ಇಷ್ಟು ದಿನ ಸೋಂಕಿತರ ಸಂಪರ್ಕದಲ್ಲಿದ್ದರೆ ಅಥವ ಕೆಮ್ಮು, ಸೀನು ಇಂತಹ ಲಕ್ಷಣಗಳಿದ್ದರೇ ಮಾತ್ರ ಕೋರೋನಾ ತಗುಲುವ ಸಾಧ್ಯತೆಗಳಿವೆ ಎಂದು ಜನರು ತಿಳಿದಿದ್ದರು. ಆದ್ರೆ WHOಗೆ ವಿಜ್ಞಾನಿಗಳು ಸಲ್ಲಿಸಿದ ರಿಪೋರ್ಟ್ ಮನುಕುಲವನ್ನೇ ಬೆಚ್ಚಿಬೀಳಿಸುವಂತಿದೆ. ಇದೀಗ ಕೊರೋನಾ ವೈರೆಸ್ ಬಗ್ಗೆ ವಿಜ್ಞಾನಿಗಳು ಅಚ್ಚರಿಯ ವರದಿಯನ್ನು WHO ಗೆ ಸಲ್ಲಿಸಿದ್ದಾರೆ. ಈ ವರದಿಯ ಪ್ರಕಾರ ಕೊರೋನಾ ಮಹಾಮಾರಿ ಗಾಳಿಯಿಂದಲು ಹರಡುತ್ತಿದೆಯಂತೆ. 32 ರಾಷ್ಟ್ರಗಳ 239 ವಿಜ್ಞಾನಿಗಳಿಂದ ಈ ವರದಿ ಮಂಡನೆಯಾಗಿದೆ. ಸದ್ಯ ವಿಜ್ಞಾನಿಗಳ ವರದಿಯನ್ನು WHO ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ಕೆಮ್ಮು, ಸೀನಿನಿಂದ ಮಾತ್ರ ವೈರಸ್ ಹರಡುತ್ತೆ ಎಂದು WHO ಹೇಳಿತ್ತು.