Home ರಾಜ್ಯ ಕಂಡೋರ ಹೆಂಡತಿ ಕರೆದೊಯ್ದ ಮಂಡ್ಯ ಪೇದೆ : ಪತ್ನಿ ಕಳೆದುಕೊಂಡ ಗಂಡನಿಂದ ಎಸ್ಪಿಗೆ ದೂರು

ಕಂಡೋರ ಹೆಂಡತಿ ಕರೆದೊಯ್ದ ಮಂಡ್ಯ ಪೇದೆ : ಪತ್ನಿ ಕಳೆದುಕೊಂಡ ಗಂಡನಿಂದ ಎಸ್ಪಿಗೆ ದೂರು

ಮಂಡ್ಯ: ನಿಮ್ಮ ಇಲಾಖೆಯ ಪೊಲೀಸ್ ಪೇದೆಯೊಬ್ಬ ತನ್ನ ಪತ್ನಿಯನ್ನು ಅಪಹರಿಸಿದ್ದಾನೆ. ಆತನಿಂದಾಗಿ ತನ್ನ ಸಂಸಾರ ಬೀದಿಗೆ ಬಂದಿದೆ. ದಯಮಾಡಿ ನನಗೆ ನ್ಯಾಯಕೊಡಿಸಿ ಎಂದು ಪಕ್ಕದ ಚಾಮರಾಜನಗರ ಜಿಲ್ಲೆಯ ವ್ಯಕ್ತಿಯೊಬ್ಬ ಮಂಡ್ಯ ಎಸ್ಪಿಗೆ ದೂರು ನೀಡಿರುವ ವಿಚಿತ್ರ ಪ್ರಕರಣ ಸಕ್ಕರೆನಾಡಿನಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯ ಎಸ್ಪಿ ಈ ರೀತಿ ದೂರು ಕೊಟ್ಟಿರೋ ವ್ಯಕ್ತಿಯ ಹೆಸ್ರು ನಾಗರಾಜಪ್ಪ ಅಂತಾ. ಈತ ಪಕ್ಕದ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ‌ ಮುಳ್ಳೂರು ನಿವಾಸಿ. ಕೊಳ್ಳೆಗಾಲ ಪಟ್ಟಣದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು‌ ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದ‌. ಆದ್ರೆ ಅದೇನಾಯ್ತೋ ಏನೋ ಈತನ‌ ಹೆಂಡತಿ ಶಿಲ್ಪಳನ್ನು ಮಂಡ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿರೋ ಹರೀಶ್ ಎಂಬಾತ ಪಟಾಯಿಸಿಕೊಂಡಿದ್ದಾನೆ.‌ ಅಲ್ದೆ ಆಕೆಯನ್ನು ಗಂಡ‌ ಮತ್ತು ಮಕ್ಕಳಿಂದ ದೂರ ಮಾಡಿ ತನ್ನ ಜೊತೆ ಕರೆದೊಯ್ದಿದ್ದಾನೆಂದು ಪತಿ ನಾಗರಾಜಪ್ಪ ಆರೋಪಿಸಿದ್ದಾನೆ. ಅಲ್ಲದೆ ಇದ್ರಿಂದಾಗಿ ನನ್ನ ಕುಟುಂಬ ಇದೀಗ ಬೀದಿಗೆ ಬಿದಿದೆ. ಹಾಗಾಗಿ ತನ್ನ ಹೆಂಡತಿಯನ್ನು ಹುಡುಕಿಕೊಟ್ಟು ಆ ಪೇದೆಯಿಂದ ತನ್ನ ಪತ್ನಿಯನ್ನು ದೂರ ಮಾಡಿಸಿಕೊಡಿ ಎಂದು ಪತ್ನಿ ಕಳೆದುಕೊಂಡ ವ್ಯಕ್ತಿ ಮಂಡ್ಯ ಎಸ್ಪಿ ಕಚೇರಿಗೆ ದೂರು ನೀಡಿದ್ದಾನೆ.

