ಬೆಂಗಳೂರು: ಜೂಲಿ ಎಂಬ ಬೀದಿ ನಾಯಿ ಸತ್ತಿರುವುದಕ್ಕೆ ಎನ್ಜಿಒ ಹಾಗೂ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈದ್ಯರ ಎಡವಟ್ಟಿನಿಂದ ಜೂಲಿ ಎಂಬ ನಾಯಿ ಮೃತಪಟ್ಟಿದ್ದು, ನೆವಿನಾ ಕಾಮತ್ ಎಂಬವರು ಸುಷ್ಮಾ ಎಂಟರ್ ಪ್ರೈಸಸ್ ಎಂಬ ಹೆಸರಿನ ಎನ್ಜಿಒ ಹಾಗೂ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂತಾನ ಹರಣ ಚಿಕಿತ್ಸೆಗೆಂದು ಜೂಲಿಯನ್ನು ಎನ್ಜಿಒ ಸಿಬ್ಬಂದಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಶಸ್ತ್ರ ಚಿಕಿತ್ಸೆಯಾದ 2 ದಿನದಲ್ಲೇ ನಾಯಿ ಮೃತಪಟ್ಟಿದೆ. ಸರಿಯಾಗಿ ಶಸ್ತ್ರ ಚಿಕಿತ್ಸೆ ಮಾಡದೆ ಜೂಲಿ ಮೃತಪಟ್ಟಿದೆ ಎಂದು ನೆವಿನಾ ಆರೋಪಿಸಿದ್ದಾರೆ. ನಾಯಿ ಸತ್ತಿರೋದಕ್ಕೆ ಎನ್ಜಿಒ ಮತ್ತು, ಡಾಕ್ಟರ್ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
order zithromax 250 mg
zithromax breastfeeding