Home ದೇಶ-ವಿದೇಶ ಪ್ಯಾರಾಚೂಟ್​​​​​​​​ನಿಂದ ಜಿಗಿದ ಅಭಿನಂದನ್‌ರನ್ನು ಪಾಕ್ ವಂಚಿಸಿದ್ದು ಹೇಗೆ?

ಪ್ಯಾರಾಚೂಟ್​​​​​​​​ನಿಂದ ಜಿಗಿದ ಅಭಿನಂದನ್‌ರನ್ನು ಪಾಕ್ ವಂಚಿಸಿದ್ದು ಹೇಗೆ?

ನವದೆಹಲಿ :  ವಿಂಗ್​ ಕಮಾಂಡರ್ ಅಭಿನಂದನ್ ಅವರನ್ನು ರಣಹೇಡಿ ಪಾಕಿಸ್ತಾನ ಹಿಡಿದಿಟ್ಟು ಕೊಂಡಿರೋದು ಗೊತ್ತೇ ಇದೆ. ಪರಮ ಪಾಪಿ ರಾಷ್ಟ್ರ ಪಾಕ್​ಗೆ ನೇರಾ ನೇರ ಹೋರಾಡಲು ತಾಕತ್ತಿಲ್ಲ. ಮೋಸದಿಂದಲೇ ವಂಚಿಸೋದು ಅದರ ಜಾಯಮಾನ. ಹಾಗೆಯೇ ಅಲ್ಲಿನ ಒಂದಿಷ್ಟು ಪ್ರಜೆಗಳೂ ಅಂಥಾ ನೀಚರೇ.
ಪಾಕ್​ನ ಯುದ್ಧ ವಿಮಾನ ಎಫ್​-16ಅನ್ನು ಹೊಡೆದುರುಳಿಸುವಾಗ ಭಾರತದ ಮಿಗ್-21 ಪಾಕ್‌ಗೆ ನುಗ್ಗುತ್ತೆ. ಈ ವೇಳೆ ಪಾಕಿಸ್ತಾನ ಸೇನೆ ಮಿಗ್‌-21 ಮಲೆ ದಾಳಿ ಮಾಡಿದಾಗ ಅದರಲ್ಲಿದ್ದ ಅಭಿನಂದನ್ ಪ್ಯಾರಚೂಟ್​ ನಿಂದ ಜಿಗಿಯುತ್ತಾರೆ. ಈ ವೇಳೆ ಪಾಕಿಸ್ತಾನದ ಸ್ಥಳೀಯರು ಅವರನ್ನು ಮೋಸದಿಂದ ಹಿಡಿದಿಟ್ಟುಕೊಳ್ಳುತ್ತಾರೆ. ಪ್ಯಾರಾಚೂಟ್​ನಿಂದ ಹಾರಿ ಪುಟ್ಟ ಸರೋವರಕ್ಕೆ ಬಿದ್ದ ಅಭಿನಂದನ್​ ಅವರ ಬೆನ್ನಿಗೆ ಬಲವಾದ ಏಟು ಬಿದ್ದಿತ್ತು. ಆಗ ಅವರನ್ನು ಪಾಕಿಸ್ತಾನದ ಸ್ಥಳೀಯರು ಸುತ್ತುವರೆದಿದ್ದಾರೆ. ಅಭಿನಂದನ್ ಅವರು ನಾನು ಎಲ್ಲಿದ್ದೇನೆ ಅಂತ ಗೊತ್ತಾಗದೇ ಗೊಂದಲದಲ್ಲಿದ್ದರು, ಅಲ್ಲಿ ಸುತ್ತುವರೆದ ಯುವಕರನ್ನು ಕೇಳಿದಾಗ, ನೀವು ಭಾರತದಲ್ಲೇ ಇದ್ದೀರಿ ಅಂದಿದ್ದಾರೆ. ಯಾವ ಭಾಗದಲ್ಲಿದ್ದೇನೆ ಅಂತ ಅಭಿನಂದನ್ ಪ್ರಶ್ನಿಸಿದಾಗ ಆ ಸ್ಥಳೀಯರು ಖಿಲ್ಲಾನ್ ಅಂತ ಸುಳ್ಳು ಬೊಗಳೆ ಬಿಟ್ಡಿದ್ದಾರೆ.ಆದ್ರೆ, ಅಭಿನಂದನ್ ಪಾಕ್ ಕಪಿಮುಷ್ಟಿಯಲ್ಲಿ ಬಂಧಿಯಾಗಿದ್ದರೂ ಭಾರತದ ಸೇನೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡದೇ ಶೌರ್ಯ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments