“ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್”..!

0
299

ಟೀಮ್ ಇಂಡಿಯಾ ಯುವ ವಿಕೆಟ್​​ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಸತತ ವೈಪಲ್ಯದಿಂದ ಟೀಕೆಗೆ ಗುರಿಯಾಗ್ತಿದ್ದಾರೆ. ಇದರ ನಡುವೆ ಬಾಂಗ್ಲಾ ವಿರುದ್ಧ ಮಾಡಿದ ಒಂದು ಎಡವಟ್ಟಿನಿಂದ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗ್ತಿದ್ದಾರೆ.
ಬಾಂಗ್ಲಾ ದೇಶದ ವಿರುದ್ಧ ರಾಜ್​ಕೋಟಲ್ಲಿ ನಡೆದ 2ನೇ ಟಿ20 ಮ್ಯಾಚ್​ನಲ್ಲಿ ಯುಜುವೇಂದ್ರ ಚಹಲ್ ಎಸೆದ 6 ನೇ ಓವರ್​​ನ ಮೂರನೇ ಎಸೆತವನ್ನು ಬಾರಿಸಲು ಲಿಟಲ್ ದಾಸ್ ಕ್ರೀಸ್ ಬಿಟ್ಟು ಮುನ್ನುಗ್ಗಿದ್ದರು. ಆದ್ರೆ, ಅದು ಬ್ಯಾಟ್ಸ್​ ಮನ್​ ದಾಸ್ ವಂಚಿಸಿ ಕೀಪರ್ ಪಂತ್ ಕೈ ಸೇರಿತ್ತು. ಆಗ ಪಂತ್ ಆರಾಮಾಗಿ ಸ್ಟಂಪ್ ಮಾಡ್ಬಹುದಿತ್ತು. ಆದ್ರೆ, ಬಾಲ್ ಕೈಗೆ ಸಿಕ್ಕಿದ ಕೂಡಲೇ ರಿಷಭ್ ವಿಕೆಟ್ ಮುಂದಿನಿಂದ ಸ್ಟಂಪ್ ಮಾಡಿದ್ರು. ನಿಯಮದಂತೆ ವಿಕೆಟ್​ ಮುಂದಿನಿಂದ ಸ್ಟಂಪ್ ಮಾಡುವಹಾಗಿಲ್ಲ. ಹಿಂದಿನಿಂದ ಸ್ಟಂಪ್​ ಮಾಡಿದರೆ ಮಾತ್ರ ಔಟ್.
ಹೀಗಾಗಿ ಪಂತ್ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ. ಧೋನಿ ಹಾಗೂ ಪಂತ್ ಸ್ಟಂಪ್ ಮಾಡುತ್ತಿರುವ ಫೋಟೋ ಹಾಕಿ ಶಾಲೆಗೆ ಹೋಗಿ ಕಲಿತರೆ ಧೋನಿಯಂತಾಗುತ್ತಾರೆ. ಆದರೆ ಆ್ಯಪ್ ಮೂಲಕ ಶಿಕ್ಷಣ ಪಡೆದರೆ ಪಂತ್ ರೀತಿ ಆಗುತ್ತಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಅಲ್ಲದೆ ಸಚಿನ್ ಜಾಗಕ್ಕೆ ವಿರಾಟ್ ಕೊಹ್ಲಿ ಬಂದ್ರು. ಧೋನಿ ಜಾಗಕ್ಕೆ ಈಗ ಯಾರೂ ಇಲ್ಲ ಎಂದು ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸ್ತಿದ್ದಾರೆ.

LEAVE A REPLY

Please enter your comment!
Please enter your name here