Home ರಾಜ್ಯ ಬೆಂಗಳೂರು ನಿಷೇಧಾಜ್ಞೆ ಜಾರಿಯಲ್ಲಿ ಏನಿರುತ್ತೆ? ಏನಿರಲ್ಲ?

ನಿಷೇಧಾಜ್ಞೆ ಜಾರಿಯಲ್ಲಿ ಏನಿರುತ್ತೆ? ಏನಿರಲ್ಲ?

ಬೆಂಗಳೂರು: ಕೊರೋನಾ ಹಿನ್ನಲೆಯಲ್ಲಿ, ಹೊಸ ವರ್ಷಾಚರಣೆಗೆ ಸರ್ಕಾರವು ರಾಜ್ಯದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಮನೆಯಿಂದ ಹೊರಬರುವ ಮುನ್ನ ಎಚ್ಚರ. ಸಾರ್ವಜನಿಕ ಪ್ರದೇಶಗಳಲ್ಲಿ 5 ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಹೊರಗಡೆ ಬಂದರೆ ಎಲ್ಲ ಸಿಗ್ನಲ್ ಗಳಲ್ಲಿ ಪೊಲೀಸರು ತಪಾಸಣೆ ಮಾಡಿ ಬಿಡುತ್ತಾರೆ.

ಓಲಾ, ಉಬರ್, ಟ್ಯಾಕ್ಸಿ, ಲಾರಿ, ಬಸ್, ಮೆಟ್ರೋ, ಆಟೋ ಎಲ್ಲವೂ ಸೇರಿದಂತೆ ಎಮದಿನಂತೆ ಸಂಚಾರ ಇರುತ್ತದೆ.

ಹೊಟೇಲ್, ಬಾರ್, ರೆಸ್ಟೋರೆಂಟ್, ಪಬ್ ಟೈಮಿಂಗ್ಸ್ ಬಗ್ಗೆ ಗೊಂದಲ. ನಗರದ ಎಲ್ಲಾ ಪ್ಲೈ ಓವರ್ ಗಳು ಬಂದ್ ಆಗುತ್ತವೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ನಗರದಲ್ಲಿ 2500 ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 191 ಪಾಯಿಂಟ್ ಗಳಲ್ಲಿ ಪಿಕ್ ಅಪ್ ಸ್ಕ್ವಾಡ್ ಗಳ ನೇಮಕ. ಬೆಂಗಳೂರಿನ 668 ಸೆಕ್ಟರ್ ಗಳಲ್ಲಿ ಪೊಲೀಸರು ಇರುತ್ತಾರೆ. ನಗರದ 44 ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೇಮಕ ಮಾಡಲಾಗಿದೆ. ಮಫ್ತಿಯಲ್ಲಿ 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಮಧ್ಯಾಹ್ನ 12 ಗಂಟೆಯಿಂದ ಬೆಂಗಳೂರು ಬಂದ್‌. ನಾಳೆ ಬೆಳಗ್ಗೆ 6 ಗಂಟೆವರೆಗೂ ನಿಷೇಧಾಜ್ಞೆ. ಎಂಜಿ ರೋಡ್‌, ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ ರಸ್ತೆ,ಮ್ಯೂಸಿಯಂ ರಸ್ತೆ, ರೇಸ್‌ ಕೋರ್ಸ್‌, ರೆಸಿಡೆನ್ಸಿ ರಸ್ತೆ, ಟ್ರಿನಿಟಿ ರಸ್ತೆ. ಇನ್‌ಫೆಂಟ್ರಿ ರಸ್ತೆಯಲ್ಲಿ ಬಿಗಿ ಭದ್ರತೆ, ಬೆಂಗಳೂರಿನ ಎಲ್ಲಾ 44 ಫ್ಲೈ ಓವರ್‌ ಕ್ಲೋಸ್‌, ಫ್ಲೈ ಓವರ್​ಗಳ ಕೆಳಗೆ ಮಾತ್ರ ವಾಹನ ಸಂಚಾರ, ಡ್ರಾಗ್​ ರೇಸ್​, ಬೈಕ್​ ವ್ಹೀಲಿಂಗ್​ ನಿಷೇಧ

ಬೆಂಗಳೂರಿನಲ್ಲಿ ಪ್ರಮುಖ 44 ಫ್ಲೈ ಓವರ್‌ಗಳು ಬಂದ್‌. ನಗರದೊಳಗೆ, ನಗರದ ಹೊರಗಿನ ಫ್ಲೈ ಓವರ್‌ಗಳು ಕ್ಲೋಸ್, ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಮೈಕೋ ಲೇಔಟ್‌ ಏರ್‌ಪೋರ್ಟ್‌, ವೈಟ್‌ಫೀಲ್ಡ್‌, ಹೆಚ್‌ಎಸ್‌ಆರ್‌ ಲೇಔಟ್‌, ಹಲಸೂರು, ಕೆ.ಆರ್.ಪುರಂ, ಪುಲಕೇಶಿನಗರ, ಬಾಣವಾಸಡಿ, ಆಡುಗೋಡಿ, ಮೈಸೂರು ರಸ್ತೆ, ಬಸವನಗಡಿ,ಜಯನಗರ, ಮಲ್ಲೇಶ್ವರಂ, ಬನಶಂಕರಿ, ಕೆಂಗೇರಿ ಯಶವಂತಪುರ, ಹೆಬ್ಬಾಳ,  ಪೀಣ್ಯ  ಪ್ರದೇಶಗಳಲ್ಲಿರುವ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.  

 

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments