Monday, May 23, 2022
Powertv Logo
Homeರಾಜ್ಯಆಸ್ತಿಗಾಗಿ ಸಂಬಂಧಿಕರಿಂದಲೇ ವಿಧವೆ ಕೊಲೆ

ಆಸ್ತಿಗಾಗಿ ಸಂಬಂಧಿಕರಿಂದಲೇ ವಿಧವೆ ಕೊಲೆ

ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿ ಆಸ್ತಿಗಾಗಿ ಸಂಬಂಧಿಕರೇ ವಿಧವೆಯನ್ನು ಕೊಲೆ ಮಾಡಿದ್ದಾರೆ. ಗಂಗಮ್ಮ (45) ಕೊಲೆಯಾದ ದುರ್ದೈವಿ. 

ಆಗಸ್ಟ್ 3 ರಂದು ಗಂಗಮ್ಮ ನಾಪತ್ತೆಯಾಗಿದ್ದರು. 7 ವರ್ಷದ ಹಿಂದೆ ಪತಿಯನ್ನ ಕಳೆದುಕೊಂಡಿದ್ದ,
ಮಕ್ಕಳಿಲ್ಲದ ಗಂಗಮ್ಮ ಒಂಟಿ ‌ಜೀವನ ನಡೆಸುತ್ತಿದ್ದರು. ಅವರ ಹೆಸರಿನಲ್ಲಿದ್ದ ಆಸ್ತಿ ಲಪಟಾಯಿಸಲು ಪತಿಯ ಸಂಬಂಧಿಕರು ಸಂಚು ರೂಪಿಸಿದ್ದರು. ಇತ್ತೀಚೆಗಷ್ಟೆ ನಿವೇಶನವನ್ನು ಗಂಗಮ್ಮ ಮಾರಾಟ ಮಾಡಿದ್ದರು. ಇದಕ್ಕೆ ಕೆಲವು ಸಂಬಂಧಿಕರು ಅಡ್ಡಿಪಡಿಸಲು ಯತ್ನಿಸಿದ್ದರು. ಆದರೆ ಅವರ ವಿಫಲವಾಗಿತ್ತು. ಅದೇ ವಿಚಾರವಾಗಿ ಮನೆಗೆ ನುಗ್ಗಿ ಗಲಾಟೆ ಮಾಡಿ, ಟವೆಲ್​ನಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ಬಳಿಕ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ಕಾವೇರಿ ನದಿಯಲ್ಲಿ ಬಿಸಾಡಿದ್ದಾರೆ ಎನ್ನಲಾಗಿದೆ. 

ಬೆಟ್ಟದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವರಾಜ್, ಕಿರಣ್, ರವಿಶಂಕರ್, ಮಂಜು, ರಾಜೇಶ್ ಹಾಗೂ ವೆಂಕಟೇಶ್​ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಗಂಗಮ್ಮ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಗಂಗಮ್ಮ ಶವಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

 

16 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments