Tuesday, September 27, 2022
Powertv Logo
Homeದೇಶಪಕ್ಕದಲ್ಲೇ ದುಡ್ಡಿದ್ರೂ ಕಳ್ಳರು ಕದ್ದಿದ್ದು ಈರುಳ್ಳಿ ಮಾತ್ರ!

ಪಕ್ಕದಲ್ಲೇ ದುಡ್ಡಿದ್ರೂ ಕಳ್ಳರು ಕದ್ದಿದ್ದು ಈರುಳ್ಳಿ ಮಾತ್ರ!

ಕೊಲ್ಕತ್ತಾ: ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಿರೋ ಈರುಳ್ಳಿ ಬೆಲೆ ನೂರರ ಗಡಿ ದಾಟಿದೆ. ಇದರ ಬೆನ್ನಲ್ಲೇ ಕಳ್ಳಕಾಕರ ಹಾವಳಿಯು ಹೆಚ್ಚುತ್ತಿದೆ. ಪಶ್ಚಿಮ ಬಂಗಾಳದ ಮಿಡ್ನಾಪುರ್ ನಲ್ಲಿ  ಹಣವನ್ನು ಬಿಟ್ಟು ಈರುಳ್ಳಿಯನ್ನು ಕದ್ದೊಯ್ದ  ಘಟನೆಯೊಂದು ನಡೆದಿದೆ.

ದಿನದಿಂದ ದಿನಕ್ಕೆ  ಈರುಳ್ಳಿ ಬೆಲೆ  ಗಗನಕ್ಕೇರುತ್ತಿದ್ದು, 1 ಕೆಜಿ ಈರುಳ್ಳಿ ಬೆಲೆ ಕನಿಷ್ಠ 100 ರೂ ಆಗಿದೆ. ಇದರ ಹಿನ್ನೆಲೆಯಲ್ಲಿ  ಮಿಡ್ನಾಪುರ್ ಜಿಲ್ಲೆಯ ಸುತಹತ ನಗರದ ಅಕ್ಷಯ್ ದಾಸ್ ಎಂಬುವವರ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಸುಮಾರು 50,000 ರೂ ಮೌಲ್ಯದ ಈರುಳ್ಳಿ ಕಳ್ಳತನವಾಗಿದೆ. ಆದ್ರೆ, ಅಚ್ಚರಿ ಅಂದ್ರೆ ಕಳ್ಳರು ಅಲ್ಲೇ ಇದ್ದ ದುಡ್ಡನ್ನು ಮಾತ್ರ ಮುಟ್ಟಿಲ್ಲ! 

ಅಕ್ಷಯ್ ದಾಸ್ ಮಂಗಳವಾರ ಮುಂಜಾನೆ ಅಂಗಡಿಗೆ ಬಂದು ನೋಡಿದಾಗ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದವು.  ತಕ್ಷಣ ಗಲ್ಲಾಪೆಟ್ಟಿಗೆಯನ್ನು ನೋಡಿದಾಗ ಹಣ ಹಾಗೆಯೇ ಇತ್ತು.!!! ಇದರಿಂದ ಸ್ವತಃ ಅಕ್ಷಯ್ ದಾಸ್ ಆಶ್ಚರ್ಯಚಕಿತರಾಗಿದ್ದಾರೆ. 

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments