Monday, January 17, 2022
Powertv Logo
HomePower Specialಏನಿದು ಭಾರತ ಗೌರವ ಯೋಜನೆ

ಏನಿದು ಭಾರತ ಗೌರವ ಯೋಜನೆ

ಭಾರತದ ಪ್ರವಾಸೋದ್ಯಮದ ಅಗಾಧವಾದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಲುವಾಗಿ, ರೈಲ್ವೇ ಸಚಿವರು ‘ಭಾರತ್ ಗೌರವ’ (Bharat Gaurav) ಯೋಜನೆಯನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ಖಾಸಗಿ ಅಥವಾ ಸರ್ಕಾರಿ ಸ್ವಾಮ್ಯದ ನಿರ್ವಾಹಕರು ‘ರಾಮಾಯಣ ಎಕ್ಸ್‌ಪ್ರೆಸ್’ ಮಾದರಿಯಲ್ಲಿ ‘ಥೀಮ್ ಆಧಾರಿತ ಪ್ರವಾಸಿ’ ‘ಸರ್ಕ್ಯೂಟ್ ರೈಲುಗಳನ್ನು’ ಓಡಿಸಬಹುದಾಗಿದೆ. ಸಿಖ್ ಸಂಸ್ಕೃತಿಯ ಪ್ರಮುಖ ಸ್ಥಳಗಳನ್ನು ಕವರ್ ಮಾಡಲು ಗುರು ಕೃಪಾ ರೈಲು, ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ರಾಮಾಯಣ ರೈಲು ಮುಂತಾದ ಥೀಮ್‌ಗಳು ಮತ್ತು ಸರ್ಕ್ಯೂಟ್‌ಗಳನ್ನು ನಿಗದಿಪಡಿಸಲು ಸೇವಾ ಪೂರೈಕೆದಾರರು ಮುಕ್ತರಾಗಿರುತ್ತಾರೆ.

ಯೋಜನೆಯ ಪ್ರಮುಖ ಅಂಶಗಳು:

1. ಯಾವುದೇ ವ್ಯಕ್ತಿ, ಕಂಪನಿ, ಸಮಾಜ, ಟ್ರಸ್ಟ್, ಜಂಟಿ ಉದ್ಯಮ ಅಥವಾ ಸಂಘವು ಸೇವಾ ಪೂರೈಕೆದಾರರಾಗಿ ಭಾಗವಹಿಸಬಹುದು.

2. ‘ಸೇವಾ ಪೂರೈಕೆದಾರರು’ ಪ್ರವಾಸಿಗರಿಗೆ ರೈಲು ಪ್ರಯಾಣ, ಹೋಟೆಲ್ ವಸತಿ ಮತ್ತು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಯ ವ್ಯವಸ್ಥೆ, ಐತಿಹಾಸಿಕ/ಪರಂಪರೆಯ ತಾಣಗಳಿಗೆ ಭೇಟಿ, ಪ್ರವಾಸ ಮಾರ್ಗದರ್ಶಿಗಳು, ಇತ್ಯಾದಿ ಸೇರಿದಂತೆ ಎಲ್ಲವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸುತ್ತಾರೆ.

3. ಒದಗಿಸಿದ ಸೌಲಭ್ಯಗಳ ಆಧಾರದ ಮೇಲೆ ಈ ಪ್ಯಾಕೇಜ್‌ಗಳ ಬೆಲೆಯನ್ನು ನಿಗದಿಪಡಿಸಲು ‘ಸೇವಾ ಪೂರೈಕೆದಾರರು’ ಸಂಪೂರ್ಣವಾಗಿ ಮುಕ್ತರಾಗಿರುತ್ತಾರೆ.

4. ಸೇವಾ ಪೂರೈಕೆದಾರರಿಗೆ ಥೀಮ್ ಆಧಾರಿತವಾಗಿ ಕೋಚ್‌ಗಳ ಒಳಾಂಗಣವನ್ನು ವಿನ್ಯಾಸಗೊಳಿಸಲು ಮತ್ತು ರೈಲಿನ ಒಳಗೆ ಮತ್ತು ಹೊರಗೆ ಬ್ರ್ಯಾಂಡಿಂಗ್ ಅಥವಾ ಜಾಹೀರಾತನ್ನು ಪ್ರದರ್ಶಿಸಲು ಸ್ವಾತಂತ್ರ್ಯವನ್ನು ನೀಡಲಾಗುತ್ತದೆ.

ಈ ರೀತಿಯ ಯೋಜನೆಯ ಪ್ರಯೋಜನಗಳೇನು..??

ಈ ರೈಲುಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ತಾಣಗಳನ್ನು ಭಾರತ ಮತ್ತು ಪ್ರಪಂಚದ ಜನರಿಗೆ ತೋರಿಸುವ ದೂರದೃಷ್ಟಿಯನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಭಾರತದ ವಿಶಾಲವಾದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಟ್ಯಾಪ್ ಮಾಡಲು ಸಹಾಯಕ ವಾಗುತ್ತದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments