ಜೆಡಿಎಸ್​​ ಸೇರೋ ಬಗ್ಗೆ ಬಸವರಾಜ್ ದಢೇಸೂಗೂರ್ ಹೇಳಿದ್ದೇನು ?

0
115

ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವ್ರ ಜೊತೆ ಬಿಜೆಪಿ ಶಾಸಕ ಬಸವರಾಜ್ ದಢೇಸೂಗೂರ್ ಇದ್ದ ಫೋಟೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಫೋಟೋ ಹರಿದಾಡುತ್ತಿದ್ದಂತೆ ದಢೇಸೂಗೂರ್ ಅವರು ಬಿಜೆಪಿಗೆ ಗುಡ್​ ಬೈ ಹೇಳಿ ಜೆಡಿಎಸ್ ಸೇರ್ತಾರೆ ಅನ್ನೋ ಮಾತು ಕೇಳಿಬಂದಿದೆ. ಈ ಬಗ್ಗೆ ಸ್ವತಃ ದಢೇಸೂಗೂರ್  ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪವರ್ ಟಿವಿ ಜೊತೆ ಮಾತನಾಡಿದ ಅವರು ‘’ನಾನು ಬಿಜೆಪಿಯಲ್ಲಿ ಇದ್ದೇನೆ. ಮುಂದೆಯೂ ಬಿಜೆಪಿಯಲ್ಲಿಯೇ ಇರುತ್ತೇನೆ. ಕಳೆದ ಆಗಸ್ಟ್ ನಲ್ಲಿ ನನ್ನ ಕ್ಷೇತ್ರಕ್ಕೆ ಕರೆಂಟ್ ನ ಕೊರತೆ ಇತ್ತು. ಹೆಚ್ಚು ವಿದ್ಯುತ್​​ ನೀಡುವಂತೆ ಮನವಿ ಮಾಡಲೆಂದು ಸಿಎಂ ಕುಮಾರಸ್ವಾಮಿಯವರನ್ನು ನಾನು ಭೇಟಿ ಮಾಡಿದ್ದೆ. ಆಗ ನನ್ನ ಹುಡುಗರು ಫೋಟೋ ತೆಗೆದಿದ್ದರು. ಆ ಫೋಟೋ ಈಗ ವೈರಲ್ ಆಗಿದೆ. ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿಮಾಡೋದ್ರಲ್ಲಿ ತಪ್ಪೇನು ಇಲ್ಲ. ಹಳೆಯ ಫೋಟೋಗೆ ಬಣ್ಣ ಕಟ್ಟುವುದು ಬೇಡ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ’’ ಎಂದು ಸ್ಫಷ್ಟನೆ ನೀಡಿದರು.

 

LEAVE A REPLY

Please enter your comment!
Please enter your name here