HomeTechnologyಮುಂದಿನ ಪೀಳಿಗೆಗೆ ಚಂದ್ರ ಆಗಲಿದ್ದಾನಾ ಆವಾಸ ಸ್ಥಾನ ?

ಮುಂದಿನ ಪೀಳಿಗೆಗೆ ಚಂದ್ರ ಆಗಲಿದ್ದಾನಾ ಆವಾಸ ಸ್ಥಾನ ?

ಶಶಿ, ಹಿಮಾಂಶು, ಸೋಮ ಅಂತೆಲ್ಲ ನಾನ ಹೆಸರುಗಳಿಂದ ಕರೆಸಿಕೊಳ್ಳುವ ಚಂದಮಾಮ ಎಲ್ಲರಿಗೂ ಬಹುಬೇಗ ಹತ್ತಿರವಾಗ್ತಾನೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ.. ಚಂದ್ರನಲ್ಲಿರುವ ಹೊಳಪು, ಹಾಗು ಭೂಮಿಯ ಉಪಗ್ರಹ ಅನ್ನೋದು ಪ್ರಮುಖ ಕಾರಣ.. ಹೀಗಾಗಿ ಚಂದಿರನ ಒಡಲು ಎಲ್ಲರಿಗು ಕೌತುಕದ ತಾಣವಾಗಿದೆ.. ಇದೇ ಕಾರಣಕ್ಕೆ ಹಲವು ದಶಕಗಳಿಂದ ನಾನಾ ದೇಶದ ವಿಜ್ಞಾನಿಗಳು ಚಂದ್ರನ ಮೇಲ್ಮಯ್ಯ ಬಗ್ಗೆ, ಇಲ್ಲಿರುವ ನೀರಿನ ಅಂಶದ ಬಗ್ಗೆ, ಚಂದ್ರನ ಮೇಲೆ ಮಾನವ ಜೀವಿಸೋದಕ್ಕೆ ಇರುವ ಅವಕಾಶಗಳ ಕುರಿತು ಇಂದಿಗೂ ವಿಜ್ಞಾನಿಗಳು ಅಧ್ಯಾಯನವನ್ನ ನಡೆಸಿಕೊಂಡು ಬಂದಿದ್ದಾರೆ.

ಇನ್ನು ಮಾನವ ಚಂದ್ರನ ಮೇಲೆ ಕಾಲಿಟ್ಟು 50 ವರ್ಷಗಳು ಕಳೆದಿದ್ರು ಕೂಡ ಇದುವರೆಗೂ ಯಾವುದೇ ಒಂದು ನಿಗೂಢವಾದ ವಿಚಾರಗಳು ಇಂದಿಗೂ ಕೂಡ ಬೆಳಕಿಗೆ ಬಂದಿಲ್ಲ.. ಇಂದಿನವರೆಗೆ ಚಂದ್ರನ ಮೇಲೆ ಇಳಿದಿದ್ದ ಮಾನವ ಬಾಹ್ಯಾಕಾಶ ನೌಕೆಗಳು ಚಂದಿರನ ಒಡಲಿನಿಂದ ಹಲವು ಕಲ್ಲುಗಳನ್ನ ತಂದಿದ್ವು.. ಈ ಬಗ್ಗೆ ಹಲವು ವರ್ಷಗಳಿಂದ ಅಧ್ಯಯನ ನಡೆಸಿದ್ದ ವಿಜ್ಞಾನಿಗಳ ತಂಡಕ್ಕೆ ಇದುವರೆಗು ಯಾವುದೇ ಮಹತ್ವದ ಮಾಹಿತಿಗಳು ಪತ್ತೆಯಾಗಿರ್ಲಿಲ್ಲ… ಆದ್ರೆ ಈಗ ಪ್ರಕಟವಾಗಿರೋ ವರದಿಯೊಂದು ಮುಂದಿನ ಪೀಳಿಗೆಯ ಮಾನವನಿಗೆ ಚಂದ್ರನ ಮೇಲೆ ತನ್ನ ನೆಲೆ ಸ್ಥಾಪಿಸೋದಕ್ಕೆ ಅನುಕೂಲವಾಗೋ ಹಾಗೆ ಇದೆ, ಅಷ್ಟಕ್ಕೂ ಈ ವರದಿ ಬಹಿರಂಗ ಪಡಿಸಿರೋ ಪ್ರಮುಖವಾದ ಅಂಶ ಅಂದ್ರೆ ಅದು ಚಂದ್ರನ ಮೇಲೆ ಆಕ್ಸಿಜನ್​ ಇದೆ ಅನ್ನೋದು.

