ವಿಂಡೀಸ್​ ವಿರುದ್ಧ ಸರಣಿ ಗೆದ್ದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ನಲ್ಲಿ ನಂಬರ್​ 1..!

0
85

ಕಿಂಗ್​ಸ್ಟನ್ : ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 257ರನ್​ಗಳ ಗೆಲುವು ಸಾಧಿಸುವುದರೊಂದಿಗೆ ಟೆಸ್ಟ್​ ಸರಣಿಯನ್ನೂ ತನ್ನದಾಗಿಸಿಕೊಂಡಿತು. ಕೆರಬಿಯನ್ನರನ್ನು ಎರಡೂ ಟೆಸ್ಟ್​ನಲ್ಲಿ ಸೋಲಿಸಿದ ವಿರಾಟ್ ಕೊಹ್ಲಿ ಪಡೆ ಸದ್ಯ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​ನಲ್ಲಿ ನಂಬರ್ 1 ಸ್ಥಾನದಲ್ಲಿದೆ.
ಭಾರತ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ವಿಂಡೀಸ್​ಗೆ ಒಟ್ಟು 463ರನ್​ಗಳ ಗುರಿ ನೀಡಿತ್ತು. ಟಾರ್ಗೆಟ್ ಬೆನ್ನಟ್ಟಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳ್ಕೊಂಡು 45ರನ್​ಗಳಿಸಿತ್ತು. 4ನೇ ದಿನದ ಆಟದಲ್ಲಿಯೂ ವಿಂಡೀಸ್​ ಬ್ಯಾಟ್ಸ್​ಮನ್​ಗಳ ವೈಪಲ್ಯ ಮುಂದುವರೆಯಿತು. ವಿರಾಟ್ ಪಡೆಯ ದಾಳಿಗೆ ಕೆರಬಿಯನ್ನರು ನಡುಗಿ ಹೋದ್ರು. ಕೇವಲ 210ರನ್​ ಮಾಡುವಷ್ಟರಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡ ವಿಂಡೀಸ್ ಭಾರತದ ಎದರು ಮಂಡಿಯೂರಿತು.
ಟಿ20, ಒಡಿಐನಲ್ಲೂ ಸೋಲುಂಡಿದ್ದ ಅತಿಥೇಯ ವೆಸ್ಟ್ ಇಂಡೀಸ್ ಟೆಸ್ಟ್​ನಲ್ಲೂ ತಲೆಬಾಗಿತು.

LEAVE A REPLY

Please enter your comment!
Please enter your name here