ಕಮಲ ಮುಡೀತಾರಾ ಧೋನಿ!?

0
207

ಭಾರತೀಯ ಕ್ರಿಕೆಟ್​ಗೆ ಹೊಸ ಭಾಷ್ಯ ಬರೆದ ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ ಬಳಿಕ ಬಿಜೆಪಿ ಸೇರಿ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.

ಹೌದು! ಕೆಲ ದಿನಗಳಿಂದ ಎಲ್ಲೆಡೆ ಧೋನಿ ನಿವೃತ್ತಿಯದೇ ಮಾತು ಅನುರಣಿಸ್ತಿದೆ… ಧೋನಿಗೆ ಈ ವಿಶ್ವಕಪ್ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯ ಅಂತಾನೇ ಹೇಳಲಾಗ್ತಿತ್ತು. ಕೆಲವರು ಧೋನಿ ನಿವೃತ್ತಿಗೆ ಇದೇ ಸಕಾಲ ಎಂದು ಹೇಳಿದ್ರೆ, ಇನ್ನು ಕೆಲವರು ಧೋನಿ ನಿವೃತ್ತಿ ನೀಡಬಾರದು ಅಂತನೂ ಹೇಳುತ್ತಿದ್ದಾರೆ. ಈ ನಡುವೆ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಸಂಜಯ್​​ ಪಾಸ್ವಾನ್​ ‘ಧೋನಿ ಕ್ರಿಕೆಟ್​ಗೆ ವಿದಾಯ ಹೇಳಿ ರಾಜಕೀಯ ಪ್ರವೇಶಿಸುವ ಸಾಧ್ಯತೆ ಇದೆ. ಅಷ್ಟೇಅಲ್ಲ, ಅವರು ಬಿಜೆಪಿ ಸೇರ್ತಾರೆ. ಈ ಬಗ್ಗೆ ದೀರ್ಘಕಾಲದಿಂದ ಚರ್ಚೆ ನಡೆಯುತ್ತಿದೆಯಾದ್ರು, ಅವರ ನಿವೃತ್ತಿಯ ನಂತರವೇ ಈ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಇನ್ನು, ಕಳೆದ ಲೋಕಸಭೆ ಎಲೆಕ್ಷನ್​ಗೂ ಮುನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ತನ್ನ ‘ಸಂಪರ್ಕ್​ ಫಾರ್​ ಸಮರ್ಥನ್’​ ಎಂಬ ಅಭಿಯಾನಕ್ಕೆ ಧೋನಿಯವರ ಮನೆಗೆ ಭೇಟಿ ನೀಡಿ ಧೋನಿ ಬೆಂಬಲ ಕೋರಿದ್ದರು. ಜೊತೆಗೆ ಧೋನಿಗೆ ಬಿಜೆಪಿ ಸೇರಲು ಆಹ್ವಾನವನ್ನು ನೀಡಿದ್ದರು. ಇದೀಗ ಮತ್ತೆ ಈ ವಾದಕ್ಕೆ ಪುಷ್ಠಿ ಸಿಕ್ಕಿದೆ. ಆದ್ರೆ, ಈ ಬಗ್ಗೆ ಯಾವೂದೇ ಪ್ರತಿಕ್ರಿಯೆ ನೀಡದಿರುವ ಧೋನಿ ನಡೆ ನಿಗೂಢವಾಗಿದೆ.

ಧೋನಿ ಮೂಲತಃ ಜಾರ್ಖಂಡ್​ನವರಾಗಿದ್ದು ಈ ವರ್ಷದ ಕೊನೆಯಲ್ಲಿ ಜಾರ್ಖಂಡ್​ ವಿಧಾನಸಭಾ ಎಲೆಕ್ಷನ್​ ಕೂಡ ನಡೆಯಲಿದೆ. ಹೀಗಾಗಿ ಈ ವಿಚಾರ ಮಹತ್ವವನ್ನು ಪಡೆದುಕೊಂಡಿದ್ದು, ಒಂದು ವೇಳೆ ಧೋನಿ ನಿವೃತ್ತಿ ಘೋಷಿಸಿದ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡ್ರೆ ಧೋನಿ ಅವರನ್ನು ಜಾರ್ಖಂಡ್​ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.

 

LEAVE A REPLY

Please enter your comment!
Please enter your name here