Tuesday, September 27, 2022
Powertv Logo
Homeದೇಶಲಾಕ್​ಡೌನ್ ಸಡಿಲಿಸುವ ಮುನ್ನ ಎಚ್ಚರ ವಹಿಸಿ : WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್

ಲಾಕ್​ಡೌನ್ ಸಡಿಲಿಸುವ ಮುನ್ನ ಎಚ್ಚರ ವಹಿಸಿ : WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್

ಜಿನೀವಾ: ಕೊರೋನಾ ವೈರಸ್ ಹರಡುವುದನ್ನು ತಡೆಯಲು ಜಗತ್ತಿನಾದ್ಯಂತ ಹೊರಡಿಸಿದ್ದ ಲಾಕ್​ಡೌನ್ ಆದೇಶವನ್ನು ಅನೇಕ ದೇಶಗಳು ಸಡಿಲಿಸುತ್ತಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದು,  ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಸೂಚನೆ ನೀಡಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಬಗ್ಗೆ ಎಚ್ಚರಿಕೆ ನೀಡಿರುವ ಅವರು, ‘ಲಾಕ್​ಡೌನ್ ಸಡಿಲಿಸುವುದರಿಂದ ಜಗತ್ತಿನಲ್ಲಿ ಕೊರೋನಾ ವೈರಸ್ ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಹಾಗಾಗಿ ಲಾಕ್​ಡೌನ್ ಸಡಿಲಿಕೆ ಮಾಡುವ ಮೊದಲು ಎಚ್ಚರಿಕೆಯನ್ನು ವಹಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ ಸೋಂಕಿನ ಬಗ್ಗೆ ಪರೀಕ್ಷಿಸಲು ಅವಶ್ಯಕವಾಗಿ ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು‘ ಎಂದು ಹೇಳಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಮಾಡುತ್ತಿರುವ ದೇಶಗಳು ಹಂತ ಹಂತವಾಗಿ ತುಂಬಾ ಎಚ್ಚರಿಕೆಯಿಂದ ಸಡಿಲಿಕೆ ಮಾಡಬೇಕಾಗುತ್ತದೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಲಾಕ್​ಡೌನ್ ಸಡಿಲಿಸಿದರೆ ಜಗತ್ತಿನಾದ್ಯಂತ ಮತ್ತೊಮ್ಮೆ ಲಾಕ್​ಡೌನ್ ಮಾಡುವ ಸಂದರ್ಭ ಎದುರಾಗುತ್ತದೆ ಎಮದು ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಮಾರಿಯಾ ವ್ಯಾನ್ ಕೆರ್ಖೋವ್ ಕೂಡ ಈ ಬಗ್ಗೆ ಮಾತನಾಡಿ,‘ಲಾಕ್‌ಡೌನ್ ಕ್ರಮಗಳನ್ನು ಶೀಘ್ರವಾಗಿ ತೆಗೆದುಹಾಕಿದರೆ, ವೈರಸ್ ಮತ್ತೆ ಹಬ್ಬುವ ಸಾಧ್ಯತೆ ಇದೆ‘ ಎಂದು ತಿಳಿಸಿದರು.

19 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments