‘ಸೋತರೂ ಮಂಡ್ಯ ಬಿಡಲ್ಲ’ ಅಂದ್ರು ನಿಖಿಲ್ ಕುಮಾರಸ್ವಾಮಿ..!

0
32
 ಮಂಡ್ಯದಲ್ಲಿ ಸೋತರೂ ಕೂಡ ನಾನು ಮಂಡ್ಯ ಬಿಡುವುದಿಲ್ಲ. ಮಂಡ್ಯ ಜನರೊಂದಿಗೇ ಮುಂದೆಯೂ ಇರುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಮಾತನಾಡಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ಲೊಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಮಂಡ್ಯ ಜೆಡಿಎಸ್ ಮುಖಂಡರ ಜೊತೆ ನಿಖಿಲ್ ಕುಮಾರ ಸ್ವಾಮಿ ಮೊದಲ ಬಾರಿಗೆ ಜೊತೆ ಚರ್ಚೆ ನಡೆಸಿ ಬೇಸರದಲ್ಲಿದ್ದ ತಳಮಟ್ಟದ ಸಂಘಟನೆಗೆ ಒಲವು ನೀಡಿದ್ದಾರೆ. ‘ ಮಂಡ್ಯದಲ್ಲಿ ತೋಟ ಮಾಡಿ, ಮನೆ ಕಟ್ಟೋವರೆಗೂ ಅಲ್ಲಿಯೇ ಒಂದು ಶೆಡ್ ನಿರ್ಮಾಣ ಮಾಡಿ ವಾಸಮಾಡಲು ಸಿದ್ಧನಿದ್ದೇನೆ, ಸೋತರೂ ಸಹ ನಾನು ಮಂಡ್ಯ ಜನರಿಂದ ದೂರ ಉಳಿಯುವುದಿಲ್ಲ ಮಂಡ್ಯ ಜನರಿಗೆ ತನ್ನ ಕೈಲಾದಷ್ಟು ಸಹಾಯ ಮಾಡಬೇಕು’ ಎಂದು ನಿಖಿಲ್​​ ಆ ವಿಡಿಯೋದಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here