ಇದಕ್ಕೂ ಮುನ್ನ ಈ ಸಂಬಂಧ ನಾಗರಾಜಪ್ಪ ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪತ್ನಿ ಕರೆದೊಯ್ದ ಪೇದೆ ವಿರುದ್ದ ದೂರು ನೀಡಿದ್ದಾರೆ. ಅಲ್ಲಿನ ಪೊಲೀಸರು ದೂರು ಸ್ವೀಕರಿಸಿಲ್ಲವಂತೆ. ಪೇದೆ ಜೊತೆ ಹೋಗಿರೋ ಆಕೆ ಬಂದು ದೂರು ನೀಡ್ಲಿ ಹೋಗು ಅಂತಾ ದಬಾಯಿಸಿ ಕಳಿಸಿದ್ದಾರಂತೆ. ಇದ್ರಿಂದ ಕಂಗಾಲಾಗಿರೋ ಈ ವ್ಯಕ್ತಿ ಮಂಡ್ಯ ಎಸ್ಪಿಗೆ ದೂರು ನೀಡಿದ್ದಾನೆ. ಪತ್ನಿ ಕರೆದೊಯ್ದಿರೋ ಪೇದೆ ಹರೀಶ್ ತನ್ನ ಹೆಂಡತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ತನ್ನ ಈ ಸಂಬಂಧದ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಸಿ ಬ್ಲಾಕ್ ಮೇಲ್ ಮಾಡ್ತಿದ್ದು, ನನಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾನೆ. ನನಗೆ ಇಬ್ಬರು ಹೆಣ್ಣು ಮಕ್ಕಳಿವೆ. ಹೆಂಡತಿಯನ್ನು ಆತನ ಸೆರೆಯಿಂದ ಬಿಡಿಸಿಕೊಡಿ ಮತ್ತು ಬೆದರಿಕೆ ಹಾಕಿರೋ ಪೇದೆಗೆ ಶಿಕ್ಷೆ ಕೊಡಿಸಿ ನನಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡ್ತಿದ್ದಾನೆ.

ಒಟ್ಟಾರೆ, ತನ್ನ ಹೆಂಡತಿ ಕರೆದೊಯ್ದಿರೋ ಪೊಲೀಸ್ ಪೇದೆ ವಿರುದ್ದ ಸಂತ್ರಸ್ಥ ಪತಿ ಇದೀಗ ನ್ಯಾಯಕ್ಕಾಗಿ ಮಂಡ್ಯ ಎಸ್ಪಿಯ ಮೊರೆ ಹೋಗಿದ್ದಾನೆ. ಈಗಲಾದ್ರು ಈ ವ್ಯಕ್ತಿಗೆ ಎಸ್ಪಿ ನ್ಯಾಯ ದೊರಕಿಸಿ ಕೊಡ್ತಾರಾ? ಇಲ್ಲ ತಮ್ಮ ಇಲಾಖೆ ಸಿಬ್ಬಂದಿಯನ್ನು ರಕ್ಷಣೆ ಮಾಡಿ ಕೊಳ್ತಾರಾ ಅನ್ನೋದ್ನ‌ ಕಾದು ನೋಡಬೇಕಿದೆ.

-ಡಿ.ಶಶಿಕುಮಾರ್

LEAVE A REPLY

Please enter your comment!
Please enter your name here

- Advertisment -

Most Popular

ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಿ ಎಂದು...

‘ಪಿಬಿ ರಸ್ತೆ ಮೇಲ್ದರ್ಜೆಗೆ ಏರಿಸುವಂತೆ ಗಬ್ಬೂರು ಬೈಪಾಸ್ ಬಂದ್’

ಹುಬ್ಬಳ್ಳಿ: ಪುಣಾ-ಬೆಂಗಳೂರ ಬೈಪಾಸ್ ರಸ್ತೆಯು ಕಿರಿದಾಗಿದ್ದು, ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗಬ್ಬೂರು ಬೈಪಾಸ್ ಗೆ...

ಜ. 26 ರಂದು ಪರ್ಯಾಯ ರೈತ ಗಣರಾಜ್ಯೋತ್ಸವ ಪರೆಡ್: ಶಾಂತಕುಮಾರ

ಹುಬ್ಬಳ್ಳಿ : ದೆಹಲಿ ರೈತರ ಹೋರಾಟ ಬೆಂಬಲಿಸಿ ಜ. 26 ರಂದು ರೈತರ ಪರ್ಯಾಯ ಗಣರಾಜ್ಯೋತ್ಸವ ಪರೆಡ್ ಹಮ್ಮಿಕೊಳ್ಳಲಾಗಿದೆ. ಅಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ , ಮೋಟಾರ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ...

‘ಠಾಕ್ರೆ ಟ್ವೀಟ್ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ’

ಬೆಂಗಳೂರು: ಮಾಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸುತ್ತಿವೆ. ಉದ್ದವ್ ಠಾಕ್ರೆ ಭೂತದಹನ...

Recent Comments