ಹೌದು.. ಇಂತಹದ್ದೊಂದು ವರದಿಯನ್ನ ವಿಜ್ಞಾನಿಗಳ ತಂಡ ಪ್ರಕಟಿಸಿದ್ದು, ಅವರ ಪ್ರಕಾರ ಚಂದ್ರನ ಮೇಲೆ ಸುಮಾರು 8 ಶತಕೋಟಿ ಜನ್ರಿಗೆ ಬೇಕಾದ ಹಾಗು 1 ಲಕ್ಷ ವರ್ಷಗಳವರೆಗೆ ಉಳಿಯಬಹುದಾದಷ್ಟು ಆಕ್ಸಿಜನ್​​ ಚಂದ್ರನ ಮೇಲಿದೆ ಅಂತ ಹೇಳಿದ್ದಾರೆ. ಚಂದ್ರನ ಮೇಲಿನ ಬಂಡೆಗಳ ಪದರವನ್ನು ರೆಗೋಲಿತ್ ಎಂದು ಕರೆಯಲಾಗಿದೆ. ಈ ಪದರ ಹೇರಳವಾದ ಆಮ್ಲಜನಕವನ್ನು ಹೊಂದಿದೆ. ಆದ್ರೆ ಇಲ್ಲಿರುವ ಸಮಸ್ಯೆ ಏನು ಅಂದ್ರೆ ಚಂದ್ರನ ಮೇಲ್ಮೈನಲ್ಲಿರೋ ಈ ಆಮ್ಲಜನಕ ಇನ್ನೂ ಅನಿಲ ರೂಪಕ್ಕೆ ಬಂದಿಲ್ಲ. ಹಾಗಾಗಿ ರೆಗೋಲಿತ್​ ಪದರಂದಿದ ಆಮ್ಲಜನಕವನ್ನು ಹೊರತೆಗೆಯೋ ಬಗ್ಗೆ ವಿಜ್ಞಾನಿಗಳು ಈಗ ಅನ್ವೇಷಣೆಯನ್ನ ನಡೆಸ್ತಾ ಇದ್ದಾರೆ.

ಇನ್ನು ಚಂದ್ರನ ಮೇಲೆ ಬಳಸಬಹುದಾದ ಆಮ್ಲಜನಕವನ್ನು ಚಂದ್ರನ ಮೇಲಿನ ಪದರದಿಂದ ಹೊರತೆಗೆಯಬಹುದು ಅಂತ ವಿಜ್ಞಾನಿಗಳು ಹೇಳ್ತಿದ್ದಾರೆ.ನಂತ್ರ ಇದನ್ನ ಮಾನವನ ಉಪಯೋಗಕ್ಕಾಗಿ ಬಳಸಬಹುದು ಅನ್ನೋ ಅಂಶವನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದು ವರದಿ ಪ್ರಕಾರ, ಚಂದ್ರನ ಮೇಲ್ಮೈ ಪದರವು 40 ರಿಂದ 45 ಪ್ರತಿಶತಃ ಆಮ್ಲಜನಕದಿಂದ ಮಾಡಲ್ಪಟ್ಟಿದೆ. ಆದ್ರೆ ಇದು ಸಿಲಿಕಾನ್, ಅಲ್ಯೂಮಿನಿಯಂ, ಕಬ್ಬಿಣದಂತಹ ಖನಿಜಗಳನ್ನು ಒಳಗೊಂಡಿರುವ ರೆಗೋಲಿತ್​ನ ಒಳಗೆ ಸೇರಿಕೊಂಡಿದೆ ಅಂತ ಉಲ್ಲೇಖಿಸಲಾಗಿದೆ.. ಒಂದು ವೇಳೆ ಇದು ನಿಜವಾದ್ರೆ ಚಂದ್ರನ ಮೇಲೆ ಆಕ್ಸಿಜನ್​ ಇದ್ರು ಯಾವುದೇ ಪ್ರಯೋಜನವಿಲ್ಲ, ಯಾಕಂದ್ರೆ ಇಷ್ಟೋಂದು ಖನೀಜಾಂಶವಿದ್ರೆ ಚಂದ್ರನಿಂದ ಆಕ್ಸಿಜನ್​ ಬೇರ್ಪಡಿಸೋದು ಕನಸ್ಸಿನ ಮಾತಾಗೋದ್ರಲ್ಲಿ ಅನುಮಾನವಿಲ್ಲ.

