ಲವ್ವರ್ ಜೊತೆ ವ್ಹೀಲಿಂಗ್..ವೀಡಿಯೊ ವೈರಲ್..ಯುವಕ ಅಂದರ್​..!

0
139

ಲವ್ವರ್ ಜೊತೆ ವ್ಹೀಲಿಂಗ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ನೂರ್​​​ ಅಹಮ್ಮದ್​ ಅನ್ನೋ ಯುವಕ ಬಂಧಿತ. ಈತ ಯುವತಿಯೊಬ್ಬಳ ಜೊತೆ ನಂದಿಬೆಟ್ಟಕ್ಕೆ ತೆರಳುತ್ತಿರುವಾಗ ದೇವನಹಳ್ಳಿ ಮೈನ್ ರೋಡ್​ನಲ್ಲಿ ವ್ಹೀಲಿಂಗ್ ಮಾಡುತ್ತಾ ಸ್ಟಂಟ್​​ ಮಾಡಿದ್ದನು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಹೆಬ್ಬಾಳ ಪೊಲೀಸರು ಸುಮೋಟೋ ಕೇಸ್​ ದಾಖಲಿಸಿಕೊಂಡಿದ್ದರು. ಈಗ ಯುವಕನನ್ನು ಅರೆಸ್ಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here