ಹೆಂಡ್ತಿ ಬೈಯ್ತಾಳೆ ಮನೆಗೆ ಬರ್ಬೇಡಿ ಎಂದ ಡಿಸಿಎಂ !

0
570

ಪುಣೆ : ಮನೆಗೆ ಬರ್ಬೇಡಿ ಹೆಂಡ್ತಿ ಬೈಯ್ತಾಳೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್​ ಪವಾರ್​ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. 
ಸರ್ಕಾರದಿಂದ ಅಧಿಕೃತವಾಗಿ ಬಂಗಲೆ ಇನ್ನೂ ದೊರೆಯದ ಕಾರಣ ತಮ್ಮ ಮನೆಯ ಹಾಲ್​ನಲ್ಲೇ ಜನರ ಕುಂದು ಕೊರತೆಗಳನ್ನು ವಿಚಾರಿಸುತ್ತಿದ್ದಾರೆ. ಇದು ಅವರ ಪತ್ನಿ ಸುನೇತ್ರಾ ಕೋಪಕ್ಕೆ ಕಾರಣವಾಗಿದ್ದು, ನಿಮಗೆ ಬಂಗಲೆ ಸಿಗುವವರೆಗೂ ನಾನು ಮನೆಯಲ್ಲಿ ಇರುವುದಿಲ್ಲ ಎಂದು  ಹೇಳಿದ್ದಾರೆ ಎನ್ನಲಾಗಿದೆ.  
ಆದ್ದರಿಂದ ಸಣ್ಣಪುಟ್ಟ ವಿಷಯಗಳಿಗೆಲ್ಲಾ ನನ್ನನ್ನು ಭೇಟಿಯಾಗಲು ಮನೆಗೆ ಬರಬೇಡಿ ಎಂದು  ಅಜಿತ್​ ಪವಾರ್​ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

LEAVE A REPLY

Please enter your comment!
Please enter your name here