Monday, August 15, 2022
Powertv Logo
Homeರಾಜ್ಯಗೆಲುವಿನ ಅಮಲಲ್ಲಿ‘ಕಿರಿಕ್​ ಬ್ಯೂಟಿ’!

ಗೆಲುವಿನ ಅಮಲಲ್ಲಿ‘ಕಿರಿಕ್​ ಬ್ಯೂಟಿ’!

ಬೆಂಗಳೂರು: ಕನ್ನಡದ ಸುಂದರಿ ರಶ್ಮಿಕ ಮಂದಣ್ಣ ಯಾವಾಗಲೂ ವಿವಾದಗಳಿಂದಲೇ ಸುತ್ತುವರೆಯಲ್ಪಟ್ಟ ನಟಿ. ಯಾವಾಗಲೂ ಯಾವುದಾದರೊಂದು ಕಿರಿಕ್ ನಿಂದಾಗಿ ಜನರು ಇವರನ್ನು ಟೀಕಿಸುತ್ತಲೇ ಇರುತ್ತಾರೆ. ಆದರೆ ರಶ್ಮಿಕ ಮಾತ್ರ ಅದಕ್ಕೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ.

ಇದೀಗ ನಟಿ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಸಿನಿಮಾದ ಗೆಲುವಿನಲ್ಲಿ ತೇಲುತ್ತಿದ್ದಾರೆ. ಸದ್ಯಕ್ಕಂತೂ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಒಂದು ವರ್ಗದ ನೆಟ್ಟಿಗರು ಈ ಕೊಡಗಿನ ಕುವರಿಯನ್ನು ಯಾವಾಗಲೂ ಟ್ರೋಲ್​ ಮಾಡುತ್ತಾರೆ. ಯಾರು ಎಷ್ಟೇ ಟ್ರೋಲ್​ ಮಾಡಿದರೂ ಅವರ ಖ್ಯಾತಿ ಕಮ್ಮಿ ಆಗಿಲ್ಲ.

ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈಗ ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಬರೋಬ್ಬರಿ 25 ಮಿಲಿಯನ್​ಗಿಂತಲೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಈ ಮೈಲಿಗಲ್ಲು ಮುಟ್ಟಿರುವುದಕ್ಕೆರಶ್ಮಿಕ  ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments

<