ ​ಇಂಡಿಯಾವನ್ನ ತೆಗೆದು ಹಾಕೋಕಾಗಲ್ಲ..

ವೇದಾ ಕರುನಾಡ ಏಕೈಕ ಪ್ರತಿನಿಧಿ..!

ಕರ್ನಾಟಕದ ಕಡೂರು ಮೂಲದ ವೇದಾ ಕೃಷ್ಟಮೂರ್ತಿ, ಸದ್ಯ ವಿಶ್ವಕಪ್​ ಪ್ರವಾಸ ಕೈಗೊಂಡಿರುವ ತಂಡದಲ್ಲಿರುವ ಏಕಮಾತ್ರ ಕರ್ನಾಟಕದ ಪ್ರತಿನಿಧಿ. ಈ ಹಿಂದಿನ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿದ್ದ ವೇದಾ 30.60 ಸರಾಸರಿಯಲ್ಲಿ 153 ರನ್​ ಸಿಡಿಸಿದ್ರು. ODI ವಿಶ್ವಕಪ್​ ನಲ್ಲಿ ಟೀಮ್​ಇಂಡಿಯಾದ ಬೆಸ್ಟ್​ ಫಿನಿಶರ್ ಆಗಿ ರೂಪುಗೊಂಡಿದ್ದ ಇವರ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.

ವೇದಾ ಜೊತೆಗೆ ಅನುಭವಿ ಆಟಗಾರ್ತಿ ಮಿಥಾಲಿ ರಾಜ್​, ಸ್ಮೃತಿ ಮಂದಾನಾ, ಹರ್ಮನ್​​ ಪ್ರೀತ್​ ಕೌರ್​ ಹಾಗೂ ಜೆಮಿಮಾಹ್ ರೋಡ್ರಿಗಸ್ ಭಾರತದ ಬ್ಯಾಟಿಂಗ್​ ಶಕ್ತಿಯಾಗಿದ್ದಾರೆ. ಪೂನಮ್​ ಯಾದವ್​ ಬೌಲಿಂಗ್​ನಲ್ಲಿ ಉತ್ತಮ ಕಾಣಿಕೆ ನೀಡಬಲ್ಲರು. ಆದ್ರೆ, ಹಿರಿಯ ಆಟಗಾರ್ತಿ ಜೂಲಾನ್​ ಗೋಸ್ವಾಮಿ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.

ಟಿ-20 ವಿಶ್ವಕಪ್​ನ ಟೀಮ್​ಇಂಡಿಯಾ ವೇಳಾಪಟ್ಟಿ
NOV-9 ಭಾರತ Vs ನ್ಯೂಜಿಲೆಂಡ್ 8.30 PM
NOV-11 ಭಾರತ Vs ಪಾಕಿಸ್ತಾನ 8.30 PM
NOV-15 ಭಾರತ Vs ಐರ್ಲೆಂಡ್ 8.30 PM
NOV-17 ಭಾರತ Vs ಆಸ್ಟ್ರೇಲಿಯಾ 8.30 PM
ಒಟ್ಟಿನಲ್ಲಿ, ಕಳೆದ ಏಕದಿನ ವಿಶ್ವಕಪ್​ನಲ್ಲಿ ಪೈನಲ್​ ತಲುಪಿ ನಿರಾಸೆ ಅನುಭವಿಸಿದ್ದ ಟೀಮ್​ಇಂಡಿಯಾ ವನಿತೆಯರು ಟಿ-20 ವಿಶ್ವಕಪ್​ನಲ್ಲಿ ಪ್ರಶಸ್ತಿ ಗೆಲ್ಲಲಿ ಅನ್ನೋದು ಅಸಂಖ್ಯಾತ ಭಾರತೀಯರ ಕನಸಾಗಿದೆ. ಈ ಕನಸು ನನಸಾಗಲಿ ಅನ್ನೋದೆ ನಮ್ಮ ಆಶಯ. ವಿಶ್ವಕಪ್​ ಗೆಲ್ಲುವ ದೊಡ್ಡ ಕನಸನೊಂದಿಗೆ ಇಂದಿನಿಂದ ಅಭಿಯಾನ ಆರಂಭಿಸಲಿರೋ ಮಹಿಳಾ ಮಣಿಗಳಿಗೆ ನಮ್ಮಿಂದ ಪವರ್​ಫುಲ್​ ಹಾರೈಕೆ.
ವಸಂತ್​ ಮಳವತ್ತಿ. ಸ್ಪೋರ್ಟ್ಸ್​​ ಬ್ಯೂರೋ ಪವರ್​ ಟಿವಿ

- Advertisment -

Most Popular

Recent Comments