Tuesday, January 18, 2022
Powertv Logo
Homeದೇಶಜಪಾನೀಯರು ದೀರ್ಘಾಯುಷಿಗಳು ಏಕೆ ?

ಜಪಾನೀಯರು ದೀರ್ಘಾಯುಷಿಗಳು ಏಕೆ ?

ಬಹುತೇಕ ರಾಷ್ಟ್ರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಇತ್ತೀಚಿನ ವರ್ಷಗಳಲ್ಲಿ ಹೃದ್ರೋಗ ಕಾಯಿಲೆ ಮತ್ತು ಕ್ಯಾನ್ಸರ್ ನಿಂದ ಮರಣ ಹೊಂದಿದವರ ಜನರ ಅಂಕಿಅಂಶಗಳ ಪ್ರಕಾರ, ಅಂತರರಾಷ್ಟ್ರೀಯ ಹೋಲಿಕೆಯಲ್ಲಿ ಜಪಾನ್  ಅತಿ ಹೆಚ್ಚು ಸರಾಸರಿ ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಟೋಕಿಯೋದ ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಕೇಂದ್ರ ಹೇಳಿದೆ. ಸಂಶೋಧಕರು ಜಪಾನೀಯರ ಜೀವಿತಾವಧಿಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಕೆಂಪು ಮಾಂಸದ ಕಡಿಮೆ ಸೇವನೆ, ನಿರ್ದಿಷ್ಟವಾಗಿ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಮೀನಿನ ಹೆಚ್ಚಿನ ಸೇವನೆಯು ನಿರ್ದಿಷ್ಟವಾಗಿ ಎನ್-3 ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಸೋಯಾಬೀನ್ ಗಳಂತಹ ಆಹಾರಗಳು ಮತ್ತು ಗ್ರೀನ್ ಟೀಯಂತಹ ಸಕ್ಕರೆಯಿಲ್ಲದ ಪಾನೀಯಗಳು ಇದಕ್ಕೆ ಕಾರಣ ಎಂದು ಹೇಳಬಹುದು.

ಹೆಚ್ಚಿನ ನಡಿಗೆ ಜಪಾನೀಯರ ಮೈನ್ ಸೀಕ್ರೆಟ್. ಉತ್ತಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ಆಹಾರದ ಹೊರತಾಗಿ, ಜಪಾನೀಯರು ನಿರ್ದಿಷ್ಟವಾಗಿ ಎರಡು ವಂಶವಾಹಿಗಳಿಂದಾಗಿ ಆನುವಂಶಿಕ ಪ್ರಯೋಜನವನ್ನು ಹೊಂದಿದ್ದಾರೆ. ಡಿಎನ್‌ಎ 5178 ಮತ್ತು ಎನ್‌ಡಿ 2-237ಮೆಟ್ ಜೆನೋಟೈಪ್ ಅನ್ನು ಹೊಂದಿರುತ್ತಾರೆ.ಕಡಿಮೆ ಆಹಾರ ಸೇವಿಸುವುದು, ಜಪಾನಿಯರ ಪರಿಕಲ್ಪನೆಯು ನೀವು ಶೇಕಡಾ 80 ರಷ್ಟು ಭಾಗ ಹೊಟ್ಟೆ ತುಂಬುವಷ್ಟು ಮಾತ್ರ ಊಟ ಮಾಡಬೇಕು ಎನ್ನುವುದಾಗಿದೆ. ಸ್ವಚ್ಛ ಪರಿಸರ ಮತ್ತು ಉತ್ತಮ ಆರೋಗ್ಯ ರಕ್ಷಣಾ ವ್ಯವಸ್ಥೆ ಹೊಂದಿರುತ್ತಾರೆ.ಜಪಾನಿನಲ್ಲಿ, ಕುಟುಂಬಗಳು ನೆಲದ ಮೇಲೆ ಕುಳಿತು ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಅವರ ಆಹಾರದಲ್ಲಿ ಹಣ್ಣುಗಳು, ಒಮೆಗಾ-ಸಮೃದ್ಧ ಮೀನು, ಅಕ್ಕಿ, ಸಂಪೂರ್ಣ ಧಾನ್ಯಗಳು, ಹಸಿರು ಮತ್ತು ಹಸಿ ತರಕಾರಿಗಳನ್ನು ಸೇವಿಸುತ್ತಾರೆ.ಇದು ಜಪಾನೀಯರ ದೀರ್ಘಾಯುಷ್ಯದ ಸೀಕ್ರೆಟ್​ ಆಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments