Homeದೇಶ-ವಿದೇಶಸಿಯಾಚಿನ್​ನಲ್ಲಿ ಹೇಗಿದೆ ಗೊತ್ತಾ ಯೋಧರ ಪರಿಸ್ಥಿತಿ? ಜ್ಯೂಸ್ ಇಟ್ಟಿಗೆ ಆಗುತ್ತೆ, ಮೊಟ್ಟೆ ಕಲ್ಲಾಗುತ್ತೆ..!

ಸಿಯಾಚಿನ್​ನಲ್ಲಿ ಹೇಗಿದೆ ಗೊತ್ತಾ ಯೋಧರ ಪರಿಸ್ಥಿತಿ? ಜ್ಯೂಸ್ ಇಟ್ಟಿಗೆ ಆಗುತ್ತೆ, ಮೊಟ್ಟೆ ಕಲ್ಲಾಗುತ್ತೆ..!

ಅದು ಜಗತ್ತಿನ ಅತೀ ಎತ್ತರದಲ್ಲಿರುವ ಯುದ್ಧಭೂಮಿ. ಸಮುದ್ರ ಮಟ್ಟದಿಂದ ಬರೋಬ್ಬರಿ 22 ಸಾವಿರ ಎತ್ತರದಲ್ಲಿರುವ ಆ ಪ್ರದೇಶದಲ್ಲಿ ದೇಶ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರೋ ಯೋಧರ ಜೀವನದ ಬಗ್ಗೆ ನಾವು-ನೀವು ಯಾವತ್ತಾದ್ರು ಯೋಚ್ನೆ ಮಾಡಿದ್ದೀವಾ? ಅಲ್ಲಿ ಶತ್ರು ರಾಷ್ಟ್ರಗಳ ದಾಳಿಯಿಂದ ಯೋಧರು ಹುತಾತ್ಮರಾಗೋದಕ್ಕಿಂತ ಹವಮಾನ ವೈಪರಿತ್ಯದಿಂದ ಹುತಾತ್ಮರಾಗುವುದೇ ಹೆಚ್ಚು..!
ಇದು ಸಿಯಾಚಿನ್​ನ ಕಥೆ. ಅಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಯೋಧರ ಜೀವನ ಹೇಗಿದೆ ಗೊತ್ತಾ? ಅವರು ಎದುರಿಸುತ್ತಿರೋ ಸವಾಲುಗಳೇನು? ಮೈ ಕೊರೆಯುವ ಹಿಮದ ನಡುವೆ ಅವರ ಪರಿಸ್ಥಿತಿ ಬಗ್ಗೆ ತಿಳಿಯಲೇ ಬೇಕು. ಈ ಬಗ್ಗೆ ತಿಳಿದ್ರೆ ಯೋಧರ ಮೇಲೆ ಗೌರವ, ಹೆಮ್ಮೆ ಮತ್ತಷ್ಟು ಹೆಚ್ಚುತ್ತೆ. ಯೋಧರ ಬಗ್ಗೆ ಲಘುವಾಗಿ ಮಾತಾಡೋರು ಈ ಬಗ್ಗೆ ತಿಳಿಯಲೇ ಬೇಕು. ಯೋಧರ ದೇಶಪ್ರೇಮ, ದೇಶ ಸೇವೆಗಾಗಿ ಅವರ ಸಂಕಲ್ಪಕ್ಕೊಂದು ಸಲಾಂ.
ನಿಮ್ಗೆ ಗೊತ್ತಾ? ಸಿಯಾಚಿನ್​ನಲ್ಲಿ ಬೆಳಗ್ಗೆ ಸರಾಸರಿ ಮೈನೆಸ್​​ 30 ಡಿಗ್ರಿ ಉಷ್ಣತೆ ಇರುತ್ತದೆ. ರಾತ್ರಿ ವೇಳೆ ಮೈನಸ್​ 55 ಡಿಗ್ರಿ ಸೆಲ್ಸಿಯಸ್​ ಇರುತ್ತದೆ..! ಕೆಲವೊಂದ್ಸಲ ಇದು – 60 ಡಿಗ್ರಿ ಸೆಲ್ಸಿಯಸ್​ ತಲುಪಿದ್ರೂ ತಲುಪಬಹುದು. ಇನ್ನು ಆಮ್ಲಜನಕದ ಬಗ್ಗೆ ಹೇಳೋದಾದ್ರೆ, ನಮ್ಗೆ-ನಿಮ್ಗೆ ಉಸಿರಾಟಕ್ಕೆ ಸಿಗ್ತಾ ಇದೆಯಲ್ಲಾ ಆ ಆಮ್ಲಜನಕದ ಶೇ.10ರಷ್ಟು ಆಮ್ಲಜನಕ ಮಾತ್ರ ಅಲ್ಲಿ ಲಭ್ಯ..! ಹೀಗೆ ಉಸಿರಾಡಲು ಕಷ್ಟವಿರುವ ಪರಿಸ್ಥಿತಿಯಲ್ಲಿ ಯೋಧರು ದೇಶ ರಕ್ಷಣೆಯಲ್ಲಿ ನಿರತರಾಗಿದ್ದಾರೆ.
ಖಂಡಿತಾ ಅಚ್ಚರಿಯ ಜೊತೆಗೆ ಆತಂಕದ ವಿಷಯವೂ ಹೌದು, ಅಲ್ಲಿ ಕೇವಲ ಹತ್ತೇ ಹತ್ತು ನಿಮಿಷ ನಡೆದ್ರೆ ಸುಧಾರಿಸಿಕೊಳ್ಳೋಕೆ ಕಮ್ಮಿ ಅಂದ್ರು ಅರ್ಧಗಂಟೆ ಬೇಕಾಗುತ್ತೆ..! ಶ್ವಾಸಕೋಶ ಮತ್ತು ಮೆದುಳಿಗೆ ಸಂಬಂಧಿಸಿದ ಹೈ ಆಲ್ಟಿಟ್ಯೂಡ್​​ ಪಲ್ಮನರೀ ಒಡಿಮಾಗೆ ತುತ್ತಾಗೋ ಸಾಧ್ಯತೆಯೂ ಅಲ್ಲಿ ಹೆಚ್ಚಿರುತ್ತೆ..! ಇದಿಷ್ಟೇ ಅಲ್ಲ, ಹಿಮಪಾತದಿಂದ ಗಾಯಗಳೂ ಆಗುತ್ತವೆ, ಸಣ್ಣ-ಪುಟ್ಟ ಗಾಯಗಳಾದ್ರೂ ಸುಲಭದಲ್ಲಿ ಸುಧಾರಿಸಿಕೊಳ್ಳೋದು ಸಾಧ್ಯವಿಲ್ಲ. ಪ್ರೋಸ್ಟ್​ ಬೈಟ್​ ಗೆ ಒಳಗಾಗಿ ಗ್ಯಾಂಗ್ರೀನ್​ಗೆ ತುತ್ತಾಗೋ ಸಾಧ್ಯತೆಯೂ ಉಂಟು.
ಇದೀಗ ಮೂವರು ಯೋಧರು ಅಲ್ಲಿನ ಪರಿಸ್ಥಿತಿಯನ್ನು ವೀಡಿಯೊ ಸಮೇತ ವಿವರಿಸಿದ್ದಾರೆ. ನಿಜಕ್ಕೂ ಇದು ಮನಕಲುಕುತ್ತೆ. ಜ್ಯೂಸ್​ ಪ್ಯಾಕೆಟ್​ ಓಪನ್​ ಮಾಡಿದ್ರೆ ಜ್ಯೂಸ್​ ಇಟ್ಟಿಗೆಯಂತಾಗಿರುತ್ತೆ..! ಅದನ್ನು ಸುತ್ತಿಗೆಯಿಂದ ಒಡೆದ್ರು ಪುಡಿ ಆಗೋದು ಕಷ್ಟ.! ಮೊಟ್ಟೆ, ಟೊಮ್ಯಾಟೋ, ಆಲೂಗಡ್ಡೆ ಕೂಡ ಕಲ್ಲಾಗಿರುತ್ತವೆ. ಅವುಗಳನ್ನು ಒಡೆಯಲು ಕೂಡ ಸುತ್ತಿಗೆಯ ಬಲವಾದ ಪೆಟ್ಟು ಬೇಕು. ಇದನ್ನು ಯೋಧರು ವೀಡಿಯೊ ಮೂಲಕ ತೋರಿಸಿದ್ದಾರೆ. ಕುಡಿಯು ಬೇಕಾದ ಜ್ಯೂಸ್ ಅನ್ನು ಪುಡಿ ಮಾಡಿಕೊಂಡು ತಿನ್ನುವ ಪರಿಸ್ಥಿತಿ, ಮೊಟ್ಟೆ, ಟೊಮ್ಯಾಟೋವನ್ನು ಸುತ್ತಿಗೆಯಿಂದ ಚೂರು ಮಾರಿ ತಿನ್ನೋ ಸ್ಥಿತಿ ಅಂದ್ರೆ ನೀವೇ ಲೆಕ್ಕಾಹಾಕಿ ನಮ್ಮ ಯೋಧರ ಜೀವನ ಹೇಗಿದೆ ಅಂತ.

LEAVE A REPLY

Please enter your comment!
Please enter your name here

- Advertisment -

Most Popular

Recent Comments