ಬೆಂಗಳೂರು: ದಿನೇ ದಿನೇ ಬಾರ್, ರೆಸ್ಟೋರೆಂಟ್ಗಳಲ್ಲಿ ಮದ್ಯ ಶೇಖರಣೆ ಪ್ರಮಾಣ ಕುಸಿತದಿಂದಾಗಿ ರಾಜ್ಯದ ಮದ್ಯ ಪ್ರಿಯರಿಗೆ ಭಾರಿ ನಿರಾಸೆ ಉಂಟಾಗಿದೆ.
ಮದ್ಯ ಮಾರಟಗಾರರಿಗೆ KSBCL ನಿಯಮ ಸಂಕಷ್ಟಕ್ಕೆ ದೂಡುತಿದ್ದು, ಮದ್ಯದಂಗಡಿಗಳಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗ್ತಿಲ್ಲ ಲಿಕ್ಕರ್ ಹೀಗಾಗಿ ರಾಜ್ಯದ ಮದ್ಯ ಪ್ರಿಯರಿಗೆ ಭಾರಿ ನಿರಾಸೆ ಉಂಟಾಗಿದೆ.
KSBCLನ ನೂತನ ಸಾಫ್ಟ್ವೇರ್ ಅಪ್ಡೇಟ್ನಿಂದ ಮದ್ಯ ಮಾರಾಟಗಾರರಿಗೆ ಸಂಕಷ್ಟ ತಂದೊಡ್ಡಿದ್ದು, ದಿನೇ ದಿನೇ ಬಾರ್, ರೆಸ್ಟೋರೆಂಟ್ಗಳಲ್ಲಿ ಮದ್ಯ ಶೇಖರಣೆ ಪ್ರಮಾಣ ಕುಸಿತಗೊಂಡಿದೆ. ನೂತನ ಸಾಫ್ಟ್ವೇರ್ನಿಂದ ಮದ್ಯ ಮಾರಾಟಗಾರರಿಗೆ ಆರ್ಥಿಕ ಸಂಕಟ ಉಂಟಾಗಿದ್ದು, ಹಳೇ ಪದ್ಧತಿಯಲ್ಲಿ ಮದ್ಯ ಖರೀದಿಗೆ ಅವಕಾಶ ನೀಡುವಂತೆ ಮನವಿಯನ್ನು ಮಾಡಿದ್ದಾರೆ. ಮದ್ಯ ಮಾರಾಟಗಾರರ ಒಕ್ಕೂಟ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದು, ಮನವಿಗೆ ಸ್ಪಂದಿಸದಿದ್ರೆ ಏ. 25ರಂದು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.