ಸದ್ಯದ ಮಟ್ಟಿಗೆ ವಿದ್ಯುದ್ವಿಭಜನೆಯ ಪ್ರಕ್ರಿಯೆಯನ್ನ ಬಳಸಿಕೊಂಡು ಈ ಖನಿಜಗಳಿಂದ ಬಳಸಬಹುದಾದ ಆಮ್ಲಜನಕವನ್ನು ಬೆರ್ಪಡಿಸಬಹುದು ಅಂತ ಇದೇ ವರದಿ ಪ್ರತಿಪಾದಿಸ್ತಾ ಇದೆ. ಒಂದು ವೇಳೆ ಖನೀಜದಲ್ಲಿನ ಆಕ್ಸಿನ್​ನ ಬೇರ್ಪಡಿಸೋದಕ್ಕೆ ಸಾಧ್ಯವಾದ್ರು ಕೂಡ ಅದ್ರಂದಲೂ ಯಾವುದೇ ಪ್ರಯೋಜನವಿಲ್ಲ ಯಾಕಂದ್ರೆ ಚಂದ್ರನ ಮೇಲೆ ಪತ್ತೆಯಾಗಿರೋ ಆಕ್ಸಿಜನ್​ ಪ್ರಮಾಣ ಸುಮಾರು 1 ಲಕ್ಷ ವರ್ಷದವರೆಗು ಸಾಕಾಗುವಂತದ್ದು, ಹೀಗಾಗಿ ಭೂಮಿಯ ಈ ಪ್ರಯೋಗವನ್ನ ಭೂಮಿಯ ಮೇಲೆ ನಡೆಸಲಾಗಿದ್ದು, ಆಮ್ಲಜನಕದಿಂದ ಅಲ್ಯೂಮಿನಿಯಂ ಅನ್ನು ಪ್ರತ್ಯೇಕಿಸಲು ವಿದ್ಯುದ್ವಿಭಜನೆಯನ್ನು ಬಳಸೋದ್ರಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಆದ್ರೆ ಈ ಪ್ರಯೋಗದಲ್ಲಿ ಆಮ್ಲಜನಕ ಉಪಉತ್ಪನ್ನವಾಗಿದೆ. ಆದ್ರೆ, ಚಂದ್ರನ ಮೇಲ್ಮೈನಲ್ಲಿರೋ ಆಕ್ಸಿಜನ್​ ಮುಖ್ಯ ಉತ್ಪನ್ನವಾಗಿದೆ ಇದು ಈಗ ವಿಜ್ಞಾನಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಒಟ್ಟಾರೆಯಾಗಿ ಚಂದ್ರನ ಮೇಲ್ಮೈನಲ್ಲಿ ಬಳಸಬಹುದಾದ ಆಕ್ಸಿಜನ್​ ಸಿಕ್ಕಿದ್ರು ಕೂಡ ಇದು ಬಳಸೋದಕ್ಕೆ ಬಹಳ ಕಷ್ಟ ಅನ್ನೋದು ಹಲವು ವರದಿಗಳಲ್ಲಿ ಕಂಡು ಬಂದಿರೋ ಅಂಶ. ಸದ್ಯದ ಮಟ್ಟಿಗೆ ಈ ಆಕ್ಸಿಜನ್​ ಅನ್ನ ಬೇರ್ಪಡಿಸೋದಕ್ಕೆ ಸಾಧ್ಯವಿಲ್ದೇ ಇದ್ರು ಮುಂದಿನ ಪೀಳಿಗೆಗೆ ಸಾಧ್ಯವಾಗೊ ಹಾಗೆ ಮಾಡ್​ಬಹುದು ಅನ್ನೋದು ವಿಜ್ಞಾನಿಗಳ ವಾದ.. ಹಾಗೇನಾದ್ರು ಚಂದ್ರನ ಮೇಲೆ ಮಾನವ ಉಸಿರಾಡೋ ಹಾಗಾದ್ರೆ ಈ ಜಗತ್ತಿನ ಜೀವಿಗಳಿಗೆ ಚಂದ್ರನ ಒಡಲು ಅವಾಸ ಸ್ಥಾನವಾಗೋದ್ರಲ್ಲಿ ಅನುಮಾನವಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

Recent Comments