ವಾಟ್ಸಾಪ್​ನಲ್ಲಿನ್ನು ಪೇಮೆಂಟ್, ಡಾಟಾ ಬಳಕೆ ಸೇರಿ ಹಲವು ಹೊಸ ಆಪ್ಶನ್ಸ್​..!

0
242

ಜನಪ್ರಿಯ ಸೋಶಿಯಲ್ ಮೀಡಿಯಾ ಆ್ಯಪ್ ವಾಟ್ಸಾಪ್​ ಸೆಟ್ಟಿಂಗ್​​ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಒಂದಷ್ಟು ಹೊಸ ಆಪ್ಶನ್​, ಮೆನುಗಳೊಂದಿಗೆ ವಾಟ್ಸಾಪ್​ ಲೇಔಟ್​​ ಸ್ವಲ್ಪ ಬದಲಾಗಿದೆ. ಇನ್ನಷ್ಟು ಆಯ್ಕೆಗಳನ್ನು ವಾಟ್ಸಾಪ್​ ಪ್ರಿಯರಿಗೆ ಒದಗಿಸುವ ನಿಟ್ಟಿನಲ್ಲಿ ಹಲವು ಟೂಲ್ಸ್​ ಐಕನ್​ಗಳನ್ನು ಸೇರಿಸಲಾಗಿದೆ. ಹಾಗೇ ಎಷ್ಟು ಡಾಟಾ ಬಳಸಿದ್ದೇವೆ ಹಾಗೂ ಸ್ಟೋರೇಜ್ ಎಷ್ಟಿದೆ ಎಂಬುದನ್ನು ವಾಟ್ಸಾಪ್​ ಪೇಜ್​ನಲ್ಲೇ ಕಾಣಬಹುದಾಗಿದೆ.  ವಾಟ್ಸಾಪ್​ ಸೆಟ್ಟಿಂಗ್​ನ ಮೊದಲ ಪುಟದಲ್ಲಿಯೇ ಪೇಮೆಂಟ್ ಮಾಡುವ ಆಪ್ಶನ್​ ಕೂಡಾ ಲಭ್ಯವಾಗಲಿದೆ. ಈ ಎಲ್ಲಾ ಬದಲಾವಣೆಗಳು ಆ್ಯಂಡ್ರೋಯ್ಡ್​ ಫೋನ್​ಗಳಿಗೆ ಮಾತ್ರ ಲಭ್ಯವಾಗಲಿದೆ. ಶೀಘ್ರದಲ್ಲಿಯೇ ಹೊಸ ಆಪ್ಶನ್​ಗಳು ಜನರನ್ನು ತಲುಪಲಿವೆ.

ಪೇಮೆಂಟ್ ಆಪ್ಶನ್: ಸೆಟ್ಟಿಂಗ್​ ಅಂತ ಕ್ಲಿಕ್​ ಮಾಡಿದ ಕೂಡಲೇ ನಿಮಗಿನ್ನು ಪೇಮೆಂಟ್ ಆಪ್ಶನ್ ಸಿಗಲಿದೆ. ಯಾವುದೇ ರೀತಿಯ ಹಣ ವರ್ಗಾವಣೆ ಮಾಡಲು ಸಾಧ್ಯವಾಗಲಿದೆ. ಹಾಗೇ ನಿಮ್ಮ ವಾಟ್ಸಾಪ್ ನಂಬರ್​ಗೆ ಜೋಡಣೆಯಾದ ಬ್ಯಾಂಕ್​ ಖಾತೆಯ ಟ್ರಾನ್ಸಾಕ್ಷನ್ ಮಾಹಿತಿಯೂ ವಾಟ್ಸಾಪ್​ನಲ್ಲೇ ಲಭ್ಯವಾಗಲಿದೆ. ಭಾರತದ ಹೊರಗೂ ಟ್ರಾನ್ಸಾಕ್ಷನ್​ ನಡೆಸುವುದಕ್ಕೂ ಅವಕಾಶ ಸಿಗಲಿದೆ.

ಡಾಟಾ ಬಳಕೆಯ ಮಾಹಿತಿ: ಈ ಹಿಂದೆ ವಾಟ್ಸಾಪ್ ಎಷ್ಟು ಡಾಟಾ ಉಪಯೋಗಿಸಿದೆ ಅಂತ ತಿಳಿಯೋಕೆ ಮೊಬೈಲ್​ನ ಸೆಟ್ಟಿಂಗ್​ ಆಪ್ಶನ್​ಗೆ ಹೋಗಬೇಕಿತ್ತು. ಆದರೆ ಇನ್ನು ವಾಟ್ಸಾಪ್​ ಸೆಟ್ಟಿಂಗ್​ನಲ್ಲಿಯೇ ಡಾಟಾ ಬಳಕೆ ಮಾಹಿತಿಯನ್ನೂ ಪಡೆಯಬಹುದು. ವಾಟ್ಸಾಪ್​ ಪೇಜ್​ನಲ್ಲಿಯೇ ನೆಟ್​ವರ್ಕ್​ ಯೂಸೇಜ್​ ಅನ್ನೋ ಆಪ್ಶನ್​ ನಿಮಗೆ ಲಭ್ಯವಾಗಲಿದೆ. ಇಲ್ಲಿ ಪ್ರತಿ ವಾಟ್ಸಾಪ್​ ಕಾಲ್, ಮೆಸೇಜ್​, ಫೋಟೋ, ಫೈಲ್​ಗಳು, ಮೂವಿಗಳು. ವಿಡಿಯೋಗಳಿಗೆ ಬಳಕೆಯಾದ ಡಾಟಾ ಮಾಹಿತಿ ಲಭ್ಯವಾಗಲಿದೆ.

ಡಬಲ್​ ವೆರಿಫಿಕೇಶನ್​: ವೈಯಕ್ತಿಕ ಮಾಹಿತಿಯ ಸುರಕ್ಷೆಗಾಗಿ ಡಬಲ್​ ವೇರಿಫಿಕೇಶನ್ ಆಪ್ಶನ್ ತರಲಾಗಿದೆ. ಈ ಮೊದಲು ಒಂದೇ ಸಲ ವೇರಿಫಿಕೇಶ್ ಮಾಡಿದರೆ ವಾಟ್ಸಾಪ್​ ಬಳಸಬಹುದಾಗಿತ್ತು. ಆದರೆ ಇನ್ನು ಮುಂದೆ ಕಡ್ಡಾಯವಾಗಿ ಎರಡು ಬಾರಿ ವೇರಿಫೈ ಮಾಡಲೇಬೇಕಾಗುತ್ತದೆ.

ಸ್ಟೋರೇಜ್ ಮಾಹಿತಿ: ಸಮಯ ಮತ್ತು ದಿನಾಂಕಗಳ ಸಮೇತ ನಿಮ್ಮ ಸ್ಟೋರೇಜ್​ ಮಾಹಿತಿ ವಾಟ್ಸಾಪ್​ ಪೇಜ್​ನಲ್ಲಿ ಲಭ್ಯವಾಗಲಿದೆ. ಅದರಲ್ಲಿ ನೀವು ಮಾಹಿತಿ ಕಳುಹಿಸಿದ ಮತ್ತು ಸ್ವೀಕರಿಸಿದ ಡಾಟಾ ತಿಳಿಯಬಹುದು.

LEAVE A REPLY

Please enter your comment!
Please enter your name here