ಇಂಡೋ-ವಿಂಡೀಸ್​ ಒಡಿಐ ಫೈಟ್ – ಟಿ20 ಸೋಲಿಗೆ ಸೇಡು ತೀರಿಸಿಕೊಳ್ಳೋ ತವಕದಲ್ಲಿ ಕೆರಬಿಯನ್ನರು..!

0
225

ಗಯಾನ : ವರ್ಲ್ಡ್​​ಕಪ್​​​​​​​ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ 3 ಮ್ಯಾಚ್​ಗಳ ಟಿ20 ಸರಣಿಯನ್ನು ಕ್ಲೀನ್​ ಸ್ವೀಪ್ ಮಾಡಿದ್ದು, ಒಡಿಐಗೆ ಅಣಿಯಾಗಿದೆ. ಮೂರು ಮ್ಯಾಚ್​ಗಳ ಒಡಿಐ ಸೀರಿಸ್​ಗೆ ಇಂದು ಚಾಲನೆ ಸಿಗ್ತಿದ್ದು, ವೆಸ್ಟ್​ ಇಂಡೀಸ್​ ಟಿ20 ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.
ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಇಂದು ಫಸ್ಟ್ ಒಡಿಐ ನಡೆಯಲಿದ್ದು, ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಆರಂಭಿಸುವುದು ಖಚಿತವೇ. ಆದರೆ, ಟಿ20ಯಲ್ಲಿ ಮೂರೂ ಮ್ಯಾಚ್​ಗಳಲ್ಲಿ ಫೇಲ್ಯೂರ್ ಆಗಿರುವ ಧವನ್ ಅವರನ್ನು ಅಕಸ್ಮಾರ್ ಹೊರಗಿಟ್ಟರೆ ವಿಶ್ವಕಪ್​ನಂತೆ ಇಲ್ಲಿಯೂ ಕನ್ನಡಿಗ ಕೆ.ಎಲ್​ ರಾಹುಲ್​ ಹೆಗಲಿಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಲಾಗುತ್ತದೆ. ಮೂರನೇ ಕ್ರಮಾಂಕಕ್ಕೆ ಕ್ಯಾಪ್ಟನ್ ಕೊಹ್ಲಿ ಫಿಕ್ಸ್. ಶಿಖರ್ ಧವನ್ ತಂಡದಲ್ಲಿದ್ದರೆ ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್ ಆಡಲಿದ್ದಾರೆ. ಇಲ್ಲವೇ ಇನ್ನೋರ್ವ ಕನ್ನಡಿಗ ಮನೀಷ್ ಪಾಂಡೆ ಆಡಲಿದ್ದಾರೆ. 5ನೇ ಕ್ರಮಾಂಕದಲ್ಲಿ ರಿಷಭ್​ ಪಂತ್ ಆಡಲಿದ್ದಾರೆ. ಕೊನೆಯ ಟಿ20ಯಲ್ಲಿ ಫಾರ್ಮ್​ ಗೆ ಮರಳಿರುವ ಪಂತ್ ಏಕದಿನದಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟುವ ವಿಶ್ವಾಸದಲ್ಲಿದ್ದಾರೆ. ಇನ್ನುಳಿದಂತೆ ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಭುನೇಶ್ವರ್​ ಕುಮಾರ್ ಆಡುವ 11ರ ಬಳಗದಲ್ಲಿರುವುದು ಕನ್ಫರ್ಮ್​.
ಗೇಲ್​ ಭಾರತದೆದುರಿನ ಸರಣಿ ಬಳಿಕ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್​ ಒಡಿಐಯನ್ನು ಗೆದ್ದು ತಂಡದ ಸ್ಫೋಟಕ ಬ್ಯಾಟ್ಸ್​ಮನ್​​ ಕ್ರಿಸ್ ಗೇಲ್​ಗೆ ವಿದಾಯದ ಉಡುಗೊರೆ ನೀಡಬೇಕೆಂದಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7ಗಂಟೆಗೆ ಪಂದ್ಯ ಆರಂಭವಾಗಲಿದೆ. 

LEAVE A REPLY

Please enter your comment!
Please enter your name here