ವಾಟ್ಸ್​ಆ್ಯಪ್​ನ ಈ ಹೊಸ ಫೀಚರ್ ಬಗ್ಗೆ ನಿಮ್ಗೆ ಗೊತ್ತಾ?

0
312

ವಾಟ್ಸ್​​ಆ್ಯಪ್​ ತನ್ನ ಗ್ರಾಹಕರಿಗೆ ಗುಡ್​ ನ್ಯೂಸ್ ಕೊಟ್ಟಿದೆ. ಒಂದೊಂದೇ ಹೊಸ ಹೊಸ ಫೀಚರ್​ಗಳನ್ನು ನೀಡ್ತಾ ಗ್ರಾಹಕರಿಗೆ ಮತ್ತಷ್ಟೂ ಫ್ರೆಂಡ್ಲಿಯಾಗ್ತಾ ಬರ್ತಿರೋ ಫೇಸ್​ಬುಕ್ ಒಡೆತನದ ವಾಟ್ಸ್​​ಆ್ಯಪ್ ಇದೀಗ ಮತ್ತೊಂದು ಹೊಸ ಫೀಚರ್​ ಅನ್ನು ಪರಿಚಯಿಸ್ತಾ ಇದೆ.
ಇದು ಸ್ಟೇಟಸ್​ಗೆ ಸಂಬಂಧಿಸಿದ ಫೀಚರ್ ಆಗಿದ್ದು, ಬಳಕೆದಾರರಿಗೆ ಖಂಡಿತಾ ಇಷ್ಟವಾಗಲಿದೆ. ಈ ಹೊ ಸ್ಟೇಟಸ್​ ಫೀಚರ್​ನಲ್ಲಿ ವಾಟ್ಸ್​ಆ್ಯಪ್ ಸ್ಟೇಟಸ್​ ಅನ್ನು ಫೇಸ್​ ಬುಕ್ ಒಡೆತದ ಎಲ್ಲಾ ಸೋಶಿಯಲ್ ಮೀಡಿಯಾ ಅಕೌಂಟ್​ ಗಳಿಗೆ ಶೇರ್ ಮಾಡ್ಬಹುದು.
ಸ್ಟೇಟಸ್​ನಲ್ಲಿ ಹಾಕಿರುವ ಟೆಕ್ಸ್ಟ್​, ಫೋಟೋ, ವಿಡಿಯೋಗಳನ್ನು ಫೇಸ್​ಬುಕ್. ಇನ್​​ಸ್ಟಾಗ್ರಾಮ್​, ಗೂಗಲ್​ ಫೋಟೋಸ್​ನಲ್ಲೂ ಶೇರ್​ ಮಾಡಬಹುದಾದ ಫೀಚರ್ ಇದು. ಇದು ಕೂಡ ಈಗ ಸ್ಟೇಟಸ್​ ಇರುವಂತೆ 24 ಗಂಟೆಗಳ ಕಾಲ ಉಳಿಯಲಿದ್ದು, ಬಳಿಕ ಅದಾಗಿಯೇ ಡಿಲೀಟ್​ ಆಗಲಿದೆ. ಸದ್ಯದಲ್ಲೇ ಅಪ್​ಡೇಟ್ ವರ್ಶನ್​ನಲ್ಲಿ ಈ ಫೀಚರ್ ಲಭ್ಯ.

LEAVE A REPLY

Please enter your comment!
Please enter your name here