ಬೆಂಗಳೂರು: ರಾಜ್ಯದಲ್ಲಿ ಕರ್ಫ್ಯೂ ಹೇರಿಸಿದ್ದು ಯಾರು? ಪ್ರಭಾವಿ ಸಚಿವರ ಮಾತು ಕೇಳಿದ್ರಾ ಎಂಬ ಎಲ್ಲ ಪ್ರಶ್ನೇಗಳಿಗೆ ಸಚಿವ ಸುಧಾಕರ್ ಉತ್ತರ ನೀಡಿದ್ದಾರೆ.
ಕಿಲ್ಲರ್ ಕೊರೋನ ಕಡಿಮೆ ಆಗಿದೆ ಎಂಬ ಬೆನ್ನಲೇ, ಮತ್ತೆ ಕೊರೋನ ಭಯ ಶುರುವಾಗಿದೆ. ಬ್ರಿಟನ್ ನಿಂದ 420 ಜನ ಕರುನಾಡಿಗೆ ಬಂದು ಇಳಿದಿದ್ದಾರೆ.
ಕ್ರಿಸ್ ಮಸ್, ನ್ಯೂಇಯರ್ ಸಮೀಪಿಸುತ್ತಿದೆ. ಜನಸಂದಣಿಯನ್ನು ತಡೆಯಲು ನೈಟ್ ಕರ್ಫ್ಯೂ ಅಸ್ತ್ರವನ್ನು ರಾಜ್ಯ ಸರ್ಕಾರ ಉಪಯೋಗಿಸಿದೆ.
ಮೊದಲು ನೈಟ್ ಕರ್ಫ್ಯೂ ಬೇಡ ಎಂದು ಸಿಎಂ ಯಡಿಯೂರಪ್ಪನವರು ಹೇಳಿದ್ದರು. ಆದರೆ ಆರೋಗ್ಯ ಇಲಾಖೆ ಸಚಿವ ಸುಧಾಕರ್ ತಜ್ಞರ ಸಮಿತಿಯ ಆತಂಕವನ್ನು ಸಿಎಂಗೆ ವಿವರಿಸಿದ್ದಾರೆ. ನೀವು ಕೇವಲ ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ ಅಂತ ಹೇಳಿ. ಉಳಿದ ವಿಚಾರವನ್ನು ನಾನು ನೊಡಿಕೊಳ್ಳುತ್ತೇನೆ ಎಂದರು. ಸಿಎಂ ಹೊರಟ ಬಲಿಕ ನೈಟ್ ಕರ್ಫ್ಯೂ ಬಗ್ಗೆ ಫುಲ್ ಡೀಟೆಲ್ಸ್ ನೀಡಿದರು.